ಮಂಗಳವಾರ, ಡಿಸೆಂಬರ್ 5, 2023
ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ-ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪುತ್ತೂರು :ಸ್ನಾನಕ್ಕೆಂದು ಹೊಳೆಗೆ ಇಳಿದಾಗ ಹೃದಯಾಘಾತ ; ಯುವಕ ಸಾವು!

Twitter
Facebook
LinkedIn
WhatsApp
ಪುತ್ತೂರು :ಸ್ನಾನಕ್ಕೆಂದು ಹೊಳೆಗೆ ಇಳಿದಾಗ ಹೃದಯಾಘಾತ ; ಯುವಕ ಸಾವು!

ಪುತ್ತೂರು: ಸ್ನಾನಕ್ಕೆಂದು ಬಂದಿದ್ದ ಯುವಕ ಹೃದಯಘಾತದಿಂದ ಮೃತಪಟ್ಟ ಧಾರುಣ ಘಟನೆ ಇರ್ದೆ ಬೆಂದ್ರ ತೀರ್ಥದ ಬಳಿ ಹೊಳೆಯಲ್ಲಿ ನಡೆದಿದೆ.

ಬೊಳುವಾರಿನ ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಜಿತ್(27.ವ) ಎಂಬ ಯುವಕ ಸ್ಥಳೀಯ ನೆಂಟರೊಬ್ಬರ ಮನೆಗೆ ಬಂದಿದ್ದ ವೇಳೆ ಸ್ನಾನಕ್ಕೆಂದು ಹೊಳೆಗೆ ಇಳಿದ್ದಾಗ ಹೃದಯಘಾತವಾಗಿದೆ.
ನೀರಿನಲ್ಲಿ ತೇಲುತ್ತಿದ್ದ ಯುವಕನನ್ನು ತಕ್ಷಣ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಗಾಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಗಂಗೊಳ್ಳಿ: ಮೀನು ಮಾರಾಟ ವ್ಯವಹಾರದಲ್ಲಿ ವಂಚನೆ: ಆರೋಪಿ ಪರಾರಿ

ಗಂಗೊಳ್ಳಿಯಲ್ಲಿ ಮೀನು ಮಾರಾಟ ವ್ಯವಹಾರದಲ್ಲಿ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ. ಗಂಗೊಳ್ಳಿಯ ಸುನಿಲ್ ಎಂಬುವವರಿಗೆ ಆರೋಪಿ ಜನಾರ್ದನ ಮೀನು ಮಾರಾಟ ಮಾರಾಟ ವ್ಯವಹಾರದಲ್ಲಿ ವಂಚಿಸಿ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.

ಸುನಿಲ್ ಹಾಗೂ ಆರೋಪಿ ಜನಾರ್ದನ ಜೊತೆಯಾಗಿ ಮೀನುಗಳನ್ನು ಖರೀದಿಸಿ ಮಾರಾಟ ಮಾಡುವ ಎಸ್‌.ಎಂ.ಎ.ವೈ.ಸಿ. ಎಂಬ ಪಾಲುಗಾರಿಕಾ ಸಂಸ್ಥೆಯನ್ನು ಪ್ರಾರಂಭಿಸಿದ್ದು ಇಬ್ಬರೂ ತಲಾ 4.5 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದ್ದರು. ಸುನಿಲ್ ಶ್ರೀ ರಾಮ ಕರಾವಳಿ ಮೀನುಗಾರರ ವಿವಿಧೋದ್ದೇಶ ಸಂಘ ಮರವಂತೆ ಮೂಲಕ ಮೀನುಗಳನ್ನು ಸಾಲದ ರೂಪದಲ್ಲಿ ಖರೀದಿಸಿ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದರು. ಈ ಮೀನುಗಳನ್ನು ಖರೀದಿ ಮಾಡಲು ತಮ್ಮ ಸ್ಥಿರಾಸ್ತಿಯನ್ನು ಅಡಮಾನ ಇರಿಸಿದ್ದರು.

ಸುನಿಲ್ ಹಾಗೂ ಆರೋಪಿ ಜನಾರ್ದನ ಪ್ರಾರಂಭಿಸಿದ ಪಾಲುಗಾರಿಕೆ ಸಂಸ್ಥೆಯಲ್ಲಿ 3 ತಿಂಗಳಲ್ಲಿ 2,64,90,925 ರೂ.ಗಳಷ್ಟು ಮೀನು ಖರೀದಿ ಮಾಡಿ ಮಾರಾಟ ಮಾಡಿದ್ದು ಸಾಲ ಪಡೆದ ಸಂಘಕ್ಕೆ 1,51,50,000 ರೂ. ಹಣ ಪಾವತಿ ಮಾಡಿದ್ದರು. ಇನ್ನು 1,13,40,925 ರೂ. ಹಣ ಪಾವತಿ ಮಾಡಲು ಬಾಕಿ ಇತ್ತು. ಪಾಲುಗಾರಿಕೆ ಸಂಸ್ಥೆಯ ವ್ಯವಹಾರನ್ನು ಜನಾರ್ದನ ನಿರ್ವಹಿಸುತ್ತಿದ್ದು, ಮೀನು ಖರೀದಿ ಮಾಡಿದ ವ್ಯಕ್ತಿಗಳಿಂದ 90 ಲಕ್ಷ ರೂ. ಹಣವು ಗಂಗೊಳ್ಳಿಯ ಕೆನರಾ ಬ್ಯಾಂಕ್‌ ಶಾಖೆಯ ಜನಾರ್ದನನ ಖಾತೆಗೆ ಜಮೆಯಾಗಿದ್ದು ಆರೋಪಿಯು ತನ್ನ ಖಾತೆಗೆ ಬಂದ ಹಣವನ್ನು ಸಂಘಕ್ಕೆ ಪಾವತಿಸದೇ ಮೋಸ ಮಾಡಿ ನ.7ರಂದು ಮನೆ ಬಿಟ್ಟು ಪರಾರಿಯಾಗಿರುವುದಾಗಿ ಪ್ರಕರಣ ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ