ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಜನಪ್ರಿಯ ಕಿರುತೆರೆ ನಟಿ ಹುಮೈರಾ ಹಿಮು ಇನ್ನಿಲ್ಲ, ಆತ್ಮಹತ್ಯೆ ಶಂಕೆ!

Twitter
Facebook
LinkedIn
WhatsApp
ಜನಪ್ರಿಯ ಕಿರುತೆರೆ ನಟಿ ಹುಮೈರಾ ಹಿಮು ಇನ್ನಿಲ್ಲ, ಆತ್ಮಹತ್ಯೆ ಶಂಕೆ!

ನಪ್ರಿಯ ಕಿರುತೆರೆ ನಟಿ ಹುಮೈರಾ ಹಿಮು (Humaira Himu) ಸಾವನ್ನಪ್ಪಿದ್ದಾರೆ. 37ರ ವಯಸ್ಸಿನ ಈ ನಟಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಾಂಗ್ಲಾದೇಶದ (Bangladesh) ಜನಪ್ರಿಯ ನಟಿ ಆಗಿರುವ ಇವರು, ನವೆಂಬರ್ 2ರಂದು ಉತ್ತರಾ ಅಧುನಿಕ್ ವೈದ್ಯಕೀಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವೈದ್ಯರು ಹೇಳುವಂತೆ ಯುವಕನೊಬ್ಬನು ತಮ್ಮ ಆಸ್ಪತ್ರೆಗೆ ಹಿಮು ಅವರನ್ನು ಕರೆತಂದು. ಅವರು ಆಸ್ಪತ್ರೆಗೆ ಬರುವಾಗಲೇ ಸಾವನ್ನಪ್ಪಿದ್ದರು. ನಾವು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದೆವು. ಪೊಲೀಸರು ಆಸ್ಪತ್ರೆಗೆ ಬರುವ ಮುನ್ನವೇ ಆ ಹುಡುಗ ನಾಪತ್ತೆ ಆಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಪೊಲೀಸರು ಬರುವ ಮುನ್ನವೇ ಆ ಹುಡುಗ ಆಸ್ಪತ್ರೆಯಿಂದ ನಾಪತ್ತೆ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹುಮೈರಾ ಯುವಕನೊಬ್ಬನ ಜೊತೆ ಸಹಜೀವನ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರ ಮಧ್ಯ ಜಗಳವಾಗಿ ಹುಮೈರಾ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಗುತ್ತಿದೆ. ಆಕೆಯ ಕತ್ತಿನ ಸುತ್ತ ಗಾಯಗಳು ಇವೆ ಎಂದು ವೈದ್ಯರು ತಿಳಿಸಿದ್ದು, ಮರಣೋತ್ತರ ಪರೀಕ್ಷೆಯಾಗಿದೆ. ವರದಿ ಬಂದ ನಂತರವೇ ನಿಖರ ಮಾಹಿತಿ ಸಿಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಚೀಪ್‌ ಪಬ್ಲಿಸಿಟಿ – ಹಾಟ್‌ ಬೆಡಗಿ ಉರ್ಫಿಗೆ ಬಿಸಿ ಮುಟ್ಟಿಸಿದ ಮುಂಬೈ ಪೊಲೀಸ್‌

ಸದಾ ತುಂಡುಡುಗೆ ಹಾಕಿಕೊಂಡು ಓಡಾಡುವ ಬಿಗ್ ಬಾಸ್ (Bigg Boss OTT) ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಅರೆಸ್ಟ್ ಆಗಿದ್ದಾರೆ ಎಂದು ಜಾಲತಾಣದಲ್ಲಿ ಹರಿದಾಡುತ್ತಿದ್ದ ವೀಡಿಯೋ ನಿಜವಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕಾಫಿ ಕುಡಿಯಲೆಂದು ಹೋಟೆಲ್‌ಗೆ ಹೋಗಿದ್ದ ಉರ್ಫಿಯನ್ನು (Urfi Javed) ಮಹಿಳಾ ಪೊಲೀಸ್ ಪೇದೆಗಳು ಅರೆಸ್ಟ್‌ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದ್ರೆ ಇದು ನಿಜವಲ್ಲ. ಚೀಪ್‌ ಪಬ್ಲಿಸಿಟಿಗಾಗಿ ಮಾಡಿದ ವೀಡಿಯೋ. ಇದರೊಂದಿಗೆ ಪೊಲೀಸ್ ಚಿಹ್ನೆ ಮತ್ತು ಸಮವಸ್ತ್ರ ದುರ್ಬಳಕೆ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ ಅಂತ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಸಮಾಜವನ್ನು ದಾರಿತಪ್ಪಿಸುವ ಈ ವಿಡಿಯೋದಲ್ಲಿ ಭಾಗಿಯಾಗಿರುವವರ ವಿರುದ್ಧ ಓಶಿವಾರಾ ಪೊಲೀಸ್‌ ಠಾಣೆಯಲ್ಲಿ ಸೆಕ್ಷನ್ 171, 419, 500, 34 ಐಪಿಸಿ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಈ ವೇಳೆ ನಕಲಿ ಪೊಲೀಸರನ್ನು ಬಂಧಿಸಲಾಗಿದೆ ಮತ್ತು ವೀಡಿಯೋಗೆ ಬಳಸಿದ್ದ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ ಅಂತಾ ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಉರ್ಫಿ ಅರೆಸ್ಟ್‌ ಮಾಡಿದ್ದು ನಿಜವೇ?
ಶುಕ್ರವಾರ ರೆಸ್ಟೋರೆಂಟ್‌ವೊಂದಕ್ಕೆ ಕಾಫಿ ಕುಡಿಯಲು ಹೋಟೆಲ್‌ಗೆ ಬಂದಿದ್ದ ಉರ್ಫಿಯನ್ನು (Urfi Javed) ಮಹಿಳಾ ಪೊಲೀಸ್ ಪೇದೆಗಳು ಕರೆದುಕೊಂಡು ಹೋಗಿ ಪೊಲೀಸ್ ವ್ಯಾನ್‌ನಲ್ಲಿ ಕೂರಿಸುವ ವಿಡಿಯೋ ಅದಾಗಿದ್ದು, ಪೊಲೀಸರು ಉರ್ಫಿಯನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿತ್ತು.

ಈ ವೀಡಿಯೋದಲ್ಲಿ ರೆಸ್ಟೋರೆಂಟ್ ಮುಂದೆಯೇ ಮಹಿಳಾ ಪೊಲೀಸರಿಗೆ ಉರ್ಫಿ ಪ್ರಶ್ನೆ ಮಾಡಿದ್ದರು. ಯಾಕಾಗಿ ನನ್ನನ್ನು ಅರೆಸ್ಟ್ (Arrest) ಮಾಡುತ್ತಿದ್ದೀರಿ ಎಂದು ಕೇಳಿದಾಗ ಪೊಲೀಸರು, ಅರೆಬರೆ ಬಟ್ಟೆ ಹಾಕಿಕೊಂಡು ಹೀಗೆ ಬೀದಿಗೆ ಬರಬಹುದೇ? ಎಂದು ಪ್ರಶ್ನೆ ಮಾಡಿದ್ದರು. ಆನಂತರ ಪೊಲೀಸ್ ವ್ಯಾನ್ ನಲ್ಲಿ ಉರ್ಫಿಯನ್ನು ಕೂರಿಸಿಕೊಂಡು ಹೊರಟಿದ್ದರು. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.

ಈ ಪ್ರಕರಣದ ಹೊರತಾಗಿ ಈ ಹಿಂದೆಯೇ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್, ಉರ್ಫಿ ಜಾವೇದ್ ಸಾರ್ವಜನಿಕವಾಗಿ ಅಶ್ಲೀಲತೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಮುಂಬೈ ಪೊಲೀಸರು ಉರ್ಫಿ ಜಾವೇದ್ ಗೆ ಸಮನ್ಸ್ ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಉರ್ಫಿ ಕೂಡ ಚಿತ್ರಾ ಕಿಶೋರ್ ವಾಘ್ ಮೇಲೆ ಆರೋಪ ಮಾಡಿದ್ದರು. ಇವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಮಾನಹಾನಿ ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ವಕೀಲರ ಮೂಲಕ ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ಉರ್ಫಿ ದೂರು ನೀಡಿದ್ದಾರೆ. ಅಲ್ಲದೇ, ತಮಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ರಕ್ಷಣೆ ನೀಡುವಂತೆ ಉರ್ಫಿ ಮನವಿ ಮಾಡಿದ್ದರು.

ಉರ್ಫಿ ಜಾವೇದ್ ಮಹಿಳೆಯರ ಮಾನ ಹರಾಜು ಹಾಕುವಂತಹ ಬಟ್ಟೆಗಳನ್ನು ಹಾಕುತ್ತಾರೆ. ಅಶ್ಲೀಲ ಹಾಗೂ ಅಸಭ್ಯವಾಗಿ ನಡೆದುಕೊಡುತ್ತಾರೆ. ಇಂತಹ ನಟಿಯ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದು ಚಿತ್ರಾ ಅವರು ಕೆಲ ದಿನಗಳ ಹಿಂದೆಯಷ್ಟೇ ದೂರು ದಾಖಲಿಸಿದ್ದರು. ಅಲ್ಲದೇ, ಅಸಹ್ಯ ಎನ್ನುವಂತಹ ಬಟ್ಟೆಗಳನ್ನು ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಚಿತ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಉರ್ಫಿ ಮಹಿಳಾ ಆಯೋಗಕ್ಕೆ ಮೊರೆ ಹೋಗಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ