- ಕರಾವಳಿ
- 10:40 ಫೂರ್ವಾಹ್ನ
- ನವೆಂಬರ್ 18, 2023
ಪುತ್ತೂರು : ಡಿವೈಎಸ್ಪಿ ಡಾ. ಗಾನಾ ಪಿ ಕುಮಾರ್ ವರ್ಗಾವಣೆ..!

ಪುತ್ತೂರು: ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ ಗಾನಾ ಪಿ ಕುಮಾರ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿ ಸರಕಾರ ಆದೇಶವನ್ನು ಹೊರಡಿಸಿದೆ.
ಈ ಹಿಂದೆ ಎರಡು ವರ್ಷಗಳ ಕಾಲ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ ಗಾನಾ ಕುಮಾರ್ ಅವರನ್ನು ಸರಕಾರ ಸಿಐಡಿಗೆ ವರ್ಗಾವಣೆಗೊಳಿಸಿತ್ತು. ಬಳಿಕ ಅವರ ವರ್ಗಾವಣೆಗೊಳಿಸಿ ಎಸ್ಪಿ ಕಚೇರಿಯ ಡಿಸಿಆರ್‌ಬಿ ಡಿವೈಎಸ್ಪಿಯಾಗಿ ನಿಯೋಜಿಸಲಾಗಿತ್ತು.
ಪುತ್ತೂರಿನಲ್ಲಿ ನಡೆದ ಬ್ಯಾನರ್ ಪ್ರಕರಣವೊಂದಕ್ಕೆ ಸಂಬಂಧಿಸಿ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ್ದ ಆರೋಪದಲ್ಲಿ ಪುತ್ತೂರಿನ ಆಗಿನ ಡಿವೈಎಸ್ಪಿ ಡಾ ವೀರಪ್ಪ ಹಿರೇಮಠ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿದ್ದ ಸಂದರ್ಭದಲ್ಲಿ ಪ್ರಭಾರ ಡಿವೈಎಸ್ಪಿಯಾಗಿ ಡಾ ಗಾನಾ ಪಿ ಕುಮಾರ್ ಅವರನ್ನು ನಿಯೋಜಿಸಲಾಗಿತ್ತು. ಬಳಿಕ ಅವರನ್ನೇ ಪುತ್ತೂರು ಡಿವೈಎಸ್ಪಿಯಾಗಿ ಮುಂದುವರಿಸಲಾಗಿತ್ತು. ಇದೀಗ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೇಗೊಳಿಸಿ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಕೂಡಲೇ ಇಳಿಸಿ- ಎಸ್‌ಡಿಟಿಯು ಕಾರ್ಯಕರ್ತರ ಪ್ರತಿಭಟನೆ..!
ಮಂಗಳೂರು: ಮಂಗಳೂರು: ಆಟೋ ಎಲ್‌ಪಿಜಿ ಇತ್ಯಾದಿ ಅಗತ್ಯ ವಸ್ತುಗಳ ವಿಪರೀತ ಬೆಲೆ ಏರಿಕೆಯನ್ನು ಖಂಡಿಸಿ, ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಲು ಆಗ್ರಹಿಸಿ ಮಂಗಳೂರಿನಲ್ಲಿ ಇಂದು ಎಸ್ ಡಿ ಟಿ ಯು ಆಟೋ ಚಾಲಕರ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಯಿತು.
ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಿದ್ಧೀಕ್ ಕಣ್ಣಂಗಾರು ಅವರು ಮಾತನಾಡಿ ಸರಕಾರದ ತಪ್ಪು ಆರ್ಥಿಕ ನೀತಿಯಿಂದ ಕಂಗೆಟ್ಟಿರುವ ಬಡ ಮಧ್ಯಮ ವರ್ಗಕ್ಕೆ ಆಟೋ ಎಲ್‌ಪಿಜಿ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಶ್ರಮಿಕ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರ ನೇರ ಪರಿಣಾಮ ಬಡ ಮಧ್ಯಮ ವರ್ಗ ಅನುಭವಿಸುವಂತಾಗಿದೆ.
ದಿನಂಪ್ರತಿ ಗರಿಷ್ಠ ಶ್ರಮ ವಹಿಸಿ ಆಟೋ ಮತ್ತು ಇತರ ವಾಣಿಜ್ಯ ಚಾಲಕರು ತಮ್ಮ ದುಡಿಮೆ ನಡೆಸುತ್ತಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರ ವಿವಿಧ ರೀತಿಯಲ್ಲಿ ಚಾಲಕರನ್ನು ಶೋಷಣೆಗೆ ಒಳಪಡಿಸುತ್ತಿದೆ ಎಂದರು. ಪ್ರತಿಭಟನೆಯಲ್ಲಿ ಸಮಿತಿ ಪ್ರಮುಖರಾದ ಇಲ್ಯಾಸ್ ಬೆಂಗರೆ, ಖಾದರ್ ಫರಂಗಿಪೇಟೆ, ಫಾಣ್ ಕಾನ, ಇಕ್ಬಾಲ್ ಕಣ್ಣೂರು ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಪಾಳ್ಗೊಂಡಿದ್ದರು. ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.