ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪೋಕ್ಸೋ ಪ್ರಕರಣ ; ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ

Twitter
Facebook
LinkedIn
WhatsApp
ಪೋಕ್ಸೋ ಪ್ರಕರಣ ; ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ

ಚಿತ್ರದುರ್ಗ: ಕಳೆದ 13 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು (Shivamurthy Murugha Sharanaru) ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮುರುಘಾ ಶ್ರೀಗಳಿಗೆ (Karnataka High Court) ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಮುರುಘಾ ಶ್ರೀ ವಿರುದ್ಧ ಎರಡು ಪೋಕ್ಸೋ ಪ್ರಕರಣ(POSCO Case) ದಾಖಲಾಗಿತ್ತು. ನ.8 ರಂದು ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದರೂ ಎರಡನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿಯಿದ್ದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರಲಿಲ್ಲ.

ಜಾಮೀನು ಆದೇಶ ನೀಡುವ ಚಿತ್ರದುರ್ಗದಲ್ಲಿ ನೆಲೆಸುವಂತಿಲ್ಲ ಎಂದು ಕೋರ್ಟ್‌ ಷರತ್ತು ವಿಧಿಸಿದ ಹಿನ್ನಲೆಯಲ್ಲಿ ಶ್ರೀಗಳು ಜೈಲಿನಿಂದ ಬಿಡುಗಡೆಯಾದ ಬಳಿಕ  ದಾವಣಗೆರೆ ಕಡೆ ಹೊರಟಿದ್ದಾರೆ.

ವಿಚಾರಣೆ ಮುಗಿಯುವವರೆಗೂ ಚಿತ್ರದುರ್ಗಕ್ಕೆ ಹೋಗುವಂತಿಲ್ಲ. ಇಬ್ಬರ ಶ್ಯೂರಿಟಿಯನ್ನು ಒದಗಿಸಬೇಕು. ವೀಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಎರಡು ಲಕ್ಷ ರೂ. ಬಾಂಡ್ ಶ್ಯೂರಿಟಿ ನೀಡಬೇಕು. ಪಾಸ್‌ಪೋರ್ಟ್‌ ಅನ್ನು ಕೋರ್ಟ್‌ ವಶಕ್ಕೆ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂತಹ ಕೃತ್ಯ ಪುನರಾವರ್ತನೆಯಾಗಬಾರದು ಎಂದು ಷರತ್ತು ವಿಧಿಸಿದೆ.

ಮಾಜಿ ಸೈನಿಕನಿಗೆ ಗುಂಡಿಕ್ಕಿ ಹತ್ಯೆ – ಆರೋಪಿಗಳನ್ನು ಬಡಿದು ಕೊಂದ ಗ್ರಾಮಸ್ಥರು

ಪಟ್ನಾ: ಮಾಜಿ ಸೈನಿಕನನ್ನು (Ex Soldier) ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಗ್ರಾಮಸ್ಥರು ಬಡಿದು ಹತ್ಯೆಗೈದ ಘಟನೆ ಬಿಹಾರದ (Bihar) ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ. ಮತ್ತೋರ್ವ ದಾಳಿಕೋರನ ಮೇಲೂ ಗ್ರಾಮಸ್ಥರು ಹಲ್ಲೆ ನಡೆಸಿದ್ದು ಆತ ತೀವ್ರ ಅಸ್ವಸ್ಥಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಮಾಜಿ ಸೈನಿಕನನ್ನು ಬಿಜೇಂದ್ರ ಸಿಂಗ್ (55) ಎಂದು ಗುರುತಿಸಲಾಗಿದೆ. ಗುಂಪಿನಿಂದ ಹತ್ಯೆಗೀಡಾದ ಇಬ್ಬರು ದಾಳಿಕೋರರನ್ನು ಮಿಥಿಲೇಶ್ ಕುಮಾರ್ (23) ಮತ್ತು ಆದಿತ್ಯ ಕುಮಾರ್ (25) ಎಂದು ಗುರುತಿಸಲಾಗಿದೆ. ಗಾಯಗೊಂಡವನನ್ನು ಅಜೀತ್ ಕುಮಾರ್ ಎಂದು ಗುರುತಿಸಲಾಗಿದೆ.

ಬೈಕ್‍ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ನಿವೃತ್ತ ಸೇನಾ ಯೋಧನ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಮೂವರು ದಾಳಿಕೋರರನ್ನು ಹಿಂಬಾಲಿಸಿ ಹಿಡಿದಿದ್ದಾರೆ. ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಗ್ರಾಮಸ್ಥರು ದಾಳಿಕೋರರನ್ನು ಹಿಡಿದಾಗ ಗುಂಡು ಹಾರಿಸಲಾಗಿದ್ದು, ಅಂಕಿತ್ ಕುಮಾರ್ ಎಂಬಾತ ಗಾಯಗೊಂಡಿದ್ದಾನೆ.

ಮಾಜಿ ಸೈನಿಕನ ಹತ್ಯೆಯ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಕರಣದ ತನಿಖೆಗೆ ಪೊಲೀಸರ (Police) ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ