ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ; ಮುಖ್ಯ ಶಿಕ್ಷಕನಿಗೆ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು!
ಹಾಸನ, ಸೆಪ್ಟಂಬರ್ 02: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕನಿಗೆ ಗ್ರಾಮಸ್ಥರೆಲ್ಲರೂ ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗ್ರಾಮದಲ್ಲಿ ನಡೆದಿದೆ.
ಹಾಸನ, ಸೆಪ್ಟಂಬರ್ 02: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕನಿಗೆ ಗ್ರಾಮಸ್ಥರೆಲ್ಲರೂ ಸೇರಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗ್ರಾಮದಲ್ಲಿ ನಡೆದಿದೆ.
ಇನ್ನು ಘಟನೆ ಬಗ್ಗೆ ವಿಚಾರಿಸಲು ನಿನ್ನೆ (ಸೆ.01) ಶಾಲೆಗೆ ಬರುವುದಾಗಿ ಬಿಇಒ ಹೇಳಿದ್ದಾರೆ. ಆದರೆ, ಬರುವುದು ತಡವಾದ ಹಿನ್ನೆಲೆ ಮುಖ್ಯ ಶಿಕ್ಷಕನಿಗೆ ಗ್ರಾಮಸ್ಥರೆಲ್ಲರೂ ಸೇರಿ ಗೂಸಾ ಕೊಟ್ಟಿದ್ದಾರೆ. ವಿಷಯ ತಿಳಿದು ಗ್ರಾಮದ ಶಾಲೆಗೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲೆಯ ಬಾಗಿಲು ಹಾಕಿಕೊಂಡು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ರೊಚ್ಚಿಗೆದ್ದ ಗ್ರಾಮಸ್ಥರು ಕಚೇರಿಯ ಬಾಗಿಲನ್ನು ಒಡೆದು ಧ್ವಂಸಗೊಳಿಸಿ, ಬಿಇಒ ಎದುರೇ ಶಿಕ್ಷಕನಿಗೆ ಮತ್ತೆ ಥಳಿಸಿ ಹೊರ ಎಳೆದುಕೊಂಡು ಬಂದಿದ್ದಾರೆ.
ಇನ್ನು ಎರಡೂವರೆ ತಿಂಗಳ ಹಿಂದೆ ಅಷ್ಟೇ ಮುಖ್ಯ ಶಿಕ್ಷಕ ಮುಂಜುನಾಥ್ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಇದೀಗ ಇಂತಹ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಖ್ಯ ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ಜೀಪ್ ಅಡ್ಡಗಟ್ಟಿ ಮಂಜುನಾಥ್‌ನನ್ನು ನಮ್ಮ ವಶಕ್ಕೆ ನೀಡುವಂತೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ. ಕೊನೆಗೆ ಗ್ರಾಮಸ್ಥರ ಮನವೊಲಿಸಿ ಮಂಜುನಾಥ್‌ನನ್ನು ಪೊಲೀಸರು ಕರೆದೊಯ್ದಿದ್ದಾರೆ.
Raichuru: ಹಾಸ್ಟೆಲ್ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್! JDS ತಾಲೂಕು ಅಧ್ಯಕ್ಷನ ಕರ್ಮಕಾಂಡ ಬಯಲು
ರಾಯಚೂರು: ಜಿಲ್ಲೆಯ ದೇವದುರ್ಗ ಜೆಡಿಎಸ್ (JDS) ತಾಲೂಕು ವಿದ್ಯಾರ್ಥಿ ಘಟಕದ (Student unit) ಅಧ್ಯಕ್ಷನ ಕರ್ಮಕಾಂಡ ಬಯಲಾಗಿದೆ. ಜೆಡಿಎಸ್ ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಲೀಂ ಕಾಕರಗಲ್, ಮಹಿಳೆಯರ (Women) ಜೊತೆಗಿನ ಖಾಸಗಿ ಫೋಟೋಗಳು (Private Photos) ವೈರಲ್ ಆಗಿವೆ. 3-4 ಮಹಿಳೆಯರು ಜೊತೆಗಿರುವ ಖಾಸಗಿ ಫೋಟೋ ವೈರಲ್ ಆಗಿವೆ. ಹಾಸ್ಟೆಲ್ ವಿದ್ಯಾರ್ಥಿನಿಯರನ್ನೇ (Hostel Students) ಟಾರ್ಗೆಟ್ ಮಾಡಿ, ದೇವದುರ್ಗ ಪಟ್ಟಣದ ಲಾಡ್ಜ್‌ಗಳಲ್ಲಿ (Lodge) ಹುಡುಗಿಯರ ಜೊತೆಗೆ ಇರುವ ಫೋಟೋಗಳು ವೈರಲ್ ಆಗಿದ್ದು, ಸೂಕ್ತ ಕ್ರಮಕ್ಕೆ ಜನರು ಆಗ್ರಹಿಸಿದ್ದಾರೆ.
ಸದ್ಯ ಸಲೀಂ ಕಾಕರಗಲ್ ಖಾಸಗಿ ಕ್ಷಣದ ವಿಡಿಯೋ ವೈರಲ್ ಆಗಿದ್ದು, ದೇವದುರ್ಗ ಪಟ್ಟಣದ ಲಾಡ್ಜ್ ಗಳನ್ನೇ ಈತ ಖಾಸಗಿ ಅಡ್ಡ ಆಗಿ ಮಾಡಿಕೊಂಡಿದ್ದನಂತೆ. ಬ್ಲಾಕ್ ಮೇಲ್ ಮಾಡ್ತಾ ಹುಡುಗಿಯರ ಜೊತೆ ಶೋಕಿ ಮಾಡುವುದು, ಹಾಸ್ಟೆಲ್ ವಿದ್ಯಾರ್ಥಿನಿಯರನ್ನೂ ಟಾರ್ಗೆಟ್ ಮಾಡಿ ಕೃತ್ಯ ಎಸಗುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.