ಭಾನುವಾರ, ಸೆಪ್ಟೆಂಬರ್ 8, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಿಎಂ ಕಿಸಾನ್: 15ನೇ ಕಂತಿನ ಹಣ ಬಿಡುಗಡೆ

Twitter
Facebook
LinkedIn
WhatsApp
ಪಿಎಂ ಕಿಸಾನ್: 15ನೇ ಕಂತಿನ ಹಣ ಬಿಡುಗಡೆ

ರಾಂಚಿ, ನವೆಂಬರ್ 15: ಪಿಎಂ ಕಿಸಾನ್ ಸ್ಕೀಮ್​ನ 15ನೇ ಕಂತಿನ ಹಣ (PM Kisan Scheme) ಬಿಡುಗಡೆ ಅಗಿದೆ. ಆಗಸ್ಟ್​ನಿಂದ ನವೆಂಬರ್​ವರೆಗಿನ ಅವಧಿಗೆ ಒಟ್ಟು 18,000 ಕೋಟಿ ರೂ ಹಣವನ್ನು ಪಿಎಂ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಜಾರ್ಖಂಡ್​ನ ಖೂಂಟಿಯಲ್ಲಿ (Khunti, Jharkhand) ನಡೆದ ಕಾರ್ಯಕ್ರಮದ ವೇಳೆ ಪ್ರಧಾನಿಗಳಿಂದ 15ನೇ ಕಂತಿನ ಹಣ ರಿಲೀಸ್ ಆಗಿದೆ. ಒಟ್ಟು 8.5 ಕೋಟಿ ರೈತರ ಖಾತೆಗಳಿಗೆ ತಲಾ 2,000 ರೂ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ.

2019ರ ಫೆಬ್ರವರಿಯಲ್ಲಿ ಈ ಯೋಜನೆ ಆರಂಭಗೊಂಡಿತು. ವರ್ಷಕ್ಕೆ 6 ಸಾವಿರ ರೂಗಳನ್ನು ತಲಾ 2,000 ರೂಗಳ 3 ಕಂತುಗಳಲ್ಲಿ ಸರ್ಕಾರವು ಕೃಷಿಕ ಕುಟುಂಬಗಳಿಗೆ ನೀಡುತ್ತಿದೆ. ಅದರಂತೆ ಈವರೆಗೆ 15 ಕಂತುಗಳನ್ನು ನೀಡಿದೆ. ಇಲ್ಲಿಯವರೆಗೆ ಸರ್ಕಾರ ಬಿಡುಗಡೆ ಮಾಡಿರುವ ಹಣದ ಮೊತ್ತ 2.75 ಲಕ್ಷ ಕೋಟಿ ರೂ ಆಗಿದೆ.

ಒಂದು ಹಣಕಾಸು ವರ್ಷದಲ್ಲಿ ಏಪ್ರಿಲ್​ನಿಂದ ಜುಲೈವರೆಗೆ ಒಂದು ಕಂತು; ಆಗಸ್ಟ್​ನಿಂದ ನವೆಂಬರ್​ವರೆಗೂ ಇನ್ನೊಂದು ಕಂತು; ಹಾಗು ಡಿಸೆಂಬರ್​ನಿಂದ ಮಾರ್ಚ್​ವರೆಗೆ ಮಗದೊಂದು ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತದೆ. ಸ್ವಂತವಾಗಿ ಕೃಷಿ ಜಮೀನು ಹೊಂದಿರುವ ರೈತರು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರು.

ಪಿಎಂ ಕಿಸಾನ್ ಯೋಜನೆ; ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿನ ಹಣ ಬಿಡುಗಡೆ ಆಗಿದೆ. ನೀವು ಫಲಾನುಭವಿಗಳಾಗಿದ್ದೂ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲದೇ ಹೋಗಿದ್ದರೆ, ಈ ಬಾರಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಒಮ್ಮೆ ಪರೀಕ್ಷಿಸಿ. ಅದರ ಕ್ರಮ ಹೀಗಿದೆ…

  • ಪಿಎಂ ಕಿಸಾನ್ ಸ್ಕೀಮ್​ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ: pmkisan.gov.in
  • ತುಸು ಕೆಳಗೆ ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಅನ್ನು ನೋಡಬಹುದು.
  • ಅಲ್ಲಿ ವಿವಿಧ ಟ್ಯಾಬ್​​ಗಳಿದ್ದು, ಅದರಲ್ಲಿ ಬೆನಿಫಿಶಿಯರಿ ಲಿಸ್ಟ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  • ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ದುಕೊಂಡು, ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ.

ಈಗ ಆ ಗ್ರಾಮದಲ್ಲಿ ಇರುವ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಕಾಣಬಹುದು.

ನೀವು ಇತ್ತೀಚೆಗೆ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದರೆ, ಬೆನಿಫಿಶಿಯರಿ ಸ್ಟೇಟಸ್ ಅನ್ನು ಪರಿಶೀಲಿಸಬಹುದು.

  • ಫಾರ್ಮರ್ಸ್ ಕಾರ್ನರ್​ನಲ್ಲಿ ನೋ ಯುವರ್ ಸ್ಟೇಟಸ್ ಎಂಬ ಟ್ಯಾಬ್ ಕ್ಲಿಕ್ ಮಾಡಿ.
  • ಅಲ್ಲಿ ರಿಜಿಸ್ಟ್ರೇಶನ್ ನಂಬರ್ ದಾಖಲಿಸಿ ಸ್ಟೇಟಸ್ ಪರಿಶೀಲಿಸಬಹುದು.

ರಿಜಿಸ್ಟ್ರೇಶನ್ ಸಂಖ್ಯೆ ಗೊತ್ತಿಲ್ಲದೇ ಇದ್ದರೆ ನಿಮ್ಮ ನೊಂದಾಯಿತು ಮೊಬೈಲ್ ನಂಬರ್ ಅಥವಾ ಆಧಾರ್ ನಂಬರ್ ಮೂಲಕ ರಿಜಿಸ್ಟ್ರೇಶನ್ ನಂಬರ್ ಪಡೆಯಬಹುದು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ