ಪುತ್ತೂರು : ತೆಂಗಿನಕಾಯಿ ಕೀಳುವ ಕೆಲಸದಲ್ಲಿ ಪರಿಣಿತಿ ಹೊಂದಿದ್ದ ಮಹಿಳೆ ತೆಂಗಿನ ಮರದಿಂದ ಬಿದ್ದು ಸಾವು!
ಸವಣೂರು : ಆ 9: ತೆಂಗಿನ ಮರ ಹತ್ತಿ ತೆಂಗಿನಕಾಯಿ ಕೀಳುವ ಕೆಲಸದಲ್ಲಿ ಪರಿಣಿತಿ ಹೊಂದಿದ್ದ ಮಹಿಳೆಯೊಬ್ಬರು, ಇಂದು ಅದೇ ಕೆಲಸದಲ್ಲಿ ನಿರತರಾಗಿದ್ದಾಗ ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಘಟನೆ ಕೆಬ ತಾಲೂಕಿನ ಸವಣೂರು ಸಮೀಪದ ಪುಣ್ಡಪ್ಪಾಡಿ ಗ್ರಾಮದಲ್ಲಿ ನಡೆದಿದೆ
ಸವಣೂರು ಸಮೀಪದ ಪುಪ್ಪಾಡಿ ಗ್ರಾಮದ ಪ್ರಮೋದ್ ಬೊಳ್ಳಾಜೆಯವರ ಪತ್ನಿ ಸುಚಿತ್ರ (30) ಮೃತ ಮಹಿಳೆ. ಮರ ಹತ್ತುವುದು ಪುರುಷರ ಕೆಲಸ ಎಂದು ಭಾವಿಸಲಾಗಿದ್ದ ಸಮಯದಲ್ಲಿ ಇವರು ತೆಂಗಿನ ಮರ ಏರುವ ಮೂಲಕ ಪ್ರಸಿದ್ದಿ ಪಡೆದಿದ್ದರು.
ಟೊಮೆಟೊ ದರ ಮತ್ತಷ್ಟು ಕುಸಿತ; ಗ್ರಾಹಕರು ಫುಲ್ ಖುಷ್, ಆಗಸ್ಟ್ ಅಂತ್ಯಕ್ಕೆ ಮತ್ತಷ್ಟು ಇಳಿಕೆ ಸಾಧ್ಯತೆ:
ಬೆಂಗಳೂರು, ಆ.09: ಕೆಲ ತಿಂಗಳ ಹಿಂದೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದ ಟೊಮೆಟೊ(Tomato) ಈಗ ಇಳಿಕೆಯತ್ತ ಸಾಗಿದೆ. ಕೊನೆಗೂ ಟೊಮೆಟೊ ಬೆಲೆ ಇಳಿಕೆಯತ್ತ ಸಾಗುತ್ತಿದೆ. ಕಳೆದ ವಾರ ಒಂದು ಕೆಜೆಗೆ 160 ರಿಂದ 180 ರೂ. ಇತ್ತು. ಇಂದು ಕೆಜಿಗೆ ಟೊಮೆಟೊ 80 ರಿಂದ 90 ರೂಪಾಯಿ ಇದೆ. 200ರೂಗೆ ಮಾರಾಟವಾಗಿ ದಾಖಲೆ ಮಾಡಿದ್ದ ಕೆಂಪು ಸುಂದರಿ ಬೆಲೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು ಆಗಸ್ಟ್ ಅಂತ್ಯದೊಳಗೆ ಮತ್ತಷ್ಟು ಬೆಲೆ ಇಳಿಯುವ ಸಾಧ್ಯತೆ ಇದೆ. ಇದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.
ಟೊಮೆಟೊ ಬೆಲೆ ಇಳಿಕೆಯಾಗುತ್ತಿದ್ದಂತೆ ಟೊಮೆಟೊ ಖರೀದಿಸಲು ಮಹಿಳೆಯರು ಮುಗಿಬಿದ್ದಿದ್ದಾರೆ. ಟೊಮೆಟೊ ಬೆಲೆ ಜಾಸ್ತಿಯಾದಗಿನಿಂದ ಮಹಿಳೆಯರು ಟೊಮೆಟೊ ಖರೀದಿಸಲು ಯೋಚಿಸುವಂತಾಗಿತ್ತು. ಸದ್ಯ ಈಗ ಬೆಲೆ ಇಳಿಕೆಯಾಗಿದ್ದು ಗ್ರಾಹಕರು ಫುಲ್ ಖುಷ್ ಆಗಿದ್ದಾರೆ. ಹಾಗೂ ಬೆಲೆ ಏರಿಕೆಯಿಂದಾಗಿ ಮನೆಯಲ್ಲಿ ಯಷ್ಟೋ ದಿನದಿಂದ ಟೊಮೆಟೊ ಬಾತ್ ಮಾಡಿರಲಿಲ್ಲ. ಈಗ ಹೋಗಿ ಮಾಡಿ ಹೊಟ್ಟೆ ತುಂಬ ತಿಂತೀವಿ ಎಂದು ಗ್ರಾಹಕರೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಮತ್ತೊಂದೆಡೆ ಟೊಮೆಟೊ ಇಳಿಕೆಯಾಗುತ್ತಿದ್ದಂತೆ ವ್ಯಾಪಾರ ವಹಿವಾಟು ಜೋರಾಗಿದೆ. ಇಷ್ಟು ದಿನ ಅರ್ಧ ಕೆಜಿ, ಕಾಲ್ ಕೆಜಿ ತೆಗೆದುಕೊಳ್ಳುತ್ತಿದ್ದ ಗ್ರಾಹಕರು ಇದೀಗಾ ಎರಡು ಕೆಜಿ ಖರೀದಿ ಮಾಡ್ತಿದ್ದಾರೆ ಎಂದು ಕೆಆರ್ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರೊಬ್ಬರು ತಿಳಿಸಿದರು.