ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Paytm: ನಿರ್ಮಲ ಸೀತಾರಾಮನ್ ರನ್ನು ಬೇಟಿಯಾದ ಪೇಟಿಎಂ ಸಿಇಒ ವಿಜಯ್ ಶೇಕರ್ ; ಹಣಕಾಸು ಸಚಿವೆ ಕೊಟ್ಟ ಉತ್ತರವೇನು?

Twitter
Facebook
LinkedIn
WhatsApp
Paytm: ನಿರ್ಮಲ ಸೀತಾರಾಮನ್ ರನ್ನು ಬೇಟಿಯಾದ ಪೇಟಿಎಂ ಸಿಇಒ ವಿಜಯ್ ಶೇಕರ್ ; ಹಣಕಾಸು ಸಚಿವೆ ಕೊಟ್ಟ ಉತ್ತರವೇನು?

ಕಳೆದ ವಾರ ಆರ್‌ಬಿಐ ಪೇಟಿಎಂಗೆ ಅದರ ಜನಪ್ರಿಯ ಡಿಜಿಟಲ್ ವ್ಯಾಲೆಟ್, ಠೇವಣಿ ಮತ್ತು ಕ್ರೆಡಿಟ್ ಉತ್ಪನ್ನಗಳ ಸೇವೆಯನ್ನು ನಿಲ್ಲಿಸುವಂತೆ ಸೂಚಿಸಿತ್ತು. ಇದಾದ ಬಳಿಕ ಸಂಕಷ್ಟ ಬಗೆಹರಿಸಲು ವಿಜಯ್‌ ಶೇಖರ್‌ ಶರ್ಮಾ ಯತ್ನಿಸುತ್ತಿದ್ದು, ಅವರ ಪ್ರಯತ್ನಗಳು ಫಲ ನೀಡಿಲ್ಲ.

ಅಂದಿನಿಂದ ಪೇಟಿಎಂ ಷೇರುಗಳು ಶೇ. 40ಕ್ಕಿಂತ ಹೆಚ್ಚು ಕುಸಿತ ಕಂಡಿದ್ದವು. ಆದರೆ ಮಂಗಳವಾರ ಅಲ್ಪ ಗಳಿಕೆ ದಾಖಲಿಸಿದ್ದವು. ಇದೀಗ ಬುಧವಾರವೂ ಷೇರು ಶೇ. 10ರಷ್ಟು ಏರಿಕೆ ಕಂಡು ಒಂಚೂರು ಕಂಪನಿ ನಿಟ್ಟುಸಿರು ಬಿಡುವಂತೆ ಮಾಡಿದೆ.

ನಿರ್ಮಲಾ ಸೀತಾರಾಮನ್ ಅವರೊಂದಿಗಿನ ವಿಜಯ್‌ ಶೇಖರ್‌ ಶರ್ಮಾ ಅವರ ಭೇಟಿಯು 10 ನಿಮಿಷಗಳ ಕಾಲ ನಡೆಯಿತು. ಈ ವೇಳೆ ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಹಣಕಾಸು ಸಚಿವರು ಪೇಟಿಎಂ ಸಿಇಒಗೆ ತಿಳಿಸಿದರು ಈ ವಿಷಯದ ಬಗ್ಗೆ ತಿಳಿದಿರುವ ಜನರನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಆರ್‌ಬಿಐನೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವಂತೆ ಹಾಗೂ ಅವರ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಪೇಟಿಎಂಗೆ ಸೂಚಿಸಲಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.ವಿಜಯ್‌ ಶೇಖರ್‌ ಶರ್ಮಾ ಅವರು ನಿಯಂತ್ರಕ ಕಳವಳಗಳ ಬಗ್ಗೆ ಚರ್ಚಿಸಲು ಮಂಗಳವಾರ ಆರ್‌ಬಿಐ ಅಧಿಕಾರಿಗಳನ್ನೂ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
 

ಬುಧವಾರವೂ ಪೇಟಿಎಂ ಷೇರು ಏರಿಕೆ


ಮೂರು ದಿನಗಳ ತೀವ್ರ ಕುಸಿತದ ನಂತರ ಪೇಟಿಎಂ ಬ್ರ್ಯಾಂಡ್‌ನ ಮಾಲೀಕತ್ವ ಹೊಂದಿರುವ ಒನ್‌97 ಕಮ್ಯುನಿಕೇಶನ್ಸ್‌ ಲಿಮಿಟೆಡ್‌ನ ಷೇರುಗಳು ಮಂಗಳವಾರ ಚೇತರಿಸಿಕೊಂಡಿದ್ದವು. ಬಿಎಸ್‌ಇಯಲ್ಲಿ ದಿನದಂತ್ಯಕ್ಕೆ ಶೇ. 3.02 ಏರಿಕೆಯಾಗಿ 451.60 ರೂ.ಗೆ ವಹಿವಾಟು ಮುಗಿಸಿದ್ದವು. ಕಂಪನಿಯ ಷೇರುಗಳು ಎನ್‌ಎಸ್‌ಇಯಲ್ಲಿ ಶೇ. 3.26ರಷ್ಟು ಏರಿಕೆ ಕಂಡು 452.80 ರೂ.ನಲ್ಲಿ ಸ್ಥಿರವಾಗಿದ್ದವು.ಇದೀಗ ಬುಧವಾರವೂ ಕಂಪನಿ ಷೇರುಗಳು ಗಳಿಕೆ ದಾಖಲಿಸಿವೆ. ಬುಧವಾರ ಮಧ್ಯಾಹ್ನ 2.17ರ ಹೊತ್ತಿಗೆ ಕಂಪನಿ ಷೇರುಗಳು 45.10 ರೂ. ಅಥವಾ ಶೇ. 10 ರಷ್ಟು ಗಳಿಕೆ ಕಂಡು 496.25 ರೂ.ನಲ್ಲಿ ಲಾಕ್ ಆಗಿದ್ದವು.

 
ಇನ್ನು ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿದ ಆರೋಪವನ್ನು ಪೇಟಿಎಂ ತಳ್ಳಿ ಹಾಕಿದೆ. ತನ್ನ ವಿರುದ್ಧ ಇಂಥ ಯಾವ ಪ್ರಕರಣದಲ್ಲೂ ಸರಕಾರಿ ಸಂಸ್ಥೆಗಳು ತನಿಖೆ ನಡೆಸುತ್ತಿಲ್ಲ ಎಂದು ಕಂಪನಿ ಮಂಗಳವಾರ ಪ್ರಕಟಣೆಯಲ್ಲಿ ಹೇಳಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ವಿವಿಧ ವರದಿಗಳು, ವದಂತಿಗಳು ಊಹಾಪೋಹಗಳನ್ನು ಆಧರಿಸಿವೆ. ಇ.ಡಿ ತನಿಖೆಗೆ ಮುಂದಾಗಿದೆ ಎನ್ನುವ ಸುದ್ದಿಯಲ್ಲಿಯೂ ಹುರುಳಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist