ಮಂಗಳವಾರ, ಡಿಸೆಂಬರ್ 5, 2023
ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ-ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ..!-ಇಂದಿರಾ ಗಾಂಧಿ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಇಂದು ಮಿಜೋರಾಂ ನೂತನ ಸಿಎಂ ಸ್ಥಾನಕ್ಕೆ ಸಜ್ಜು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಇಬ್ಬರು ಅಪ್ರಾಪ್ತ ಯುವತಿಯರೊಂದಿಗೆ ದೈಹಿಕ ಸಂಪರ್ಕ ; ಯುವಕ ಬಂಧನ!

Twitter
Facebook
LinkedIn
WhatsApp
ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಇಬ್ಬರು ಅಪ್ರಾಪ್ತ ಯುವತಿಯರೊಂದಿಗೆ ದೈಹಿಕ ಸಂಪರ್ಕ ; ಯುವಕ ಬಂಧನ!

ಬಂಟ್ವಾಳ: ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಇಬ್ಬರು ಅಪ್ರಾಪ್ತ ಯುವತಿಯರೊಂದಿಗೆ ದೈಹಿಕ ಸಂಪರ್ಕ ಹೊಂದಿದ ಆರೋಪದ ಮೇಲೆ ಯುವಕನ ಮೇಲೆ ಪೊಕ್ಸೋ ಪ್ರಕರಣ ದಾಖಲಿಸಿಕೊಂಡು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಾಲೆತ್ತೂರು ಮೂಲದ ಯುವತಿಯೊಬ್ಬಳಿಗೆ ಇಸ್ಟಾದಲ್ಲಿ ಹುಡುಗಿಯ ಹೆಸರಿನಲ್ಲಿ ಕೇರಳ ಮೂಲದ ಯುವಕ ಪರಿಚಯವಾಗಿದ್ದು, ಆತ್ಮೀಯತೆ ಬೆಳೆದು ದೈಹಿಕ ಸಂಬಂಧದ ಹಂತಕ್ಕೆ ತಲುಪಿದೆ. ಇದೇ ರೀತಿಯಲ್ಲಿ ಪಕ್ಕದ ಮನೆಯ ಯುವತಿಗೂ ವ್ಯಕ್ತಿ ಪರಿಚಯವಾಗಿದೆ. ಇಬ್ಬರು ಯುವತಿಯರು ತಮ್ಮ ವಿಚಾರ ಹಂಚಿಕೊಂಡಾಗ ಇನ್ಟಾಗ್ರಾಂ ನಲ್ಲಿ ಪರಿಚಯವಾದ ಯುವಕ ಒಬ್ಬನೇ ಎಂಬುದು ಬೆಳಕಿಗೆ ಬಂದಿದೆ.

ಇಬ್ಬರ ಜತೆಗೂ ದೈಹಿಕ ಸಂಪರ್ಕ ನಡೆಸಿದ ಯುವಕನ ವಿರುದ್ಧ ಕೆಲವು ದಿನಗಳ ಹಿಂದೆ ಯುವತಿ ಮನೆಯವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಅಪ್ರಾಪ್ತ ಓರ್ವ ಯುವತಿ ಗರ್ಭಿಣಿಯೆಂಬ ಮಾಹಿತಿ ಕೇಳಿ ಬರುತ್ತಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಪ್ರಕರಣದ ತನಿಖೆ ನಡೆಸಬೇಕಾಗಿದೆ.

ಮಂಗಳೂರು : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ : ಆರೋಪಿಗೆ 20 ವರ್ಷ ಜೈಲು ಶಿಕ್ಷೆ..!

ಮಂಗಳೂರು: ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಮಂಗಳೂರು ಪೋಕ್ಸೊ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಈ ಮಹತ್ವದ ತೀರ್ಪು ನೀಡಿದ್ದಾರೆ. ಬಾಲಕಿಗೆ 10.50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಹರಡೊಳ್ಳಿಯ ನಿವಾಸಿ ಶ್ರೀಕಾಂತ್ ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. ಬಜ್ಪೆ ಠಾಣೆ ವ್ಯಾಪ್ತಿಯ ಕರಂಬಾರ್ ಗ್ರಾಮದ ಕಂಪನಿಯ ಶೆಡ್‌ನಲ್ಲಿ ಬಾಲಕಿ ಪೋಷಕರೊಂದಿಗೆ ವಾಸವಾಗಿದ್ದಳು. ಆರೋಪಿ ಪಕ್ಕದ ಶೆಡ್‌ನಲ್ಲಿ ವಾಸವಾಗಿದ್ದ. ಪೋಷಕರು ಮನೆಯಲ್ಲಿ ಇಲ್ಲದ ವೇಳೆ ಪ್ರೀತಿಸುವ ನೆಪದಲ್ಲಿ ಬಾಲಕಿಯ ಮನವೊಲಿಸಿ ಏಪ್ರಿಲ್ 12, 2019ರಿಂದ ಹಲವಾರು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಇದರ ಫೋಟೋಗಳನ್ನು ತೆಗೆದುಕೊಂಡಿದ್ದ ಆರೋಪಿ, ಯಾರಿಗಾದರೂ ವಿಷಯ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಶಾಲೆಯಲ್ಲಿ ಅಸ್ವಸ್ಥಳಾಗಿ ಬಿದ್ದಿದ್ದ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಬಳಿಕ ಮಗುವಿಗೆ ಜನ್ಮ ನೀಡಿದ್ದ ಬಾಲಕಿ ಪೋಲಿಸ್ ದೂರು ದಾಖಲು ಮಾಡಿದ್ದಳು. ಬಜ್ಪೆ ಠಾಣೆಯಲ್ಲಿ ದಾಖಲಾಗಿದ್ದ ದೂರು ಆಧಾರಿಸಿ ಪ್ರಕರಣ ದಾಖಲು ಮಾಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ನಗರ ಉತ್ತರ ಎಸಿಪಿಯಾಗಿದ್ದ ಶ್ರೀನಿವಾಸ್ ಗೌಡ ಪ್ರಾರ್ಥಮಿಕ ತನಿಖೆ ನಡೆಸಿದರೆ ಹಾಗೂ ಎಸಿಪಿ ಕೆ ಯು.ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ