ಪುತ್ತೂರು : ಬಸ್ಸಿನಲ್ಲಿ ಯುವತಿ ಜೊತೆ ಅನುಚಿತ ವರ್ತನೆ ; ಪೊಲೀಸರಿಗೆ ಟ್ವೀಟ್ ಮಾಡಿದ ಯುವತಿ - ಆರೋಪಿಯ ಬಂಧನ!
ಪುತ್ತೂರು, ಸೆ 08 : ಪುತ್ತೂರಿನಿಂದ ಕಾಣಿಯೂರು ಕಡೆಗೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಯುವಕನೋರ್ವ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆಯೋರ್ವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಟ್ವೀಟರ್ ಖಾತೆಗೆ ಟ್ವೀಟ್ ಮೂಲಕ ದೂರಿದ್ದು, ಇದಕ್ಕೆ ಸ್ಪಂದಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆಂದು ತಿಳಿದು ಬಂದಿದೆ.
ಮಹಿಳೆ ಪುತ್ತೂರಿನಿಂದ ನಿಂತಿಕಲ್ಲಿಗೆ ಬಸ್ಸಲ್ಲಿ ಸಂಜೆ ಬರುತ್ತಿರುವಾಗ ಯುವಕನೋರ್ವ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದು ಈ ಬಗ್ಗೆ ಟ್ವೀಟ್ ಮೂಲಕ ದೂರು ನೀಡಿದ್ದರು. ಆ ಯುವಕ ಫೋನ್ ನಂಬರನ್ನು ಮಹಿಳೆಗೆ ನೀಡಿದ್ದು ಬಳಿಕ ಸವಣೂರಲ್ಲಿ ಬಸ್ಸಿನಿಂದ ಇಳಿದು ಹೋಗಿದ್ದರು.
ಈ ಬಗ್ಗೆ ಮಹಿಳೆಯಿಂದ ದೂರನ್ನು ಸ್ವೀಕರಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಸಂತ್ರಸ್ಥ ಮಹಿಳೆಯಿಂದ ದೂರನ್ನು ಸ್ವೀಕರಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. pic.twitter.com/4UwHImMZC1
— Dakshina Kannada District Police (@spdkpolice) September 7, 2023
ಮಂಗಳೂರು: ಪಾಲಿಕೆ ನೂತನ ಮೇಯರ್ ಸುಧೀರ್ ಶೆಟ್ಟಿ, ಉಪಮೇಯರ್ ಆಗಿ ಸುನೀತಾ ಆಯ್ಕೆ
ಮಂಗಳೂರು, ಸೆ 08 : ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಆಗಿ ಕೋಡಿಯಾಲ್ ಬೈಲ್ ವಾರ್ಡ್ ನ ಸುಧೀರ್ ಶೆಟ್ಟಿ ಕಣ್ಣೂರು ಹಾಗೂ ಪಣಂಬೂರು ವಾರ್ಡ್ ಸುನೀತಾ ತಣ್ಣೀರುಬಾವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಅವಧಿಯ ನಾಲ್ಕನೇ ಮೇಯರ್-ಉಪಮೇಯರ್ ಚುನಾವಣೆಯು ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆದಿದ್ದು, ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ ಬಿಜೆಪಿಗೆ 44, ಕಾಂಗ್ರೆಸ್ ಗೆ 14, ಎಸ್ ಡಿಪಿಐ ಗೆ 2 ಸ್ಥಾನ ಪಡೆದುಕೊಂಡಿದೆ.
ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆದಿದೆ.