ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Pope Francis : ಇಸ್ರೇಲ್-ಹಮಾಸ್ ಕದನ ವಿರಾಮ ಅಂತ್ಯ ಎಂದರೆ 'ಸಾವು, ವಿನಾಶ ಮತ್ತು ದುಃಖ' - ಪೋಪ್ ಫ್ರಾನ್ಸಿಸ್

Twitter
Facebook
LinkedIn
WhatsApp
Pope Francis : End of Israel-Hamas ceasefire means 'death, destruction and suffering'

ಪೋಪ್ ಫ್ರಾನ್ಸಿಸ್ (Pope Francis) ಭಾನುವಾರ ಇಸ್ರೇಲ್ ಮತ್ತು ಹಮಾಸ್ (Israel and Hamas) ನಡುವಿನ ಕದನ ವಿರಾಮ ಮುರಿದುಹೋಗಿರುವುದನ್ನು ನೋಡುವುದು “ನೋವು” ಎಂದು ಹೇಳಿದರು ಮತ್ತು ಒಳಗೊಂಡಿರುವ ಎಲ್ಲಾ ಪಕ್ಷಗಳು “ಸಾಧ್ಯವಾದಷ್ಟು ಬೇಗ” ಹೊಸ ಕದನ ವಿರಾಮವನ್ನು ಮರು ಸ್ಥಾಪಿಸುವರು ಎಂದು ಭರವಸೆ ವ್ಯಕ್ತಪಡಿಸಿದರು.

ಇಸ್ರೇಲಿ ಒತ್ತೆಯಾಳುಗಳು ಮತ್ತು ಪ್ಯಾಲೇಸ್ಟಿನಿಯನ್ ಕೈದಿಗಳ ವಿನಿಮಯಕ್ಕೆ ಅವಕಾಶ ನೀಡಿದ ಇಸ್ರೇಲಿ ಪಡೆಗಳು (Israeli forces) ಮತ್ತು ಹಮಾಸ್ ನಡುವಿನ ಹೋರಾಟದಲ್ಲಿ ಏಳು ದಿನಗಳ ವಿರಾಮ ಶುಕ್ರವಾರ ಅಂತ್ಯಗೊಂಡಿದೆ. ಭಾನುವಾರ ಇಸ್ರೇಲ್ ತನ್ನ ಬಾಂಬ್ ದಾಳಿಯ ಕಾರ್ಯಾಚರಣೆಯನ್ನು ಇನ್ನಷ್ಟು ಹೆಚ್ಚಿಸಿದೆ. 

ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ ಭುಗಿಲೆದ್ದ ಸಂಘರ್ಷದಲ್ಲಿ 1,200 ಇಸ್ರೇಲಿಗಳು (Israelis) ಕೊಲ್ಲಲ್ಪಟ್ಟರು ಮತ್ತು 200 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡರು. ಪ್ಯಾಲೆಸ್ಟೀನಿಯನ್ ಅಧಿಕಾರಿಗಳ (Palestinian officials) ಪ್ರಕಾರ ಭಾನುವಾರದ ವೇಳೆಗೆ 15,400 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟರು.

“ಕದನ ವಿರಾಮ ಮುರಿದು ಹೋಗಿರುವುದು ನೋವಿನ ಸಂಗತಿಯಾಗಿದೆ. ಇದರರ್ಥ ಸಾವು, ವಿನಾಶ ಮತ್ತು ದುಃಖ” (death, destruction and misery) ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. ಪೋಪ್ ಅವರ ಅನಾರೋಗ್ಯದ ಕಾರಣ ಅವರ ಸಹಾಯಕರೊಬ್ಬರು ಭಾನುವಾರದಂದು ಏಂಜೆಲಸ್ ನಲ್ಲಿ ಪ್ರಾರ್ಥನೆಯ ಸಮಯದಲ್ಲಿ ಈ ಸಂದೇಶವನ್ನು ಓದಿ ಹೇಳಿದರು.

“ಅನೇಕ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಆದರೆ ಅನೇಕರು ಇನ್ನೂ ಗಾಜಾದಲ್ಲಿದ್ದಾರೆ. ನಾವು ಅವರ ಬಗ್ಗೆ, ಅವರ ಕುಟುಂಬಗಳ ಬಗ್ಗೆ ಯೋಚಿಸುತ್ತೇವೆ, ಅವರು ತಮ್ಮ ಪ್ರೀತಿಪಾತ್ರರನ್ನು ಮತ್ತೆ ಅಪ್ಪಿಕೊಳ್ಳುವ ಭರವಸೆಯನ್ನು ಕಂಡಿದ್ದಾರೆ.”

“ಗಾಜಾದಲ್ಲಿ ಬಹಳಷ್ಟು ಸಂಕಟಗಳಿವೆ, ಮೂಲಭೂತ ಅವಶ್ಯಕತೆಗಳ ಕೊರತೆಯಿದೆ”,  “ಸಂಬಂಧಿಸಿದವರೆಲ್ಲರೂ ಸಾಧ್ಯವಾದಷ್ಟು ಬೇಗ ಕದನ ವಿರಾಮಕ್ಕಾಗಿ ಹೊಸ ಒಪ್ಪಂದವನ್ನು ತಲುಪಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.

ಶ್ವಾಸಕೋಶದ ಉರಿಯುತ್ತದಿಂದ ಪೋಪ್ ಫ್ರಾನ್ಸಿಸ್ ಅವರು ಚೇತರಿಸಿಕೊಳ್ಳುತ್ತಿರುವ ಕಾರಣ ದುಬೈ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಅಂತೇಯೇ ಸಾರ್ವಜನಿಕ ಭಾಷಣ ಮತ್ತು ಭೇಟಿಯಾನ್ನು ಕಡಿಮೆ ಮಾಡಿದ್ದಾರೆ. 

“ಆತ್ಮೀಯ ಸಹೋದರ ಸಹೋದರಿಯರೇ, ಶುಭೋದಯ. ಇಂದು ಕೂಡ ನಾನು ಎಲ್ಲವನ್ನೂ ಓದಲು ಸಾಧ್ಯವಾಗುವುದಿಲ್ಲ. ನಾನು ಉತ್ತಮವಾಗುತ್ತಿದ್ದೇನೆ, ಆದರೆ ನನ್ನ ಧ್ವನಿ ಇನ್ನೂ ಚೇತರಿಸಿಕೊಂಡಿಲ್ಲ (ಚೆನ್ನಾಗಿಲ್ಲ)” ಎಂದು ಏಂಜೆಲಸ್ ಆರಂಭದಲ್ಲಿ ಫ್ರಾನ್ಸಿಸ್ ಹೇಳಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist