ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಬಹಳ ಕಷ್ಟಪಟ್ಟು ಶಾಲಾ ದಿನಗಳಲ್ಲಿ ಶಿಕ್ಷಣ ನಡೆಸಿದವ ಎಂದು ತನ್ನ ಕಷ್ಟದ ದಿನಗಳನ್ನು ನೆನೆದ ಪುತ್ತೂರು ಶಾಸಕ ಅಶೋಕ್ ರೈ

Twitter
Facebook
LinkedIn
WhatsApp
Ashok Rai

ಇತ್ತೀಚಿಗೆ ಶಾಲಾ ಕಾರ್ಯಕ್ರಮದಲ್ಲಿ ಪುತ್ತೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಅಶೋಕ್ ರೈ ಅವರು ಮಾತನಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಶಾಲೆಯ ಸಭಾ ಕಾರ್ಯಕ್ರಮದಲ್ಲಿ ತನ್ನ ಜೀವನದ ಕಷ್ಟದ ದಾರಿಯಲ್ಲಿ ಹೇಗೆ ಈ ಹಂತಕ್ಕೆ ಬಂದು ತಲುಪಿದ್ದೇನೆ ಎಂದು ವಿವರವಾಗಿ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ನಿಜಕ್ಕೂ ಅವರ ಮುಗ್ದತೆ, ಸಾಧನೆಯ ಬಗ್ಗೆ ಹೆಮ್ಮೆ ಅನಿಸುತ್ತದೆ. ವಿಡಿಯೋದಲ್ಲಿ ಏನೆಲ್ಲಾ ಮಾತನಾಡಿದರು ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ…

ನಾನು ಹಣ ಇದ್ದು ಕಲಿತವನಲ್ಲ, ಸಣ್ಣವನಿರುವಾಗ ನಾಲ್ಕೈದು ವರ್ಷ ದನದ ಕೊಟ್ಟಿಗೆ ಅಂತಹ ರಚನೆಯ ಸಣ್ಣ ಮನೆಯಲ್ಲಿ ಜೀವನ ಸಾಗಿಸಿದ್ದೇನೆ. ಕೋಡಿ ಪಾಳ್ಯದಲ್ಲಿ ಕಲಿತು ನಂತರ ಪಿಯುಸಿ ವಿದ್ಯಾಭ್ಯಾಸವನ್ನು ಜೂನಿಯರ್ ಕಾಲೇಜಿನಲ್ಲಿ ಕಲಿತಿದ್ದೆ. ಆ ಸಮಯದಲ್ಲಿ ಸ್ವಲ್ಪ ತುಂಟನಾಗಿದ್ದೆ ನಾನು. ಪಿಯುಸಿ ವಿದ್ಯಾಭ್ಯಾಸ ಮುಗಿದ ನಂತರ ಉನ್ನತ ಶಿಕ್ಷಣಕ್ಕಾಗಿ ಮೈಸೂರಿಗೆ ಹೋದೆ ಎಂದರು, ವಿದ್ಯಾಭ್ಯಾಸದ ಸಮಯದಲ್ಲಿ ನಾವು ಒಂದು ಬೆಂಚಿನಲ್ಲಿ ಐದು ಮಂದಿ ಇದ್ದೆವು ಅವರು ನನ್ನನ್ನು ಅಶೋಕ್ ರೈ ಫೈಲ್ ನಾವು ಪಾಸ್ ಎಂದು ಅನುಕುಸುತಿದ್ದರು ಆದರೆ ಕೊನೆಯಲ್ಲಿ ಕೇವಲ ಇಬ್ಬರೂ ಪಾಸಾಗಿದ್ದೆವು ಅದರಲ್ಲಿ ನಾನು ಒಬ್ಬ ಎಂದು ಹೆಮ್ಮೆಯಿಂದ ಹೇಳಿಕೊಂಡರು

ಜೀವನದಲ್ಲಿ ಕಷ್ಟ ಪಡಬೇಕು ಸುಲಭದಲ್ಲಿ ಸಾಧಿಸಿದರೆ ಅದಕ್ಕೆ ಏನು ವ್ಯಾಲ್ಯೂ ಇರುವುದಿಲ್ಲ ಎಂದರು. ಒಬ್ಬ ವ್ಯಕ್ತಿ ದೊಡ್ಡ ವ್ಯಕ್ತಿಯಾಗಲು ಕಷ್ಟ ಪಟ್ಟರೆ ಮಾತ್ರ ಸಾಧ್ಯ. ತಂದೆ ತಾಯಿಯ ದುಡ್ಡಿನಲ್ಲಿ ಬದುಕುತ್ತಿದ್ದರೆ ಅವ ದೊಡ್ಡ ವ್ಯಕ್ತಿಯಾಗಲು ಸಾಧ್ಯವಿಲ್ಲ ಅವನೊಂದು ಹಂತದಲ್ಲಿ ಇರುತ್ತಾನೆ ಅಷ್ಟೇ. ನಾನು ಕಾಲೇಜ್ ವಿದ್ಯಾಭ್ಯಾಸ ಓದುತ್ತಿದ್ದಾಗ ಸೈಕಲಿನಲ್ಲಿ ಲೈನ್ ಸೇಲ್ಸ್ ಗೆ ಹೋಗುತ್ತಿದ್ದೆ, ಪ್ರತಿಯೊಂದು ಅಂಗಡಿ ಅಂಗಡಿಗಳಿಗೆ ಹೋಗಿ ಜ್ಯೂಸ್ ಉತ್ಪನ್ನಗಳನ್ನು ಮಾರಾಟ ಮಾಡುತಿದ್ದೆ. ಸಣ್ಣ ಕೊಠಡಿಯಲ್ಲಿ ಇರುತ್ತಿದ್ದೆ, ಸ್ವತಃ ಅಡುಗೆ ಮಾಡಿ ಅದೇ ಕೊಠಡಿಯಲ್ಲಿ ಮಲಗುತ್ತಿದ್ದೆ. ಬೆಳಿಗ್ಗೆ 6 ಗಂಟೆಗೆ ಎದ್ದು ಉತ್ಪನ್ನಗಳನ್ನು ಕೆಲ ಬಿಲ್ಡಿಂಗ್ ಗಳಿಗೆ ಮಾರಾಟ ಮಾಡಿ ಬರುತ್ತಿದ್ದೆ ನಂತರ ಕಾಲೇಜಿಗೆ ಹೋಗಿ ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಕೊಠಡಿಗೆ ಬಂದು ಸಂಜೆಯ ವ್ಯಾಪಾರಕ್ಕೆ ತಯಾರಿಯನ್ನು ಮಾಡುತ್ತಿದ್ದೆ.

ಸಂಜೆ ವೇಳೆ ಉತ್ಪನ್ನಗಳನ್ನು ಮಾರಾಟ ಮಾಡುವಾಗ ಕೆಲವು ಬೇಕರಿಯಲ್ಲಿ ಕಾಲೇಜಿನ ಹುಡುಗಿಯರು ಇರುತ್ತಿದ್ದರು ಈ ಸಂದರ್ಭದಲ್ಲಿ ಅವರು ಅಲ್ಲಿಂದ ಹೋಗುವವರೆಗೂ ನಾನು ಕಾಯುತ್ತಿದ್ದೆ, ಏಕೆಂದರೆ ನನಗೆ ನಾಚಿಕೆಯಾಗುತ್ತಿತ್ತು ಅವರು ಅಲ್ಲಿಂದ ಬೇಗ ಹೋಗ್ತಾರ? ಮಾತಾಡಿಕೊಂಡು ತುಂಬಾ ಸಮಯದ ನಂತರ ಹೋಗ್ತಿದ್ದರು… ಅದರ ನಂತರ ತಾನು ಅಂಗಡಿಗೆ ವಸ್ತುಗಳನ್ನು ಪೂರೈಸುತ್ತಿದ್ದೆ. ಮೈಸೂರಿನಲ್ಲಿ ಎಲ್ಲಾ ಬೇಕರಿಗಳ ಹೆಸರು ವೆಂಕಟೇಶ್ವರ ಎಂದು ಇರುತ್ತಿತ್ತು. ಈ ರೀತಿಯಲ್ಲಿ ಕಷ್ಟದಲ್ಲಿ ಜೀವನ ಸಾಗಿಸುತ್ತಾ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಉದ್ಯಮವನ್ನು ಸ್ಥಾಪಿಸಿದೆ. ಈ ಸಮಯದಲ್ಲಿ ತಿಂಗಳಿಗೆ 2 ಕೋಟಿಯಷ್ಟು ವ್ಯವಹಾರವನ್ನು ಮಾಡಿದ್ದೇನೆ.

ಅಶೋಕ್ ರೈ ಅವರ ರಾಜಕೀಯ ಜೀವನ:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದ ಅಶೋಕ್ ರೈ, ಭಾರತೀಯ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು. ಪಕ್ಷದಲ್ಲಿ ಜಿಲ್ಲಾ ಸ್ತರದ ಜವಾಬ್ದಾರಿಗಳನ್ನೂ ನಿಭಾಯಿಸಿದ್ದ ಇವರು, ಡಿ. ವಿ. ಸದಾನಂದ ಗೌಡ, ನಳಿನ್ ಕುಮಾರ್ ಕಟೀಲು ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದರು. 2023ರಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿಯಾಗಿಯೂ ಆಯ್ಕೆಯಾದರು. ಈ ಚುನಾವಣೆಯಲ್ಲಿ ಅವರು ಜಯಗಳಿಸಿ, ಮೊದಲ ಬಾರಿಗೆ ಶಾಸಕರಾಗಿ ಚುನಾಯಿತರಾದರು.

ಸಮಾಜ ಸೇವೆ


ಓರ್ವ ಯಶಸ್ವಿ ಉದ್ಯಮಿಯಾಗಿರುವ ಅಶೋಕ್ ಕುಮಾರ್ ರೈ, ಗಳಿಸಿದ ಆದಾಯದಲ್ಲಿ ಒಂದಂಶವನ್ನು ಸಮಾಜಕ್ಕೆ ಅರ್ಪಿಸಲು 2013ರಲ್ಲಿ ರೈ ಎಸ್ಟೇಟ್ಸ್‌ ಎಜುಕೇಶನಲ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ ಅನ್ನು ಸ್ಥಾಪಿಸಿದರು. ಅದರ ಮೂಲಕ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ವಿಧವೆಯರಿಗೆ, ನಿರುದ್ಯೋಗಿಗಳಿಗೆ, ಅನಾರೋಗ್ಯ ಪೀಡಿತರಿಗೆ, ಅಶಕ್ತರಿಗೆ ಹೀಗೆ ಸಾವಿರಾರು ಕುಟುಂಬಗಳಿಗೆ ಸವಲತ್ತು ಮತ್ತು ಆರ್ಥಿಕ ನೆರವು ನೀಡಲು ಆರಂಭಿಸಿದರು. ಅಡಕೆ ಬೆಳಗಾರರ ಪರ ಹೋರಾಟ, ಕಂಬಳದ ಉಳಿವಿಗಾಗಿ ಹೋರಾಟ, ಕ್ಷೇತ್ರ ವ್ಯಾಪ್ತಿಯ ವಿವಿಧ ದೇಗುಲಗಳ ಜೀರ್ಣೋದ್ಧಾರ, ಬ್ರಹ್ಮಕಲಶ ಇತ್ಯಾದಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist