ಬುಧವಾರ, ಮೇ 1, 2024
ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ-ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ-ಪೆನ್ ಡ್ರೈವ್ ಪ್ರಕರಣ: ಅಪ್ಪ- ಮಗನಿಗೆ ನೋಟಿಸ್!-ತೆಲಂಗಾಣದ ನಿಜಾಮಾಬಾದ್ ಕ್ಷೇತ್ರದ ಚುನಾವಣಾ AICC ಉಸ್ತುವಾರಿಯಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇಮಕ-ಅನೈತಿಕ ಸಂಬಂಧ ಶಂಕೆ ಕಾರಿಗೆ ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ!-Commercial LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ-ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!-ನಮ್ಮದು ಮತ್ತು ರೇವಣ್ಣಕುಟುಂಬವೇ ಬೇರೆ ಬೇರೆ; ಕುಮಾರಸ್ವಾಮಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Papaya: ಪಪ್ಪಾಯಿ ಹಣ್ಣಿನಲ್ಲಿರುವ ಅರೋಗ್ಯಕಾರಿ ಪ್ರಯೋಜನಗಳು ಏನು?

Twitter
Facebook
LinkedIn
WhatsApp
papaya, how to cut a papaya, papaya benefits, green papaya, papaya enzyme, papaya salad, papaya seeds, papaya and pregnancy,, papaya and pineapplehie, papaya and pineapple smoothie, papaya and acid reflux, papaya agave strain, papaya and diabetes, papaya art, papaya app, a papaya fruit, about papaya in hindi, are papaya good for dogs, papaya benefits for men, papaya benefits for women, papaya bomb strain, papaya body wash, papaya beneficios, benefits of papaya shake benefits of eating papaya at night, benefits of papaya juice, birds papaya, papaya color, papaya chicken, papaya calories, papaya clothing near me, papaya coral island, papaya cake strain, papaya carbs, calories in papaya, can dogs eat papaya, color papaya, carica papaya q, can we eat papaya at night, papaya digestive enzymes, papaya definition, papaya dearborn, papaya dish cloth, papaya drink, papaya drawing, does papaya taste like vomit, does papaya make you poop, dog papaya, dried papaya, does papaya affect pregnancy, Papaya: ಪಪ್ಪಾಯಿ ಹಣ್ಣಿನಲ್ಲಿರುವ ಅರೋಗ್ಯಕಾರಿ ಪ್ರಯೋಜನಗಳು ಏನು?

ಪರಂಗಿ ಅಥವಾ ಪಪ್ಪಾಯಿ ಹಣ್ಣು ತನ್ನಲ್ಲಿ ಅತಿ ಹೆಚ್ಚು ನೈಸರ್ಗಿಕವಾದ ಸಿಹಿ ಅಂಶವನ್ನು ಒಳಗೊಂಡ ಹಣ್ಣಾಗಿದೆ. ಪರಂಗಿ ಹಣ್ಣು ಸೇವಿಸುವುದರಿಂದ ಮನುಷ್ಯನ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ದೊರೆಯುತ್ತದೆ. ಪಪ್ಪಾಯ ಹಣ್ಣು ಉಪಯೋಗಿಸಿದರೆ ಮನುಷ್ಯನ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳುತ್ತದೆ. ಇದರ ಸೇವನೆಯಿಂದ ಹೆಚ್ಚಿನ ಜೀವಸತ್ವ ಮತ್ತು ಖನಿಜಾಂಶಗಳನ್ನು ಹೊಂದಬಹುದು. ಅಲ್ಲದೇ ಕ್ಯಾನ್ಸರ್, ಅಸ್ತಮಾ, ಮಧುಮೇಹ ರೋಗ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. 

ಇದರಲ್ಲಿರುವ ಪೋಟ್ಯಾಷಿಯಂ ಅಂಶದಿಂದಾಗಿ ಸಂಧಿವಾತ ರೋಗ ನಿವಾರಣೆಗೆ ಸಹಕಾರಿ. ಉತ್ತಮ ಜೀರ್ಣ ಶಕ್ತಿಯನ್ನು ಮತ್ತು ಹೃದಯ ರೋಗಗಳನ್ನು ನಿವಾರಿಸುವಲ್ಲಿ ತುಂಬಾ ಸಹಕಾರಿಯಾಗಿದೆ.

ಒಂದು ಮಧ್ಯಮ ಗಾತ್ರದ ಪಪ್ಪಾಯ ಹಣ್ಣಿನಲ್ಲಿ 68 ಕ್ಯಾಲೋರಿಗಳು ಇರುತ್ತದೆ. ಜಿಂಕ್ 0.13 ಮಿ.ಗ್ರಾಂ., ಕ್ಯಾಲ್ಸಿಯಂ 31 ಮಿ.ಗ್ರಾಂ., ಮ್ಯಾಗ್ನಿಷಿಯಂ 33 ಮಿ.ಗ್ರಾಂ., ಪೋಟ್ಯಾಷಿಯಂ 286 ಮಿ.ಗ್ರಾಂ., ಕಾರ್ಬೋಹೈಡ್ರೇಟ್ 50.1 ಗ್ರಾಂ., ನಾರು 2.7 ಗ್ರಾಂ., ಪ್ರೋಟಿನ್ 2.9 ಗ್ರಾಂ., ಸಕ್ಕರೆ 8.30 ಗ್ರಾಂ., ಓಮೆಗಾ 3 ಕೊಬ್ಬಿನ ಆಮ್ಲಗಳು-35.0 ಮಿ.ಗ್ರಾಂ. ಪೋಷಕಾಂಶಗಳು ಲಭ್ಯವಿರುತ್ತವೆ. ಪಪ್ಪಾಯ ಹಣ್ಣು ಸೇವನೆಯಿಂದ ಮನುಷ್ಯನ ಶರೀರಕ್ಕೆ ಈ ಮೇಲಿನ ಎಲ್ಲಾ ಲಾಭಾಂಶಗಳು ದೊರೆಯುತ್ತವೆ.

 

ಪರಂಗಿ ಹಣ್ಣಿನ ಸೇವನೆಯಿಂದ ಉಂಟಾಗುವ ಆರೋಗ್ಯದ ಲಾಭಗಳು ಒಂದೆರಡಲ್ಲ. ಮಹಿಳೆಯರಿಗೂ ಕೂಡ ಪರಂಗಿ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಹಲವಾರು ರೀತಿಯಲ್ಲಿ ಪರಂಗಿ ಹಣ್ಣಿನ ಉಪಯೋಗಗಳನ್ನು ನಿರೀಕ್ಷೆ ಮಾಡಬಹುದು.ಹೃದಯದ ಸಮಸ್ಯೆ, ಮುಟ್ಟಿನ ತೊಂದರೆ, ಕಣ್ಣುಗಳ ಆರೋಗ್ಯ ಹೀಗೆ ಅನೇಕ ವಿಧಗಳಲ್ಲಿ ಪರಂಗಿಹಣ್ಣಿನ ಪಾತ್ರ ನಿಮ್ಮ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ಈ ಲೇಖನದಲ್ಲಿ ಪರಂಗಿಹಣ್ಣಿನ ಆರೋಗ್ಯ ಪ್ರಯೋಜನಗಳನ್ನು ಕುರಿತು ಪರಿಚಯ ಮಾಡಿಕೊಡಲಾಗಿದೆ.

​ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿರಲು ಸಾಧ್ಯವಿಲ್ಲ

  • ಈಗಿನ ಪೀಳಿಗೆಯ ಜನರಲ್ಲಿ ಕೊಲೆಸ್ಟ್ರಾಲ್ ಅಂಶ ಜನರ ಆರೋಗ್ಯಕ್ಕೆ ಒಂದು ಶಾಪ ಎಂದು ಹೇಳಬಹುದು. ಏಕೆಂದರೆ ಸೇವನೆ ಮಾಡುವ ಹಲವಾರು ಆಹಾರ ಪದಾರ್ಥಗಳಲ್ಲಿ ಎಣ್ಣೆಯ ಜಿಡ್ಡಿನಂಶ ಸೇರಿರುತ್ತದೆ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚು ಮಾಡುತ್ತದೆ ಎಂದು ಹೇಳಲಾಗಿದೆ.
  • ಹೃದಯದ ಅಪಧಮನಿಗಳ ಭಾಗದಲ್ಲಿ ಕೊಲೆಸ್ಟ್ರಾಲ್ ಅಂಶ ಸೇರಿಕೊಂಡು ರಕ್ತ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತದೆ. ಇದರಿಂದ ಯಾವುದೇ ಸಂದರ್ಭದಲ್ಲಿ ಬೇಕಾದರೂ ಹೃದಯಘಾತ ಸಂಭವಿಸಬಹುದು. ಹೃದಯರಕ್ತನಾಳದ ಹಲವಾರು ಕಾಯಿಲೆಗಳಿಗೂ ಕೂಡ ಇದೇ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕಾರಣವಾಗುತ್ತದೆ.
  • ವಿಜ್ಞಾನಿಗಳು ತಮ್ಮ ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಪರಂಗಿಹಣ್ಣಿನ ಆಹಾರಪದ್ಧತಿಯ ಮೂಲಕ ಅಧ್ಯಯನ ನಡೆಸಿ ಒಂದು ವಿಚಾರವನ್ನು ಬಯಲು ಮಾಡಿದ್ದಾರೆ.
  • ಅದೇನೆಂದರೆ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿಕೊಳ್ಳಲು ಜನರು ತಮ್ಮ ಆಹಾರ ಪದ್ಧತಿಯಲ್ಲಿ ಆಗಾಗ ಪರಂಗಿಹಣ್ಣನ್ನು ಸೇರಿಸಿ ಸೇವನೆ ಮಾಡುವುದು ಒಳ್ಳೆಯ ಆರೋಗ್ಯದ ಬೆಳವಣಿಗೆ ಆಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

​ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಸುಲಭ ತಂತ್ರ

  • ಈಗಾಗಲೇ ಅತಿಯಾದ ಬೊಜ್ಜಿನ ಅಂಶವನ್ನು ತಮ್ಮ ದೇಹದಲ್ಲಿ ಹೊಂದಿ ಹೆಚ್ಚು ತೂಕವನ್ನು ಪಡೆದಿರುವ ಜನರು ಆರೋಗ್ಯಕರವಾದ ದೇಹದ ತೂಕದ ನಿರ್ವಹಣೆಯಲ್ಲಿ ಅನುಕೂಲವಾಗುವಂತೆ ಪರಂಗಿಹಣ್ಣನ್ನು ನಿಯಮಿತವಾಗಿ ಪ್ರತಿದಿನವೂ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.
  • ಒಂದು ಮೀಡಿಯಂ ಗಾತ್ರದ ಪರಂಗಿ ಹಣ್ಣಿನಲ್ಲಿ ಕೇವಲ 120 ಕ್ಯಾಲೋರಿಗಳು ಮಾತ್ರ ಸಿಗುತ್ತವೆ ಎಂಬುದು ಆರೋಗ್ಯ ತಜ್ಞರ ಲೆಕ್ಕಾಚಾರ.
  • ಇದರ ಜೊತೆಗೆ ಪರಂಗಿ ಹಣ್ಣಿನಲ್ಲಿ ನಾರಿನ ಅಂಶ ಹೆಚ್ಚು ಸಿಗುವುದರಿಂದ ಬೇರೆ ಬಗೆಯ ಅನಾರೋಗ್ಯಕರ ಆಹಾರಗಳನ್ನು ತಿನ್ನಬೇಕು ಎನ್ನುವ ನಿಮ್ಮ ಭಾವನೆಗಳಿಗೆ ಕಡಿವಾಣ ಹಾಕಿ ನಿಮ್ಮ ದೇಹದ ತೂಕವನ್ನು ನಿರ್ವಹಣೆ ಮಾಡುತ್ತದೆ. ಹಾಗಾಗಿ ದಪ್ಪ ಇರುವವರು ಸಣ್ಣ ಆಗಲು ಪರಂಗಿಹಣ್ಣನ್ನು ಪ್ರತಿದಿನ ಮಧ್ಯಾಹ್ನ ಊಟ ಆದ ಮೇಲೆ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಿ.

​ಮಧುಮೇಹಿಗಳಿಗೆ ತುಂಬಾ ಒಳ್ಳೆಯದು

  • ಸಾಮಾನ್ಯವಾಗಿ ನಾವೆಲ್ಲ ಗಮನಿಸಿರುವಂತೆ ಸಕ್ಕರೆ ಕಾಯಿಲೆ ಹೊಂದಿರುವ ಜನರು ಸಿಹಿ ಅಂಶವನ್ನು ಹೆಚ್ಚು ತಿನ್ನಬಾರದು ಎಂದು ಹೇಳುತ್ತಾರೆ. ಕಾಫಿ ಅಥವಾ ಚಹಾ ಕುಡಿದರೂ ಕೂಡ ಅವರು ಸಕ್ಕರೆ ಇಲ್ಲದೆ ಸೇವನೆ ಮಾಡಬೇಕು.
  • ಆದರೆ ಹಣ್ಣುಗಳಲ್ಲಿ ಕಂಡುಬರುವ ನೈಸರ್ಗಿಕವಾದ ಸಕ್ಕರೆ ಅಂಶ ಮಧುಮೇಹಿ ರೋಗಿಗಳಿಗೆ ತುಂಬಾ ಒಳ್ಳೆಯದು. ಪರಂಗಿ ಹಣ್ಣು ನಿಮ್ಮ ಅತ್ಯದ್ಭುತ ಆಯ್ಕೆಗಳಲ್ಲಿ ಒಂದಾಗಿದ್ದರೆ ನಿಮ್ಮ ಆರೋಗ್ಯ ಬಹಳಷ್ಟು ಸುಧಾರಿಸುತ್ತದೆ. ಪರಂಗಿ ಹಣ್ಣು ಸೇವನೆಯಿಂದ ನಿಮ್ಮ ದೇಹಕ್ಕೆ ಫೈಟೋನ್ಯೂಟ್ರಿಯೆಂಟ್ಸ್ ಅಂಶಗಳು ಮತ್ತು ವಿಟಮಿನ್ ಅಂಶಗಳು ಸಾಕಷ್ಟು ಸಿಗುವಂತಾಗಿ ಹೃದಯದ ಕಾಯಿಲೆಗಳಿಂದ ನಿಮ್ಮನ್ನು ದೂರ ಇರಿಸುತ್ತದೆ.
 

​ಮಧುಮೇಹಿಗಳಿಗೆ ತುಂಬಾ ಒಳ್ಳೆಯದು

  • ಸಾಮಾನ್ಯವಾಗಿ ನಾವೆಲ್ಲ ಗಮನಿಸಿರುವಂತೆ ಸಕ್ಕರೆ ಕಾಯಿಲೆ ಹೊಂದಿರುವ ಜನರು ಸಿಹಿ ಅಂಶವನ್ನು ಹೆಚ್ಚು ತಿನ್ನಬಾರದು ಎಂದು ಹೇಳುತ್ತಾರೆ. ಕಾಫಿ ಅಥವಾ ಚಹಾ ಕುಡಿದರೂ ಕೂಡ ಅವರು ಸಕ್ಕರೆ ಇಲ್ಲದೆ ಸೇವನೆ ಮಾಡಬೇಕು.
  • ಆದರೆ ಹಣ್ಣುಗಳಲ್ಲಿ ಕಂಡುಬರುವ ನೈಸರ್ಗಿಕವಾದ ಸಕ್ಕರೆ ಅಂಶ ಮಧುಮೇಹಿ ರೋಗಿಗಳಿಗೆ ತುಂಬಾ ಒಳ್ಳೆಯದು. ಪರಂಗಿ ಹಣ್ಣು ನಿಮ್ಮ ಅತ್ಯದ್ಭುತ ಆಯ್ಕೆಗಳಲ್ಲಿ ಒಂದಾಗಿದ್ದರೆ ನಿಮ್ಮ ಆರೋಗ್ಯ ಬಹಳಷ್ಟು ಸುಧಾರಿಸುತ್ತದೆ. ಪರಂಗಿ ಹಣ್ಣು ಸೇವನೆಯಿಂದ ನಿಮ್ಮ ದೇಹಕ್ಕೆ ಫೈಟೋನ್ಯೂಟ್ರಿಯೆಂಟ್ಸ್ ಅಂಶಗಳು ಮತ್ತು ವಿಟಮಿನ್ ಅಂಶಗಳು ಸಾಕಷ್ಟು ಸಿಗುವಂತಾಗಿ ಹೃದಯದ ಕಾಯಿಲೆಗಳಿಂದ ನಿಮ್ಮನ್ನು ದೂರ ಇರಿಸುತ್ತದೆ.
 

​ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ

  • ಫ್ಲೇವನಾಯ್ಡ್ ಅಂಶಗಳು ಮತ್ತು ವಿಟಮಿನ್ ಎ ಅಂಶ ಯಥೇಚ್ಛವಾಗಿ ಸಿಗುವ ಕಾರಣದಿಂದ ಕಣ್ಣುಗಳಿಗೆ ಪರಂಗಿಹಣ್ಣು ತುಂಬಾ ಒಳ್ಳೆಯದು ಎಂಬ ಮಾತಿದೆ.
  • ಕಣ್ಣುಗಳ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮನೆಯಲ್ಲಿ ಇರುವವರು ಕೂಡ ಪರಂಗಿ ಹಣ್ಣಿನ ಸೇವನೆ ಮಾಡಿದರೆ ಬಹಳಷ್ಟು ಬೇಗನೆ ಹುಷಾರಾಗಬಹುದು.
  • ಕಣ್ಣುಗಳ ಒಳಪದರವನ್ನು ತಂಪಾಗಿ ನೋಡಿಕೊಂಡು ದೃಷ್ಟಿಯನ್ನು ಹೆಚ್ಚು ಮಾಡುವ ಗುಣ ಪರಂಗಿ ಹಣ್ಣಿನಲ್ಲಿ ಕಂಡು ಬರುತ್ತದೆ. ವಯಸ್ಸಾದಂತೆ ಉಂಟಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಪರಂಗಿ ಹಣ್ಣು ಬರಲು ಬಿಡುವುದಿಲ್ಲ.
 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ