ಪುತ್ತೂರು: ಗುತ್ತಿಗೆದಾರ ಆರ್ಲಪದವು ಯುವಕ ನೇಣು ಬಿಗಿದು ಆತ್ಮಹತ್ಯೆ..!
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಪಾಣಾಜೆ ಗ್ರಾಮದ ಆರ್ಲಪದವು ಎಂಬಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರ್ಲಪದವು ನಿವಾಸಿ, ಮೇಸ್ತ್ರಿ ಕೆಲಸ ಮಾಡುತ್ತಿರುವ ಶಿವಪ್ಪ ನಾಯ್ಕ ಎಂಬವರ ಪುತ್ರ ವಿಜಯ ಕುಮಾರ್ ಎಸ್(25ವ) ಜೀವಾಂತ್ಎಂಯ ಮಾಡಿಕೊಂಡ ಯುವಕನಾಗಿದ್ಬದಾನೆ.
ವಿಜಯ್ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಘಟನೆಗೆ ಕಾರಣ ತಿಳಿದು ಬಂದಿಲ್ಲ. ತಂದೆಯ ಜೊತೆ ತಾನು ಮೇಸ್ತ್ರಿಯಾಗಿ ಕೆಲಸಕ್ಕೆ ತೆರಳುತ್ತಿದ್ದ ವಿಜಯ್ ಗುತ್ತಿಗೆದಾರರಾಗಿಯೂ ಕೆಲಸ ಮಾಡುತ್ತಿದ್ದರು. ಅವಿವಾಹಿತರಾಗಿದ್ದ ಮೃತರು ತಂದೆ ಶಿವಪ್ಪ ನಾಯ್ಕ, ತಾಯಿ , ಸಹೋದರ, ಮತ್ತು ಸಹೋದರಿಯನ್ನು ಅಗಲಿದ್ದಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಸರಗೋಡು : ಯುವಕನ ಕಿರುಕುಳಕ್ಕೆ ಬೇಸತ್ತು ಕಾಲೇಜು ವಿದ್ಯಾರ್ಥಿನಿ ಜೀವಾಂತ್ಯ..!
ಕಾಸರಗೋಡು : ಕೇರಳ ಕಾಸರಗೋಡಿನ ಬಂದ್ಯೋಡು ಸಮೀಪದ ಆಡ್ಕ ಎಂಬಲ್ಲಿ ಯುವತಿಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಅಡ್ಕದ ಫ್ಲ್ಯಾಟ್ ನಲ್ಲಿ ವಾಸವಾಗಿರುವ ಬದ್ರುದ್ದೀನ್ ರವರ ಪುತ್ರಿ ರೆನಾ ಫಾತಿಮಾ (19) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ರಾತ್ರಿ ಊಟ ಮಾಡಿ ಅಮ್ಮನ ಜೊತೆ ಮಲಗಲು ಹೋಗಿದ್ದ ಈಕೆ ನಿನ್ನೆ ಬೆಳಿಗ್ಗೆ ಏಳು ಗಂಟೆಗೆ ಅಮ್ಮ ಎದ್ದಾಗ ರಾಣಾ ಫಾತಿಮಾ ಕಾಣಲಿಲ್ಲ. ಹುಡುಕಾಡಿದಾಗ ಇನ್ನೊಂದು ಮಲಗುವ ಕೋಣೆ ಬೀಗ ಹಾಕಿರುವುದು ಕಂಡು ಬಂತು. ಬಾಗಿಲು ಒಡೆದು ನೋಡಿದಾಗ ರಾಣಾ ಫಾತಿಮಾ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 19 ವರ್ಷದ ಯುವತಿಗೆ ಯುವಕನೊಬ್ಬ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಫಾತಿಮಾ ಅವರ ಫೋನ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.