ಗುರುವಾರ, ಮಾರ್ಚ್ 28, 2024
ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ; ಒಟ್ಟು ಆಸ್ತಿ ಮೌಲ್ಯ ಹೀಗಿದೆ.!-ಸ್ನೇಹಿತರ ಹುಚ್ಚಾಟಕ್ಕೆ ಕರುಳು ಬ್ಲ್ಯಾಸ್ಟ್ ಆಗಿ ಯುವಕ ಸಾವು..!-ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್.!-ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!-ಸುಮಲತಾ ಅವರು ನನಗೆ ಶತ್ರುವಲ್ಲ; ಸಮಯ ಬಂದಾಗ ಮಾತನಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ-ಕೇರಳ: 10 ಕೋಟಿ ಲಾಟರಿ ಗೆದ್ದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿ..!-ಮಂಗಳೂರು: ಬೈಕಂಪಾಡಿ ಸೀ ಫುಡ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಕಾರ್ಖಾನೆ..!-ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭ; ಚುನಾವಣೆಯ ರಣಕಹಳೆ ಶುರು.!-ಉಡುಪಿ: ನೇಜಾರಿನ ನಾಲ್ವರ ಕೊಲೆ ಪ್ರಕರಣ; ಕೋರ್ಟ್‌ನಲ್ಲಿ ಕೊಲೆ ಆರೋಪ ನಿರಾಕರಿಸಿದ ಪ್ರವೀಣ್ ಚೌಗುಲೆ.!-ಜಿಲ್ಲೆಯಲ್ಲಿ ಸದ್ಯಕ್ಕೆ ರೇಶನಿಂಗ್ ಇಲ್ಲ; ನೀರು ಪೋಲು ಆಗದಂತೆ ಎಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸೂಚನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶಾರುಖ್‌ ಖಾನ್‌ ಜೊತೆ ಕನ್ನಡತಿ ಪ್ರಿಯಾಮಣಿ ರೊಮ್ಯಾನ್ಸ್

Twitter
Facebook
LinkedIn
WhatsApp
ಶಾರುಖ್‌ ಖಾನ್‌ ಜೊತೆ ಕನ್ನಡತಿ ಪ್ರಿಯಾಮಣಿ ರೊಮ್ಯಾನ್ಸ್
 

ಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ (Priyamani) ಅವರು ಮತ್ತೆ ಶಾರುಖ್ ಖಾನ್ (Sharukh Khan) ಜೊತೆ ನಟಿಸುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಈ ಹಿಂದೆ ʻಚೆನ್ನೈ ಎಕ್ಸಪ್ರೆಸ್’ (Chennai Express) ಸಿನಿಮಾದಲ್ಲಿ ಸೊಂಟ ಬಳುಕಿಸಿದ್ದ ನಟಿ ಮತ್ತೆ ಶಾರುಖ್ ಜೊತೆ ನಟಿಸುವ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಿಯಾಮಣಿ ರಿಯಾಕ್ಟ್ ಮಾಡಿದ್ದಾರೆ.

ನ್ ಇಂಡಿಯಾ ನಟಿಯಾಗಿ ಪ್ರಿಯಾಮಣಿ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಾರುಖ್ ನಟನೆಯ ‘ಜವಾನ್’ (Jawan) ಚಿತ್ರದಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಈ ಬಗ್ಗೆ ನಟಿ ಕೂಡ ಖುಷಿಯಿಂದ ರಿಯಾಕ್ಟ್ ಮಾಡಿದ್ದಾರೆ.‌

ಅಟ್ಲಿ ನಿರ್ದೇಶನದ ‘ಜವಾನ್’ ಚಿತ್ರದಲ್ಲಿ ಮಲ್ಟಿ ಸ್ಟಾರ್ಸ್ ನಟಿಸುತ್ತಿದ್ದಾರೆ. ಆ ಸಾಲಿಗೆ ಈಗ ಪ್ರಿಯಾಮಣಿ ಕೂಡ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ 1,2,3,4 ಎಂಬ ಹಾಡಿಗೆ ಶಾರುಖ್ ಜೊತೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದರು. ಈಗ ಮತ್ತೆ ಶಾರುಖ್- ಪ್ರಿಯಾ ಒಟ್ಟಿಗೆ ನಟಿಸುತ್ತಿದ್ದಾರೆ.

ಜವಾನ್’ ಚಿತ್ರದಲ್ಲಿ ಶಾರುಖ್ ಜೊತೆ ನಟಿಸುತ್ತಿದ್ದೇನೆ ಎಂಬ ಬಗ್ಗೆ ಖುಷಿಯಿದೆ. ಈ ಚಿತ್ರವನ್ನು ಜನ ಯಾವಾಗ ನೋಡ್ತಾರೋ ಅಂತಾ ನಾನು ಕಾಯ್ತಿದ್ದೀನಿ. ಶಾರುಖ್ ಖಾನ್ (Sharukh Khan) ಜೊತೆ ಕೆಲಸ ಮಾಡುವುದು ಮ್ಯಾಜಿಕಲ್ ಅನುಭವ. ಅವರು ನನ್ನನ್ನು ನೆನಪಿಟ್ಟುಕೊಂಡಿದ್ದಾರೆ ಎಂಬುದೇ ಖುಷಿಯ ವಿಚಾರ ಎಂದು ಮಾತನಾಡಿದ್ದಾರೆ.

ನಾನು ಸೆಟ್‌ಗೆ ಬರುವಾಗ ಅವರಿಗೆ ನಾನು ನೆನಪಿರುತ್ತೇನಾ ಎಂಬ ಗೊಂದಲವಿತ್ತು. ಅವರು ನೆನಪಿಟ್ಟುಕೊಂಡು ಮಾತನಾಡಿದ ರೀತಿ ಖುಷಿಯಾಯ್ತು. ಈ ಹಿಂದೆ ಸಿನಿಮಾವೊಂದಕ್ಕಾಗಿ ಕೇವಲ ಒಂದು ಸಾಂಗ್‌ನಲ್ಲಿ ಶಾರುಖ್ ಜೊತೆ ನಟಿಸಿದ್ದೇ. ಈಗ ಮತ್ತೆ ತೆರೆಹಂಚಿಕೊಳ್ತಿರೋದು ಖುಷಿ ಕೊಟ್ಟಿದೆ ಎಂದು ಪ್ರಿಯಾಮಣಿ ರಿಯಾಕ್ಟ್ ಮಾಡಿದ್ದಾರೆ. ಜವಾನ್‌ನಲ್ಲಿ ಪ್ರಿಯಾಮಣಿ ಪಾತ್ರ ಹೇಗಿರಲಿದೆ ಎಂಬುದರ ಬಗ್ಗೆ ನಟಿ ಗುಟ್ಟು ಬಿಟ್ಟು ಕೊಟ್ಟಿಲ್ಲ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ