'ಪುಷ್ಪ-2' ಕಲಾವಿದರ ಬಸ್ ಅಪಘಾತ
ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ಪುಷ್ಪಾ-2 ಸಿನಿಮಾದ ಕಲಾವಿದರಿದ್ದ ಬಸ್ ಅಪಘಾತಕ್ಕೀಡಾಗಿದೆ. ಪುಷ್ಪ-2 ಕಲಾವಿದರನ್ನು ಹೊತ್ತೊಯ್ಯುತ್ತಿದ್ದ ಬಸ್ ಇಂದು (ಮೇ 31) ತೆಲಂಗಾಣದಿಂದ ಆಂಧ್ರಪ್ರದೇಶಕ್ಕೆ ಹಿಂದಿರುಗುತ್ತಿದ್ದಾಗ ನಿಂತಿದ್ದ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆದಿದೆ.
ಹೈದರಾಬಾದ್-ವಿಜಯವಾಡ ಹೆದ್ದಾರಿ ನಾರ್ಕೆಟ್‌ಪಲ್ಲಿ ಬಳಿ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಇಬ್ಬರು ಕಲಾವಿದರಿಗೆ ಗಾಯಗಳಾಗಿದ್ದು ತಕ್ಷಣ ಆಸ್ಪತ್ರೆಗೆ ಕರೆದೊಯಿಯ್ದು ಚಿಕಿತ್ಸೆ ನೀಡಲಾಗುತ್ತಿದೆ.
ನಿರ್ದೇಶಕ ಸುಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪುಷ್ಪ 2 ಶೂಟಿಂಗ್ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆಯುತ್ತಿದೆ. ಅಲ್ಲಿ ಒಂದು ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ. ಚಿತ್ರೀಕರಣ ಮುಗಿಸಿ ಕಲಾವಿದರು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಿಂದ ಹೈದರಾಬಾದ್‌ಗೆ ಹಿಂತಿರುಗುತ್ತಿದ್ದರು. ಆಗ ಈ ಅವಘಡ ಸಂಭವವಿಸಿದೆ. ಶ್ರೀಕಾಕುಲಂ ಅರಣ್ಯ ಮತ್ತು ಕೃಷಿ ಭೂಮಿ ಹಾಗೂ ಕಲ್ಲಿನ ಭೂಪ್ರದೇಶವನ್ನು ಹೊಂದಿದೆ ಹಾಗಾಗಿ ಅದೇ ಜಾಗವನ್ನು ಶೂಟಿಂಗ್‌ಗಗೆ ಆಯ್ಕೆ ಮಾಡಿಕೊಂಡಿತ್ತು ಸಿನಿಮಾತಂಡ.