ಚೆನ್ನೈನಲ್ಲಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ; ಇಲ್ಲಿದೆ ಅವಾಂತರದ ಕೆಲವು ಫೋಟೋಸ್..!
ಚೆನ್ನೈ:ಮಿಚಾಂಗ್ ಚಂಡ ಮಾರುತ ಸೃಷ್ಟಿಸಿದ ಅವಾಂತರದಿಂದಾಗಿ ಚೆನ್ನೈನಲ್ಲಿ ದಾಖಲೆಯ ಮಳೆ ಸುರಿದಿದೆ. ಮಳೆಯಿಂದಾಗಿ ಇಡೀ ಚೆನ್ನೈ ಮಹಾನಗರ ಸೇರಿದಂತೆ ತಮಿಳುನಾಡಿನ ಹಲವೆಡೆ ಅನಾಹುತಗಳಾಗಿವೆ. ಚೆನ್ನೈನಲ್ಲಿಯೇ ಐದು ಮಂದಿ ಮೃತಪಟ್ಟಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರಿನ ಉದಯ(40) ಎಂದು ಗುರುತಿಸಲಾಗಿದೆ. ಆರೋಪಿ ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿಬಸ್‌ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಕಿರುಕುಳ ನೀಡಿದ ವಿಚಾರವನ್ನು ಆಕೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ತಿಳಿಸಿದ್ದು, ಪ್ರಯಾಣಿಕರು ಆತನನ್ನು ಇಳಿಯಲು ಬಿಡದೆ ತಡೆದಿದ್ದರು
ಈ ನಡುವೆ ಮಿಚಾಂಗ್ ಚಂಡಮಾರುತದ ದಿಕ್ಕು ಆಂಧ್ರಪ್ರದೇಶದ ಕಡೆಗೆ ತಿರುಗಿದೆ. ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳ ಭಾಗದಲ್ಲಿ ಮಂಗಳವಾರ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಎರಡು ದಿನದಿಂದ ಭಾರೀ ಪ್ರಮಾಣದಲ್ಲಿ ಚೆನ್ನೈ ಸೇರಿದಂತೆ ಹಲವು ಕಡೆ ಮಳೆಯಾಗುತ್ತಿದೆ. ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲೂ ಮಳೆಯಾಗಿದೆ. ಆದರೆ ಚೆನ್ನೈ ಮಹಾನಗರ ಮಾತ್ರ ತತ್ತರಿಸಿದೆ. ಎಂಟು ವರ್ಷದ ನಂತರ ಇಂತಹ ಮಹಾ ಮಳೆಯನ್ನು ಚೆನ್ನೈ ನೋಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಮಳೆಗೆ ಚೆನ್ನೈನಲ್ಲಿ ಐವರು ಜೀವ ಕಳೆದುಕೊಂಡಿದ್ದಾರೆ. ಮನೆ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದರೆ, ವಿದ್ಯುತ್ ಕಂಬ ಬಿದ್ದು ಇನ್ನೊಬ್ಬ ವ್ಯಕ್ತಿ ಜೀವಹಾನಿಯಾಗಿದೆ. ಎರಡು ಮೃತದೇಹಗಳು ನೀರಿನಲ್ಲಿ ಕೊಚ್ಚಿಕೊಂಡು ಬಂದಿವೆ.
ಚೆನ್ನೈನ ಹಲವಾರು ಬಡಾವಣೆಗಳು, ತಗ್ಗು ಪ್ರದೇಶಗಳಲ್ಲಿ ನುಗ್ಗಿದ್ದ ನೀರಿನ ಪ್ರವಾಹ ಕಡಿಮೆಯಾಗಿದೆ. ಮಳೆ ತೀವ್ರತೆಯೂ ಕಡಿಮೆಯಾಗಿದೆ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಮಳೆ ಪ್ರಮಾಣ ಕಡಿಮೆಯಾಗಿ ಸಹಜ ಸ್ಥಿತಿಗೆ ಚೆನ್ನೈ ಮರಳಬಹುದು ಎನ್ನುವ ನಿರೀಕ್ಷೆಯಿದೆ.