ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪರ ಪುರುಷನ ಮೇಲೆ ಮೋಹ; ಗಂಡನಿಂದ ಪತ್ನಿಯ ಬರ್ಬರ ಹತ್ಯೆ

Twitter
Facebook
LinkedIn
WhatsApp
ಪರ ಪುರುಷನ ಮೇಲೆ ಮೋಹ; ಗಂಡನಿಂದ ಪತ್ನಿಯ ಬರ್ಬರ ಹತ್ಯೆ

ಬೆಂಗಳೂರು ಗ್ರಾಮಾಂತರ, ಜು.29: ಜಿಲ್ಲೆಯ ದೇವನಹಳ್ಳಿ(Devanahalli) ತಾಲೂಕಿನ ದೊಡ್ಡಸಣ್ಣೆ ಎನ್ನುವ ಗ್ರಾಮ. ಇದು ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣ ಸೇರಿದಂತೆ ದೇವನಹಳ್ಳಿಗೆ ಹೊಂದಿಕೊಂಡಿರುವ ಕಾರಣ ಸಾಕಷ್ಟು ಜನರು ಈ ಗ್ರಾಮದಲ್ಲಿ ಬಾಡಿಗೆ ಮನೆ ಬೆಂಗಳೂರು ಹಾಗೂ ಕೊಠಡಿಗಳನ್ನ ಮಾಡಿ ಹೊರಗಿನಿಂದ ಕೆಲಸ ಹರಸಿ ಬರುವವರಿಗೆ ಬಾಡಿಗೆಗೆ ನೀಡಿದ್ದಾರೆ. ಇದೇ ಗ್ರಾಮದ ಮುನಿಆಂಜಿನಪ್ಪ ಎನ್ನುವವ ಸಹ ಇದೇ ಗ್ರಾಮದಲ್ಲಿ ರಜನಿ ಎಂಬುವವರನ್ನ ಮದುವೆಯಾಗಿ ಅತ್ತೆಯ ಮನೆಯಲ್ಲೆ ಉಳಿದುಕೊಂಡಿದ್ದ. ಜೊತೆಗೆ ಅತ್ತೆಯ ಮನೆಬೆಂಗಳೂರು ಮೇಲೆಯೆ ಒಂದೆರಡು ರೂಂಗಳನ್ನ ಸಹ ನಿರ್ಮಾಣ ಮಾಡಿದ್ದು, ಅದನ್ನ ಕೆಲಸ ಹರಸಿ ಬಂದಿದ್ದ ಕೆಲ ಯುವಕರಿಗೆ ಬಾಡಿಗೆಗೆ ನೀಡಿದ್ದ. ಇನ್ನು ಇವರಿಗೆ ಆರತಿಗೊಂದು ಕೀರ್ತಿಗೊಂದು ಎಂಬಂತೆ ಇಬ್ಬರು ಮಕ್ಕಳು ಸಹ ಆಗಿದ್ರು. ಇನ್ನೂ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ ಅಂದುಕೊಳ್ಳುತ್ತಿರುವಾಗಲೆ ಶುಕ್ರವಾರ ಮನೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದ್ದು, ಪತಿಯೇ ಪತ್ನಿಯನ್ನ ಹತ್ಯೆ ಮಾಡಿದ್ದ. ಈ ಘಟನೆಯಿಂದ ಇಡೀ ಗ್ರಾಮವೇ ಒಂದು ಕ್ಷಣ ಬೆಚ್ಚಿ ಬಿದ್ದಿತ್ತು.

ಹೌದು ಮನೆಯಲ್ಲಿ ಅತ್ತೆ ಮಾವ ಮಕ್ಕಳು ಮತ್ತು ಬಾವಮೈದನ ಜೊತೆಯಲ್ಲೆ ಊಟ ಮಾಡಿ ಮಲಗುವುದಕ್ಕೆಂದು ಬೆಡ್ ರೂಂ ಗೆ ಹೋಗಿದ್ದ ಮುನಿಆಂಜಿನಪ್ಪ ಮತ್ತು ರಜನಿ ದಂಪತಿಯ ಕೊಠಡಿಯಿಂದ ಒಂದು ಕ್ಷಣ ಜೋರಾದ ಕೂಗಾಟ ಚೀರಾಟ ಕೇಳಿ ಬಂದಿದೆ. ಹೀಗಾಗಿ ಮನೆಯಲ್ಲಿದ್ದ ಅತ್ತೆ ಮಾವ ಹಾಗೂ ಬಾವಮೈದ ಗಾಬರಿಗೊಂಡು, ರೂಮ್​ನ ಬಾಗಿಲು ಮುರಿದ ಮನೆಯವರು ಹಾಗೂ ಅಕ್ಕ ಪಕ್ಕದವರು ಒಳ ನುಗ್ಗಿದ್ದಾರೆ. ಈ ವೇಳೆ ಕೊಠಡಿಯೊಳಗೆ ಹೋಗಿದ್ದ ರಜನಿ ರಕ್ತದ ಮಡುವಿನಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದು, ಗಂಡ ಕೈಯಲ್ಲಿ ಕಬ್ಬಿಣದ ಕತ್ತರಿ ಹಿಡಿದು ಕೊಲೆಗಾರನಾಗಿ ನಿಂತಿದ್ದ.

ಇನ್ನು ಮಗಳು ಸಾವು ಬದುಕಿನ ನಡುವೆ ನರಳಾಡುತ್ತಿದ್ದನ್ನ ಕಂಡ ಮನೆವರು ಕೂಡಲೆ ಕಾರಿನಲ್ಲಿ ಆಕೆಯನ್ನ ದೇವನಹಳ್ಳಿಯ ಖಾಸಗಿ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ, ಅಷ್ಟರಲ್ಲೆ ತೀವ್ರ ರಕ್ತ ಸ್ರಾವದಿಂದ ಬಳಲಿದ ರಜನಿ ನೋಡ ನೋಡುತ್ತಿದ್ದಂತೆ ಮನೆಯವರ ಕಣ್ಮುಂದೆಯೇ ಕೊನೆಯುಸಿರೆಳೆದಿದ್ದಾಳೆ.

ಬಳಿಕ ಗ್ರಾಮಸ್ಥರು ದೇವನಹಳ್ಳಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಹೀಗಾಗಿ ದೇವನಹಳ್ಳಿ ಪೊಲೀಸರು ಕೂಡಲೆ ಸ್ಥಳಕ್ಕೆ ದೌಡಾಯಿಸಿ ಬಂದಿದ್ದು, ಮನೆಯಲ್ಲಿದ್ದ ರಕ್ತ ಸಿಕ್ತವಾದ ಕತ್ತರಿ ಹಾಗೂ ಕೊಲೆ ಮಾಡಿದ್ದ ಗಂಡ ಮುನಿ ಆಂಜಿನಪ್ಪನನ್ನ ವಶಕ್ಕೆ ಪಡೆದು ಮೃತದೇಹವನ್ನ ಶವಾಗಾರಕ್ಕೆ ರವಾನಿಸಿದ್ದಾರೆ. ಇನ್ನು ದುಃಖದ ಮಡುವಿನಲ್ಲಿದ್ದ ರಜನಿಯ ಪೋಷಕರು ಅಳಿಯ ಜೈಲು ಪಾಲಾಗಿದ್ರೆ, ಮಗಳು ದುರಂತ ಅಂತ್ಯ ಕಂಡಳಲ್ಲ ಎನ್ನುವ ನೋವಿನಲ್ಲೆ ಮೃತದೇಹವನ್ನ ಮನೆಗೆ ತಂದು ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಆರೋಪಿಯನ್ನ ವಿಚಾರಿಸಿದ ಪೊಲೀಸರಿಗೆ ಬೆಳಕಿಗೆ ಬಂದಿದ್ದು ಪತ್ನಿಯ ಅಕ್ರಮ ಸಂಬಂಧದ ವಿಚಾರ

ಕೊಲೆಯಾದ ರಜನಿಗೆ 12 ವರ್ಷಗಳಿಂದೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ತಿಂದು ಉಂಡು ಮಲಗೋದಕ್ಕೆ ಸೇರಿದಂತೆ ಯಾವುದಕ್ಕೂ ಕಡಿಮೆಯಿಲ್ಲದೆ ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗಿತ್ತು. ಅಲ್ಲದೆ ಗಂಡ ಮುನಿ ಆಂಜಿನಪ್ಪ ಬೆಳಗಾದ್ರೆ, ಮನೆಯಿಂದ ತೋಟಕ್ಕೆ ತೆರಳಿ ಕೃಷಿ ಕೆಲಸದಲ್ಲಿ ನಿರತನಾಗುತ್ತಿದ್ದ. ಸಂಜೆ ಮನೆಗೆ ವಾಪಸ್ ಆಗುತ್ತಿದ್ದಂತೆ. ಮನೆಯಲ್ಲಿಯೇ ಇರುತ್ತಿದ್ದ ಪತ್ನಿ ರಜನಿ, ಮನೆಯ ಮೇಲಿದ್ದ ಕೊಠಡಿಯಲ್ಲಿ ಬಾಡಿಗೆಗೆ ಬಂದಿದ್ದವರ ಜೊತೆ ಸಲುಗೆಯಿಂದಿದ್ದು, ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದಳಂತೆ. ಬಳಿಕ ಇದೆ ಮುಂದೆ ರಜನಿಗೆ ಬಾಡಿಗೆ ಕೊಠಡಿಯಲ್ಲಿದ್ದ ಯುವಕನ ಜೊತೆ ಅನೈತಿಕ ಸಂಬಂದಕ್ಕೂ ತಿರುಗಿದೆ. ಹೀಗಾಗಿ ಸಾಕಷ್ಟು ಭಾರಿ ಪತ್ನಿಗೆ ಬುದ್ದಿವಾದ ಹೇಳಿದ್ರು, ಕೇಳದ ಹಿನ್ನೆಲೆಯಲ್ಲಿ ಬಾಡಿಗೆಗಿದ್ದ ಯುವಕನಿಗೆ ಕೊಠಡಿ ಖಾಲಿ ಮಾಡಿಸಿದ್ದರಂತೆ.

ಈ ಕುರಿತು ರಾಜಿ ಪಂಚಾಯತಿ ಮಾಡಿದ ನಂತರವು ರಜನಿ ಅನೈತಿಕ ಸಂಬಂಧ ಹೊಂದಿದ್ದ ಯುವಕನ ಜೊತೆ ಮನೆ ಬಿಟ್ಟು ಹೋಗಿದ್ದು, ನಂತರ ಎಲ್ಲರೂ ಸೇರಿ ಇಬ್ಬರಿಗೂ ಬುದ್ದಿವಾದ ಹೇಳಿ ಮನೆಯಲ್ಲಿರಿಸಿದ್ದರಂತೆ. ಹೀಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದ ಗಂಡ ಮುನಿ ಆಂಜಿನಪ್ಪ ಮುಂದೆಯಾದರೂ ಸರಿ ಹೋಗುತ್ತಾಳೆ ಅಂದುಕೊಂಡಿದ್ದು, ಸ್ವಲ್ಪ ದಿನದ ಮಟ್ಟಿಗೆ ಸುಮ್ಮನಿದ್ದದನ್ನ ಕಂಡು ಎಲ್ಲ ಸರಿಹೋಗಿದೆ ಎಂದು ಕೊಂಡಿದ್ದಾನೆ. ಆದ್ರೆ, ಗಂಡ ಇಲ್ಲದಿದ್ದಾಗ ಪತ್ನಿ ಪೋನ್​ನಲ್ಲಿ ನಿರಂತರವಾಗಿ ಬ್ಯುಸಿಯಾಗಿದ್ದಳಂತೆ. ಈ ಕುರಿತು ಅಂದು ಊಟ ಮಾಡಿ ರೂಮ್​ಗೆ ಹೋದ ಇಬ್ಬರ ನಡುವೆ ಜಗಳವಾಗಿ ರೊಚಿಗೆದ್ದ ಗಂಡ ಪಕ್ಕದಲ್ಲಿದ್ದ ಕಬ್ಬಿಣದ ಕತ್ತರಿಯನ್ನ ಕೈಗೆತ್ತಿಕೊಂಡು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ರಜನಿಗೆ ಹೊಟ್ಟೆ ಕೈ ಭುಜ ಸೇರಿದಂತೆ ಸಿಕ್ಕ ಸಿಕ್ಕ ಕಡೆಯಲೆಲ್ಲ ಕತ್ತರಿಯಿಂದ ಇರಿದು ಹತ್ಯೆ ಮಾಡಿದ್ದಾನೆ.

ಇನ್ನು ಗಂಡ ಮಕ್ಕಳಿದ್ದರೂ ಪರ ಪುರುಷನ ಜೊತೆ ಸಂಬಂಧವಿಟ್ಟುಕೊಂಡಿದಕ್ಕೆ ಪತ್ನಿ ದುರಂತ ಅಂತ್ಯ ಕಂಡರೆ, ಕೊಲೆ ಮಾಡಿದ ಕಾರಣಕ್ಕೆ ಗಂಡ ಸೆರೆಮನೆ ಸೇರಿದ್ದಾನೆ. ಈ ನಡುವೆ ಅಪ್ಪ ಅಮ್ಮನ ಪ್ರೀತಿಯಲ್ಲಿ ಬೆಳೆಯ ಬೇಕಿದ್ದ ಮಕ್ಕಳು ಮಾತ್ರ ಚಿಕ್ಕ ವಯಸ್ಸಿಗೆ ತಂದೆ ತಾಯಿಯನ್ನ ದೂರ ಮಾಡಿಕೊಂಡು ತಬ್ಬಲಿಗಳಾಗಿದ್ದು ಮಾತ್ರ ನಿಜಕ್ಕೂ ದುರಂತ.

Ramanagara News: ಜಡ್ಜ್ ಮನೆಯಲ್ಲೇ‌ ಕಳ್ಳತನ ಮಾಡಿದ್ದ ಖದೀಮನನ್ನು ಬಂಧಿಸಿದ ಪೊಲೀಸ್

ರಾಮನಗರ, ಜು.29: ನ್ಯಾಯಾಧೀಶ(Judge)ರ ಮನೆಯಲ್ಲೇ‌ ಕಳ್ಳತನ(Theft) ಮಾಡಿದ್ದ ಖದೀಮನನ್ನ ಇದೀಗ ಐಜೂರು ಪೊಲೀಸರು ಬಂಧಿಸಿದ್ದಾರೆ. ರಾಮನಗರ(Ramanagara) ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶೆಯವರ ಮನೆಯಲ್ಲಿ ಜು.25 ರಂದು ಕಳ್ಳತನ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಧೀಶೆ ಪತಿಯವರು ಐಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯ ಸನ್ನದ್ಧರಾದ ಪೊಲೀಸರು, ಇದೀಗ ಕಳ್ಳನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯಾಯಾಧೀಶರ ಕಾರು ಚಾಲಕನಿಂದಲೇ ನಡೆದಿದ್ದ ಕೃತ್ಯ

ಹೌದು, ಇವತ್ತೀನ ಕಾಲದಲ್ಲಿ ಯಾರನ್ನ ನಂಬುವುದು ತಿಳಿಯದಂತಹ ಪರಿಸ್ಥಿತಿ ಬಂದಿದೆ. ಅದರಂತೆ ನ್ಯಾಯಾಧೀಶರ ಕಾರು ಚಾಲಕನಿಂದಲೇ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಇತ 7 ಗ್ರಾಂ ಚಿನ್ನ, 30ಗ್ರಾಂ ಬೆಳ್ಳಿ ಕಳ್ಳತನವನ್ನ ಮಾಡಿ, ಎಸ್ಕೇಪ್ ಆಗಿದ್ದ. ಈ ಘಟನೆ ನಿಮಿತ್ತ ಐಜೂರು ಪೊಲೀಸರು ಕಾರ್ಯಾಚರಣೆ ನಡೆಸಿ ಕಾರು ಚಾಲಕನನ್ನ ಬಂಧಿಸಿದ್ದು, ಆರೋಪಿಯನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಟ್ರಂಡ್ಸ್ ಶಾಫಿಂಗ್ ಮಾಲ್ ಒಳಗೆ ನುಗ್ಗಿದ ಕಳ್ಳ; ಖದೀಮನಿಗಾಗಿ ಪೊಲೀಸರ ಶೋಧ

ದಾವಣಗೆರೆ: ನಗರದ ಬಿಪಿ ರಸ್ತೆಯಲ್ಲಿರುವ ಟ್ರೆಂಡ್ಸ್ ಶಾಫಿಂಗ್ ಮಾಲ್ ಒಳಗೆ ಕಳ್ಳ ನುಗ್ಗಿರುವ ಘಟನೆ ನಡೆದಿದೆ. ಬೆಳಗ್ಗೆ ಸೆಕ್ಯೂರಿಟಿಗೆ ಕಳ್ಳ ಕಾಣಿಸಿಕೊಂಡಿದ್ದು, ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಹಿನ್ನಲೆ ಕಳ್ಳನನ್ನು ಹಿಡಿಯಲು ಕಳೆದ ಮೂರು ಗಂಟೆಗಳಿಂದ ಪೊಲೀಸರು ಇಡೀ ಶಾಫಿಂಗ್​ ಮಾಲ್​ನ್ನು ಶೋಧ ಮಾಡುತ್ತಿದ್ದಾರೆ. ಹೌದು ಇದೀಗ ಡಾಗ್ ಸ್ಕ್ವಾಡ್, ಹಾಗೂ ಕೆಟಿಜೆ ನಗರ ಠಾಣೆ ಪೊಲೀಸರು ಸಿಸಿ ಕ್ಯಾಮರಾಗಳ ಪರಿಶೀಲನೆ ಮಾಡುತ್ತಿದ್ದು, ಶಾಪಿಂಗ್ ಮಾಲ್ ಮುಂಭಾಗದಲ್ಲಿ ಜನರು ಜಮಾಯಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist