ಖ್ಯಾತ ನೈನಾಡ್ ಪಿಂಟೋ ಬೇಕರಿ, ನಯನ್ ಬೇಕರಿ ಮಾಲಕರಾದ ಸಿಲ್ವೆಸ್ಟರ್ ಪಿಂಟೋ ನೈನಾಡು ನಿಧನ
Twitter
Facebook
LinkedIn
WhatsApp
ಬಂಟ್ವಾಳ: ಖ್ಯಾತ ಪಿಂಟೋ ಬೇಕರಿ ನೈನಾಡ್ ಇದರ ಮಾಲಕರಾದ
ಸಿಲ್ವೆಸ್ಟರ್ ಪಿಂಟೋ ನೈನಾಡು ಇಂದು ಸಂಜೆ ಹೃದಯಘಾತದಿಂದ ನಿಧನ ಹೊಂದಿದ್ದಾರೆ.
30 ವರ್ಷಗಳ ಹಿಂದೆ ನಯನಾಡಿನಂತಹ ಸಣ್ಣ ಪ್ರದೇಶದಲ್ಲಿ ಬೇಕರಿ ಉದ್ಯಮ ಆರಂಭಿಸಿದ ಇವರ ಬೇಕರಿ ಇಂದು ನಯನ್ ಬೇಕರಿ ಹೆಸರಿನಲ್ಲಿ ಹಲವಾರು ಘಟಕಗಳನ್ನು ಹೊಂದಿದ್ದು ಇಡೀ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿದೆ.
ಇವರು ಪುತ್ರರಾದ ನೈನಾಡಿನ ಗ್ರಾಮ ಪಂಚಾಯಿತಿ ಸದಸ್ಯರಾದ ನೆಲ್ವಿಸ್ಟರ್ ಗ್ಲ್ಯಾನ್ ಪಿಂಟೊ ರವರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಇವರ ಅಂತಿಮ ವಿಧಿ ವಿಧಾನದ ಸಮಯವನ್ನು ತಿಳಿಸಲಾಗುವುದು ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.