ಪೊಲೀಸ್ ಭದ್ರತಾ ಕೊಠಡಿಗೆ ಡಿಕ್ಕಿ ಹೊಡೆದ ಲಾರಿ
Twitter
Facebook
LinkedIn
WhatsApp
ಮೈಸೂರು: ಕಬಿನಿ (Kabini) ಪೊಲೀಸ್ ಭದ್ರತಾ ಕೊಠಡಿಗೆ (Police security room) ಲಾರಿ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆ ಹೆಚ್ ಡಿ ಕೋಟೆ (HD Kote) ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ (Kabini Dam) ಬಳಿ ನಡೆದಿದೆ.
ಅದೃಷ್ಟವಶಾತ್ ಅನಾಹುತ ತಪ್ಪಿದೆ. ಚಾಲಕ ಲಾರಿ ನಿಲ್ಲಿಸಿ ವಿಳಾಸ ಕೇಳಲೆಂದು ಕೆಳಗೆ ಇಳಿದ್ದಿದ್ದಾನೆ. ಈ ವೇಳೆ ಇಳಿಜಾರು ಇದ್ದ ಕಾರಣ ಲಾರಿ ತಾನೆ ಸಾಗಿದ್ದು ಪೊಲೀಸ್ ಭದ್ರತಾ ಕೊಠಡಿಗೆ ಡಿಕ್ಕಿ ಹೊಡೆದಿದೆ.
ಪುಣ್ಯಕ್ಕೆ ಪೊಲೀಸ್ ಭದ್ರತಾ ಕೊಠಡಿಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ತಪ್ಪಿದೆ. ಸ್ಥಳಕ್ಕೆ ಕಬಿನಿ ಜಲಾಶಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.