ಬಸನಗೌಡ ಪಾಟೀಲ್ ಯತ್ನಾಳ್ ಗೆ ಟಾಂಗ್ ಕೊಟ್ಟ ಪ್ರಿಯಾಂಕ್ ಖರ್ಗೆ!
ಕಲಬುರಗಿ: “ಯತ್ನಾಳ್ ಅವರು ಮೊದಲು ಅವರು ಪಕ್ಷದಲ್ಲಿ ಏನ್ ನಡೀತಿದೆ ಎನ್ನೋದನ್ನ ತಿಳಿದುಕೊಳ್ಳಲಿ. ರಾಜ್ಯ ಬಿಜೆಪಿಗರಿಗೆ ಮಾಹಿತಿ ನೀಡದೆ ಜೆಡಿಎಸ್ ಜೊತೆ ಮೈತ್ರಿ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿಗೆ ಎಷ್ಟು ಮರ್ಯಾದೆ ಕೊಡುತ್ತೆ ಎನ್ನುವುದು ಇದರಲ್ಲೇ ಗೊತ್ತಾಗುತ್ತೆ”
– ಇದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಅವರಲ್ಲೇ ಡಿಸಿಎಂ ಪ್ರಯತ್ನಿಸುತ್ತಿದ್ದಾರೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಟಾಂಗ್.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಯತ್ನಾಳ ಸಿದ್ದರಾಮಯ್ಯ ಕೆಳಗಿಳಿಸೋಕೆ ಅವರಲ್ಲೆ ಡಿಸಿಎಂ ಪ್ರಯತ್ನಿಸುತ್ತಿದ್ದಾರೆ ಎನ್ನೋ ಹೇಳಿಕೆಗೆ ಟಾಂಗ್ ನೀಡಿದರು. ರಾಜ್ಯ ಬಿಜೆಪಿಗರಿಗೆ ಕೇಂದ್ರಲ್ಲಿ ಮರಿಯಾದೆ ಇಲ್ಲ. ಮೊದಲು ಯತ್ನಾಳ ಅವರು ಅವರ ಪಕ್ಷದಲ್ಲಿ ಏನ್ ನಡಿಯತ್ತಿದೆ ಅಂತ ತಿಳಿದುಕೊಳ್ಳಲಿ. ವಿಪಕ್ಷ ನಾಯಕರನ್ನೆ ಇಲ್ಲಿಯವರೆಗೂ ನೇಮಕ ಮಾಡೋಕೆ ಆಗಿಲ್ಲ ಎಂದು ಮೂದಲಿಸಿದರು.
ಸಿಡಿ ಕೇಸ್ ವಿಚಾರ
ಸಿಡಿ ಕೇಸ್ ಸಿಬಿಐ ಗೆ ಒಪ್ಪಿಸಬೇಕು ಅಂತ ರಮೇಶ್ ಜಾರಕಿಹೊಳಿ ಪತ್ರ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ಈ ಹಿಂದೆ ಅವರದ್ದೇ ಡಬಲ್ ಎಂಜಿನ್ ಸರ್ಕಾರ ಇತ್ತಲ್ಲ.? ಅವಗ್ಯಾಕೆ ಸಿಬಿಐಗೆ ಕೊಡಲಿಲ್ಲ? ಅಂದ್ರೆ ಮಾಜಿ ಸಚಿವರಿಗೆ ಹಿಂದಿನ ಸರ್ಕಾರ ಕಿಮತ್ತು ಕೊಟ್ಟಿಲ್ವಾ..? ನಾವ್ಯಾಕೆ ಸಿಬಿಐ ಗೆ ಕೊಡಬೇಕು. ನಮ್ಮ ಆದ್ಯತೆ ಸಿಡಿ ಪ್ರಕರಣ ಅಲ್ಲ. ನಮ್ಮ ಆದ್ಯತೆ ಜನ ಕಲ್ಯಾಣ, ಗ್ಯಾರೆಂಟಿ ಯೋಜನೆ ನೀಡೋದು ಎಂದರು.
ಇನ್ನು KEA ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಪಿಎಸ್‌ಐ ಹಗರಣ ದಲ್ಲಿ ಸರ್ಕಾರವೇ ಭಾಗಿಯಾಗಿತ್ತು. ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಬಂಧನಕ್ಕೊಳಗಾಗಿದ್ದರು. ಕೆಇಎ ಪರೀಕ್ಷಾ ಅಕ್ರಮದ ತನಿಖೆ ವಿಳಂಬ ಮಾಡುವುದಿಲ್ಲ. ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರು ಸೋರಿಕೆ/ಅಕ್ರಮ ಆಗೋದು ಸಹಜ. ಅಕ್ರಮ ನಡೆಯುತ್ತೆ ಎಂದು ಯಾರು ನನಗ ಮಾಹಿತಿ ಕೊಟ್ಟಿದ್ದು ಎಂದು ಪ್ರಶ್ನಿಸಿದರು.
ಪರೀಕ್ಷಾ ಹಗರಣ ಸಿಬಿಐಗೆ ಅನಗತ್ಯ
ನಮ್ಮ ತನಿಖೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಅಭ್ಯರ್ಥಿಗಳು ಬ್ಲೂಟೂತ್ ನಿಂದ ಪ್ರಶ್ನೆ ಹೇಳಿ ಉತ್ತರ ಪಡೆದಿದ್ದಾರೆ. ಪೊಲೀಸರು ಕಣ್ತಪ್ಪಿಸಿ ಬ್ಲೂಟೂತ್ ಪರೀಕ್ಷಾ ಕೇಂದ್ರಕ್ಕೆ ಹೋಗಿರಬೇಕು. ಕೆಇಎ ಪರೀಕ್ಷಾ ಹಗರಣ ಸಿಬಿಐ ಗೆ ಕೊಡುವ ಅವಶ್ಯಕತೆ ಇಲ್ಲ. ಅಗತ್ಯ ಬಿದ್ರೆ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತದೆ ಎಂದರು
ಇನ್ನು ಪಿಎಸ್‌ಐ ಪರೀಕ್ಷಾ ಹಗರಣ ಬಿಜೆಪಿ ಯವರು ಸಿಬಿಐ ಗೆ ಕೊಟ್ಟಿದ್ರಾ?. ಪಿಎಸ್‌ಐ ಪರೀಕ್ಷಾ ಹಗರಣದಲ್ಲಿ ಶಾಸಕರು / ಹಿರಿಯ ಪೊಲೀಸರ ಅಧಿಕಾರಿಗಳ ಹೆಸರು ಬಂದಿತ್ತು. PSI ಪರೀಕ್ಷಾ ಹಗರಣದ ಬಗ್ಗೆ ಬಿಜೆಪಿ ಯವರು ಚಕಾರವೆತ್ತಲ್ಲ ಎಂದು ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ ಕೆಇಎ ಪರೀಕ್ಷಾ ಹಗರಣದ ಇಂಚಿಂಚು ತನಿಖೆ ಮಾಡುತ್ತೇವೆ ಎಂದು ಹೇಳಿದರು.