ಅಜ್ಮೇರ್ ದರ್ಗಾಕ್ಕೆ ವಿಶೇಷ ಚಾದರ ಸಮರ್ಪಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಅಜ್ಮೇರ್‌ನಲ್ಲಿರುವ ಖ್ವಾಜಾ ಮೊಯಿ ನುದ್ದೀನ್ ಚಿಸ್ತಿಗೆ ವಿಶೇಷ ಚಾದರವನ್ನು ಸಮರ್ಪಿ ಸಿದ್ದಾರೆ.
ಹೊಸದಿಲ್ಲಿಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿಯವರು ಸಮುದಾಯದ ಮುಖಂಡರ ಮೂಲಕ ವಿಶೇಷ ಚಾದರವನ್ನು ಅರ್ಪಿಸಿದ್ದಾರೆ. ಅದನ್ನು ಶೀಘ್ರದಲ್ಲಿಯೇ ನಡೆಯಲಿರುವ ಉರೂಸ್‌ನಲ್ಲಿ ಅರ್ಪಿಸಲಾಗುತ್ತದೆ.
ಈ ಬಗ್ಗೆ ಖುದ್ದು ಪ್ರಧಾನಿ ಯವರೇ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಕೇಂದ್ರ ಅಲ್ಪ ಸಂಖ್ಯಾಕ ವ್ಯವಹಾರಗಳ ಸಚಿವೆ ಸ್ಮತಿ ಇರಾನಿ ಮತ್ತು ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ಧಿಕಿ ಈ ಸಂದರ್ಭದಲ್ಲಿ ಇದ್ದರು.
ಆರ್ಟಿಕಲ್ 370 ರದ್ದು, ಸರ್ಕಾರದ ಪರ ತೀರ್ಪು – ಆದೇಶ ಮರು ಪರಿಶೀಲನೆಗೆ ಸುಪ್ರೀಂಗೆ ಅರ್ಜಿ
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ (Article 370) ವಿಧಿಯನ್ನು ರದ್ದುಗೊಳಿಸಿದ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿರುವ ಸುಪ್ರೀಕೋರ್ಟ್ (Supreme Court) ಆದೇಶವನ್ನು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಮುಜಾಫರ್ ಇಕ್ಬಾಲ್ ಖಾನ್ ಎಂಬವರು ಮತ್ತು ಅವಾಮಿ ನ್ಯಾಷನಲ್ ಕಾನ್ಫರೆನ್ಸ್‌ನಿಂದ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ.
ಡಿಸೆಂಬರ್ 11, 2023 ರಂದು ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠವು, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ 2019ರ ನಿರ್ಧಾರವನ್ನು ಸರ್ವಾನುಮತದಿಂದ ಎತ್ತಿಹಿಡಿದಿತ್ತು. ಈ ವೇಳೆ ಆರ್ಟಿಕಲ್ 370 ಒಂದು ತಾತ್ಕಾಲಿಕ ನಿಬಂಧನೆ ಎಂದು ನ್ಯಾಯಾಲಯ ಹೇಳಿತ್ತು.
ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ದಾರಿ ಮಾಡಿಕೊಟ್ಟ 2019ರ ಕಾನೂನಿನ ಸಿಂಧುತ್ವವನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಬದಲಾಗಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಈ ಪ್ರದೇಶಕ್ಕೆ ರಾಜ್ಯತ್ವವನ್ನು ಮರುಸ್ಥಾಪಿಸಲು ಸೂಚಿಸಿತ್ತು.
ನ್ಯಾಯಾಲಯದ ಈ ತೀರ್ಪಿಗೆ ಹಲವು ಟೀಕೆಗಳು ಬಂದಿದ್ದವು. ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರು ತೀರ್ಪು ಗೊಂದಲವನ್ನುಂಟುಮಾಡಿದೆ. ಫೆಡರಲಿಸಂ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತದೆ ಮತ್ತು ಸಂವಿಧಾನದ 356 ನೇ ವಿಧಿಯನ್ನು ಬೈಪಾಸ್ ಮಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದರು.