ತಮಿಳುನಾಡು ರಾಜಭವನ ಆವರಣಕ್ಕೆ ಪೆಟ್ರೋಲ್ ಬಾಂಬ್ ಎಸೆತ; ಆರೋಪಿ ಅರೆಸ್ಟ್!
ಚೆನ್ನೈ ಅಕ್ಟೋಬರ್ 25: ದುಷ್ಕರ್ಮಿಯೊಬ್ಬ ಬುಧವಾರ ಮಧ್ಯಾಹ್ನ ತಮಿಳುನಾಡು (Tamil Nadu) ರಾಜಭವನದ (Raj Bhavan) ಮುಖ್ಯ ಗೇಟ್ ಬಳಿ ಪೆಟ್ರೋಲ್ ಬಾಂಬ್ (Petrol bomb) ಎಸೆದಿದ್ದು, ಕರ್ತವ್ಯದಲ್ಲಿದ್ದ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ. ‘ಕರುಕ್ಕ’ ವಿನೋದ್ ಎಂಬಾತನ್ನು ತಕ್ಷಣ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಡಿಎಂಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದಿದ್ದಾರೆ.
ಇಂದು ರಾಜಭವನದ ಮೇಲೆ ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗಿದ್ದು, ಇದು ತಮಿಳುನಾಡಿನ ನಿಜವಾದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ಡಿಎಂಕೆ ಜನರ ಗಮನವನ್ನು ಅತ್ಯಲ್ಪ ಆಸಕ್ತಿಯ ವಿಷಯಗಳತ್ತ ತಿರುಗಿಸುವಲ್ಲಿ ನಿರತವಾಗಿದ್ದರೆ, ಅಪರಾಧಿಗಳು ಬೀದಿಗಿಳಿದಿದ್ದಾರೆ. ಫೆಬ್ರವರಿ 2022 ರಲ್ಲಿ ಚೆನ್ನೈನಲ್ಲಿರುವ ತಮಿಳುನಾಡು ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದ ಅದೇ ವ್ಯಕ್ತಿ ಇಂದು ರಾಜಭವನದ ಮೇಲಿನ ದಾಳಿಗೆ ಹೊಣೆಗಾರನಾಗಿದ್ದಾನೆ. ಈ ನಿರಂತರ ದಾಳಿಗಳು ಡಿಎಂಕೆ ಸರ್ಕಾರವು ಈ ದಾಳಿಯನ್ನು ಪ್ರಾಯೋಜಿಸುತ್ತಿದೆ ಎನ್ನುವ ಸಂದೇಹ ಹುಟ್ಟುಹಾಕಿದೆ. ಎಂಕೆ ಸ್ಟಾಲಿನ್ ಅವರು ಎಂದಿನಂತೆ ಮುಂದಿನ ತಿರುವಿಗೆ ತಯಾರಿ ನಡೆಸುತ್ತಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಮಧ್ಯಾಹ್ನ 2:45 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಕರುಕ್ಕ ವಿನೋದ್ ಎಂದು ಗುರುತಿಸಲಾದ ವ್ಯಕ್ತಿ ರಾಜಭವನದ ಮುಖ್ಯ ಗೇಟ್‌ಗೆ ಎರಡು ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದಾನೆ. 2022 ರಲ್ಲಿ, ಚೆನ್ನೈನಲ್ಲಿರುವ ಬಿಜೆಪಿ ಕಚೇರಿಗೆ ಪೆಟ್ರೋಲ್ ಬಾಂಬ್ ಎಸೆದಿದ್ದಕ್ಕಾಗಿ ವಿನೋದ್ ನ್ನು ಬಂಧಿಸಲಾಗಿದ್ದು ಕೇವಲ ಮೂರು ದಿನಗಳ ಹಿಂದೆ ಬಿಡುಗಡೆ ಮಾಡಲಾಯಿತು.
ಸೈದಾಪೇಟೆ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್‌ಗಳಲ್ಲಿ ಪೆಟ್ರೋಲ್ ಕದ್ದ ವಿನೋತ್, ಬಳಿಕ ರಾಜಭವನದತ್ತ ನಡೆದುಕೊಂಡು ಹೋಗಿ ಎರಡು ಬಾಟಲಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮುಖ್ಯ ಗೇಟ್‌ಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯ ಗೇಟ್‌ನಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ತಂಡವು ಎರಡು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯುವ ಮೊದಲು ಅವರನ್ನು ತಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.