ಮಂಗಳವಾರ, ಡಿಸೆಂಬರ್ 5, 2023
ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ-ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಶತಕದತ್ತ ಈರುಳ್ಳಿ ದರ ; ನವೆಂಬರ್ ಆರಂಭಕ್ಕೆ ಮತ್ತಷ್ಟು ದುಬಾರಿ!

Twitter
Facebook
LinkedIn
WhatsApp
ಶತಕದತ್ತ ಈರುಳ್ಳಿ ದರ ; ನವೆಂಬರ್ ಆರಂಭಕ್ಕೆ ಮತ್ತಷ್ಟು ದುಬಾರಿ!

ಬೆಂಗಳೂರು, (ಅಕ್ಟೋಬರ್ 31): ಕಳೆದ ಎರಡು ತಿಂಗಳ ಹಿಂದಷ್ಟೆ ಕೆಂಪು ಸುಂದರಿ ಟೊಮೆಟೊ(tomato) ಗ್ರಾಹಕರ ಕಣ್ಣು ಕೆಂಪಾಗಿಸಿತ್ತು. ಪ್ರತಿ ಕೆಜಿ ಟೊಮೆಟೊ 150 ರೂಪಾಯಿ ಗಡಿ ದಾಟಿತ್ತು. ಮಹಿಳೆಯರಂತೂ ಅಡುಗೆಗೆ ಟೊಮೆಟೊ ಬಳಸುವುದನ್ನೇ ಬಿಟ್ಟುಬಿಟ್ಟಿದ್ದರು. ಆದ್ರೆ ಆ ಟೈಮಲ್ಲಿ ಈರುಳ್ಳಿ(onion )ರೇಟ್ ತುಂಬಾ ಕಡಿಮೆಯಿತ್ತು. ಆದ್ರೆ ಇದೀಗ ಕಾಲ ಬದಲಾಗಿದೆ. ಅತ್ತೆಗೊಂದು ಕಾಲ. ಸೊಸೆಗೊಂದು ಕಾಲ ಎಂಬಂತೆ ಟೊಮೆಟೊ ರೇಟ್ ಕುಸಿದಿದ್ದು, ಈರುಳ್ಳಿ ಬೆಲೆ ಗಗನಕ್ಕೆ(onion price hike) ಜಿಗಿದಿದೆ.

ತಿಂಗಳ ಹಿಂದೆಯೇ ಈರುಳ್ಳಿ ಬೆಲೆ ಗಗನಕ್ಕೇರಲಿದೆ ಎನ್ನುವ ಸುಳಿವು ಸಿಕ್ಕಿತ್ತು. ಆದ್ರೆ ಕೇಂದ್ರ ಸರ್ಕಾರ ಈರಳ್ಳಿ ರಫ್ತಿಗೆ ಲಗಾಮುಹಾಕಿತ್ತು. ಹೆಚ್ಚೆಚ್ಚು ದಾಸ್ತಾನ ಮಾರುಕಟ್ಟೆಗೆ ಬಿಡುಗಡೆ ಮಾಡಿ ಬೆಲೆ ಹೆಚ್ಚಾಗದಂತೆ ನೋಡಿಕೊಂಡಿತ್ತು. ಆದ್ರೆ, ಇದೀಗ ಮಳೆ ಅಭಾವದಿಂದ ನಿರೀಕ್ಷಿತ ಫಸಲು ಬಾರದ ಕಾರಣ, ಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಆಮದು ಆಗದಿರೋ ಹಿನ್ನೆಲೆ ಈರುಳ್ಳಿ ದರವು ಗಗನಕ್ಕೇರುತ್ತಿದೆ. ಕಳೆದ ವಾರ ಪ್ರತಿ ಕೆಜಿಗಿ 30ರಿಂದ 40ರೂಪಾಯಿ ಇದ್ದ ಈರುಳ್ಳಿ ಇದೀಗ ಏಕಾಏಕಿ 80 ರಿಂದ 90 ರೂಪಾಯಿಗೆ ತಲುಪಿದೆ.

ಬೆಂಗಳೂರು ನಗರದಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕೆಜಿಗೆ 80 ರಿಂದ 90 ರೂಪಾಯಿಗೆ ತಲುಪಿದೆ. ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಗಳಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಗಳಿಗೆ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಕೆಲ ಪ್ರದೇಶಗಳಲ್ಲಿ ಬಿತ್ತನೆ ವಿಳಂಬವಾಗಿದ್ದು, ಇನ್ನೂ ಫಸಲು ಬಂದಿಲ್ಲ. ಪರಿಣಾಮ, ಬೆಲೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರವು ಶೇ. 57ರಷ್ಟು ಹೆಚ್ಚಳವಾಗಿದೆ.

ಯಶವಂತಪುರ ಎಪಿಎಂಸಿಯಲ್ಲಿ ಪ್ರತಿ ಕೆ.ಜಿ 60 ರಿಂದ 65 ರೂಪಾಯಿ ಇದೆ. ನ್ಯೂ ತರಗುಪೇಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ 75ರಿಂದ 90 ರೂಪಾಯಿ ಇದೆ. ಹಾಪ್‌ಕಾಮ್ಸ್‌ಗಳಲ್ಲಿ ಕೆ.ಜಿ ಈರುಳ್ಳಿಯನ್ನು 70 ರಿಂದ 88 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿಗೆ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಲೋಡ್‌ ಈರುಳ್ಳಿ ಬರುತ್ತಿತ್ತಂತೆ. ಆದ್ರೆ, ಈಗ ಆದ್ರೀಗ ದಿನಕ್ಕೆ 100ರಿಂದ 200 ಲೋಡ್ ಮಾತ್ರ ಬರುತ್ತಿದೆ. ವ್ಯಾಪಾರಸ್ಥರು ಹೇಳುವ ಪ್ರಕಾರ ಇನ್ನೂ ಒಂದೆರಡು ತಿಂಗಳು ಈರುಳ್ಳಿ ಬೆಲೆ ಕಡಿಮೆಯಾಗುವುದು ಅನುಮಾನ ಎನ್ನಲಾಗಿದೆ.

ರಾಜ್ಯದ ನಾನಾ ಕಡೆ ಹೇಗಿದೆ ಈರುಳ್ಳಿ ದರ?
  • ಚಿತ್ರದುರ್ಗ -ಕೆ.ಜಿಗೆ 60 ರಿಂದ 70 ರೂ.
  • ಕಲಬುರಗಿ, ಬೀದರ್, ಯಾದಗಿರಿ -ಕೆ.ಜಿಗೆ 60-80 ರೂ.
  • ರಾಯಚೂರು, ಕೊಪ್ಪಳ -ಕೆ.ಜಿಗೆ 60-80ರೂ
  • ಧಾರವಾಡ, ವಿಜಯಪುರ -ಕೆ.ಜಿಗೆ 70-80 ರೂ
  • ದಕ್ಷಿಣ ಕನ್ನಡ -ಕೆ.ಜಿಗೆ 80-90 ರೂ
  • ಉಡುಪಿ, ಚಿಕ್ಕಮಗಳೂರು -ಕೆ.ಜಿಗೆ 70-80 ರೂ
  • ಮೈಸೂರು, ಮಂಡ್ಯ -ಕೆ.ಜಿಗೆ 80-90 ರೂ

ಒಟ್ಟಿನಲ್ಲಿ ಟೊಮೆಟೊ ಬೆಲೆ ಏರಿಕೆಯಿಂದ ಕೈಸುಟ್ಟುಕೊಂಡಿದ್ದ ಗ್ರಾಹಕರ ಕಣ್ಣಲ್ಲಿ ಈರುಳ್ಳಿ ಬೆಲೆ ಏರಿಕೆ ಕಣ್ಣಿರು ತರಿಸುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ