ಗುರುವಾರ, ನವೆಂಬರ್ 30, 2023
ಭಾರತದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಮರು ಆಯ್ಕೆ; ಬಿಸಿಸಿಐ ಘೋಷಣೆ!-ಪ್ರಿನ್ಸಿಪಾಲ್‌ ಕಿರುಕುಳಕ ಆರೋಪ ; ಮನನೊಂದು ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ!-ಕುಂದಾಪುರ : ಅಜ್ಜನ ಅಂತ್ಯಕ್ರಿಯೆಗೆ ಬರುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಎರಡು ಗಂಟೆಯ ಅಂತರದಲ್ಲಿ ಮೊಮ್ಮಗ ಸಾವು!-ಬಂಟ್ವಾಳ : ಒಂದೇ ದಿನ ನಾಪತ್ತೆಯಾಗಿದ್ದ ಅಕ್ಕಪಕ್ಕ ಮನೆಯ ಯುವಕ - ಯುವತಿ ಕೇರಳದಲ್ಲಿ ಪತ್ತೆ...!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-WWE ಸೂಪರ್ ಸ್ಟಾರ್ ಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ; ಏನಿದು ಪ್ರಕರಣ..!-ಬೈಕ್ ನಲ್ಲಿ ಬಂದು ಗುಂಡು ಹಾರಿಸುತ್ತಿದ್ದವರನ್ನು ಪೊರಕೆ ಹಿಡಿದು ಹೋಡಿಸಿದ ಮಹಿಳೆ ; ಇಲ್ಲಿದೆ ವಿಡಿಯೋ-ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ದರ್ಶನಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾತದಿಂದ ಸಾವು!-ಗುಲಾಬ್‌ ಜಾಮೂನ್‌ನಲ್ಲಿ ಬಿಳಿ ಹುಳ ; ವಿಡಿಯೋ ವೈರಲ್-ಚೀನಾದಲ್ಲಿ ಇನ್‌‌ಫ್ಲುಯೆನ್ಸಾ ವೈರಸ್ ಭೀತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶೀಘ್ರದಲ್ಲೇ ಪಿಎಂ ಕಿಸಾನ್ 15 ನೇ ಕಂತಿನ ಹಣ ಬಿಡುಗಡೆ ಸಾಧ್ಯತೆ...!

Twitter
Facebook
LinkedIn
WhatsApp
ಶೀಘ್ರದಲ್ಲೇ ಪಿಎಂ ಕಿಸಾನ್ 15 ನೇ ಕಂತಿನ ಹಣ ಬಿಡುಗಡೆ ಸಾಧ್ಯತೆ...!

ನವದೆಹಲಿ, ಅಕ್ಟೋಬರ್ 10: ರೈತರ ವ್ಯವಸಾಯ ಕಾರ್ಯಗಳಿಗೆ ಧನಸಹಾಯ ಒದಗಿಸಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪಿಎಂ ಕಿಸಾನ್ ಯೋಜನೆಯಲ್ಲಿ (PM Kisan Yojana 15th Installment) 15ನೇ ಕಂತಿನ ಹಣ ಈ ತಿಂಗಳೇ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ. ಯೋಜನೆಯ 14ನೇ ಕಂತಿನ ಹಣ ಜುಲೈ 27ರಂದು ಬಿಡುಗಡೆ ಆಗಿತ್ತು. ಈಗ 15ನೇ ಕಂತಿನ ಹಣ ನವೆಂಬರ್ 30ರೊಳಗೆ ರಿಲೀಸ್ ಆಗಲಿದೆ. ಕೆಲ ವರದಿಗಳ ಪ್ರಕಾರ ನವೆಂಬರ್ 27 ಅಥವಾ 30ರಂದು ರೈತರ ಖಾತೆಗಳಿಗೆ 2,000 ರೂ ಹಣ ಬಿಡುಗಡೆ ಆಗಬಹುದು ಎನ್ನಲಾಗಿದೆ. ಆದರೆ, ಸರ್ಕಾರದಿಂದ ಈ ಬಗ್ಗೆ ಅಧಿಕೃತ ಮಾಹಿತಿ ಒದಗಿಸಲಾಗಿಲ್ಲ. ಪಿಎಂ ಕಿಸಾನ್ ಪೋರ್ಟಲ್​ನಲ್ಲೂ ಮಾಹಿತಿ ನೀಡಲಾಗಿಲ್ಲ.

2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಈವರೆಗೂ 14 ಕಂತುಗಳನ್ನು ರೈತರ ಖಾತೆಗಳಿಗೆ ಕಳುಹಿಸಲಾಗಿದೆ. ಒಂದು ವರ್ಷದಲ್ಲಿ ತಲಾ 2,000 ರೂಗಳ ಮೂರು ಕಂತುಗಳ ಹಣ ಬಿಡುಗಡೆ ಮಾಡಲಾಗುತ್ತದೆ. ಏಪ್ರಿಲ್​ನಿಂದ ಜುಲೈ; ಆಗಸ್ಟ್​ನಿಂದ ನವೆಂಬರ್; ಹಾಗು ಡಿಸೆಂಬರ್​ನಿಂದ ಮಾರ್ಚ್ ಹೀಗೆ ಪ್ರತೀ ನಾಲ್ಕು ತಿಂಗಳ ಅವಧಿಗೆ ಒಂದು ಕಂತನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತದೆ.

ಪಿಎಂ ಕಿಸಾನ್ ಯೋಜನೆ ಪಡೆಯಲು ಅರ್ಹರು ಯಾರು?

ವ್ಯವಸಾಯ ಮಾಡುವ ರೈತರಿಗೆಂದು ಮಾಡಲಾದ ಸ್ಕೀಮ್ ಇದು. ಅಂದರೆ ಜಮೀನು ಹೊಂದಿರುವ ರೈತರು ಇದರ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ. ವೃತ್ತಿಪರರು, ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಇತ್ಯಾದಿಯವರು ಫಲಾನುಭವಿಗಳ ಕುಟುಂಬದಲ್ಲಿ ಇರಬಾರದು ಎಂಬಿತ್ಯಾದಿ ಕೆಲ ನಿರ್ಬಂಧಗಳಿವೆ.

ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳ ಪಟ್ಟಿ ನೋಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ ವಿಳಾಸ ಇಂತಿದೆ: pmkisan.gov.in

ಇದರ ಮುಖ್ಯಪುಟದಲ್ಲಿ ಫಾರ್ಮರ್ಸ್ ಕಾರ್ನರ್ (Farmers Corner) ಎಂಬ ಸೆಕ್ಷನ್ ಕಾಣಬಹುದು. ಇಲ್ಲಿ ಇ ಕೆವೈಸಿ, ನ್ಯೂ ಫಾರ್ಮರ್ಸ್ ರಿಜಿಸ್ಟ್ರೇಶನ್, ನೋ ಯುವರ್ ಸ್ಟೇಟಸ್ ಇತ್ಯಾದಿ ನಾನಾ ಫೀಚರ್​ಗಳನ್ನು ನೀವು ನೋಡಬಹುದು. ಇದರಲ್ಲೇ ಇರುವ ಬೆನಿಫಿಶಿಯರಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಅನ್ನು ಆಯ್ದುಕೊಂಡು ನಿಮ್ಮ ಗ್ರಾಮವನ್ನೂ ಆರಿಸಿ. ಬಳಿಕ ಗೆಟ್ ರಿಪೋರ್ಟ್ ಕ್ಲಿಕ್ ಮಾಡಿದರೆ, ನಿಮ್ಮ ಗ್ರಾಮದಲ್ಲಿ ಯಾರಾರು ಈ ಸ್ಕೀಮ್ ಹೊಂದಿದ್ದಾರೋ ಅವರೆಲ್ಲರ ಹೆಸರಿರುವ ಪಟ್ಟಿ ಪ್ರತ್ಯಕ್ಷವಾಗುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ.

ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಇ ಕೆವೈಸಿ ಮಾಡಿಸಿ

ಒಂದು ವೇಳೆ ನೀವು ಯೋಜನೆಗೆ ನೊಂದಾಯಿಸಿದ್ದೂ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಇ ಕೆವೈಸಿ ಮಾಡದೇ ಹೋಗಿರುವ ಸಾಧ್ಯತೆ ಇರುತ್ತದೆ. ಅದನ್ನೂ ಆದಷ್ಟೂ ಬೇಗ ಮಾಡಿ.

ಫಾರ್ಮರ್ಸ್ ಕಾರ್ನರ್​ನಲ್ಲಿ ಇ ಕೆವೈಸಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ನಂಬರ್ ಅನ್ನು ಹಾಕಿ ಸರ್ಚ್ ಮಾಡಿ. ಆಧಾರ್​ಗೆ ಜೋಡಿತವಾದ ಮೊಬೈನ್ ನಂಬರ್​ಗೆ ಬರುವ ಒಟಿಪಿಯನ್ನು ಹಾಕಿ ಕೆವೈಸಿ ಪೂರ್ಣಗೊಳಿಸಬಹುದು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ