ಮಂಗಳವಾರ, ಡಿಸೆಂಬರ್ 5, 2023
ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ-ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ..!-ಇಂದಿರಾ ಗಾಂಧಿ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಇಂದು ಮಿಜೋರಾಂ ನೂತನ ಸಿಎಂ ಸ್ಥಾನಕ್ಕೆ ಸಜ್ಜು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೈದಾನದಲ್ಲಿ ಒಂದಾದ ಕೊಹ್ಲಿ - ನವೀನ್ ; ಸ್ಟೈಡಿಯಮ್ನಲ್ಲಿ ಫ್ಯಾನ್ಸ್ ಗಳ ನಡುವೆ ಜಗಳ!

Twitter
Facebook
LinkedIn
WhatsApp
ಮೈದಾನದಲ್ಲಿ ಒಂದಾದ ಕೊಹ್ಲಿ - ನವೀನ್ ; ಸ್ಟೈಡಿಯಮ್ನಲ್ಲಿ ಫ್ಯಾನ್ಸ್ ಗಳ ನಡುವೆ ಜಗಳ!

ನವದೆಹಲಿ: ಏಕದಿನ ವಿಶ್ವಕಪ್‌ ಟೂರ್ನಿಯ (ICC World Cup 2023) ಭಾರತ ಹಾಗೂ ಅಫಘಾನಿಸ್ತಾನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿದೆ. ಹಾಗೆಯೇ, ವಿರಾಟ್‌ ಕೊಹ್ಲಿ (Virat Kohli) ಅಫಘಾನಿಸ್ತಾನದ ನವೀನ್‌ ಉಲ್‌ ಹಕ್‌ ಅವರು ಸಿಟ್ಟು, ಸೆಡವು ಮರೆತು ಒಂದಾಗಿದ್ದಾರೆ. ಆ ಮೂಲಕ ಕೊಹ್ಲಿಯು ಶಾಂತಿ, ಸೌಹಾರ್ದತೆ ಹಾಗೂ ಕ್ರೀಡಾ ಸ್ಫೂರ್ತಿಯ ಸಂದೇಶ ರವಾನಿಸಿದ್ದಾರೆ. ಆದರೆ, ಮೈದಾನದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಭಾರತದ ಕ್ರಿಕೆಟ್‌ ಅಭಿಮಾನಿಗಳು (Indian Cricket Fans) ಮಾತ್ರ ಹೊಡೆದಾಡಿಕೊಂಡಿದ್ದಾರೆ.

 

ಭಾರತದ ಕ್ರಿಕೆಟ್‌ ಅಭಿಮಾನಿಗಳ ಮಧ್ಯೆಯೇ ಭಾರತ-ಅಫಘಾನಿಸ್ತಾನ ಪಂದ್ಯದ ವೇಳೆ ಜಗಳ ನಡೆದಿದೆ. ಕೆಲವರು ಭಾರತ ಕ್ರಿಕೆಟ್‌ ತಂಡದ ಜೆರ್ಸಿ ತೊಟ್ಟಿದ್ದು, ಇನ್ನೂ ಕೆಲವರು ಸಾಮಾನ್ಯ ಉಡುಪಿನಲ್ಲಿದ್ದಾರೆ. ಎರಡು ಗುಂಪುಗಳ ಮಧ್ಯೆ ಮೊದಲು ವಾಗ್ವಾದ ಆರಂಭವಾಗಿದೆ. ಇದಾದ ಬಳಿಕ ಕೈ ಕೈ ಮಿಲಾಯಿಸಿಕೊಳ್ಳುವಷ್ಟರ ಮಟ್ಟಿಗೆ ಜಗಳ ತಾರಕಕ್ಕೇರಿದೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಜನರಿಂದ ಟೀಕೆಗಳು ವ್ಯಕ್ತವಾಗಿವೆ. ಮೈದಾನದಲ್ಲಿ ಪ್ರತಿಸ್ಪರ್ಧಿ ಆಟಗಾರರೊಂದಿಗೇ ಭಾರತದ ಆಟಗಾರರು ಸೌಹಾರ್ದತಯುತವಾಗಿ ಇರುವಾಗ, ನಾವೇ ಹೀಗೆ ಕಿತ್ತಾಡಿಕೊಂಡರೆ ಹೇಗೆ ಎಂದು ಜನ ಜಾಡಿಸಿದ್ದಾರೆ.

 

ಕೊಹ್ಲಿ-ನವೀನ್‌ ಭಾಯಿಭಾಯಿ

ಕಳೆದ ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ನವೀನ್‌ ಉಲ್‌ ಹಕ್‌ ಮಧ್ಯೆ ಉಂಟಾದ ವಾಗ್ವಾದದ ಬಳಿಕ ಇಬ್ಬರ ಮಧ್ಯೆ ಉಂಟಾಗಿದ್ದ ಬಿರುಕನ್ನು ಭಾರತ-ಆಫ್ಘನ್‌ ಪಂದ್ಯದಲ್ಲಿ ಸರಿ ಮಾಡಿಕೊಳ್ಳುವ ಮೂಲಕ ಇಬ್ಬರೂ ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆದರು. ಕೊಹ್ಲಿ ಹಾಗೂ ನವಿನ್ ಕೈ ಕುಲುಕಿ ಮಾತನಾಡುವ ವಿಡಿಯೊ ಮೈದಾನವನ್ನೇ ಸ್ತಬ್ಧಗೊಳಿಸಿತು. ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಬೇಸರ ಮೂಡಿತು. ಆದರೆ, ಕೊಹ್ಲಿಯ ಅಪ್ಪಟ ಅಭಿಮಾನಿಗಳು ಆಟಗಾರನ ಹಿರಿತನ ಹಾಗೂ ಕ್ರೀಡಾಸ್ಫೂರ್ತಿಯನ್ನು ಕೊಂಡಾಡಿದರು. ಅಂತೆಯೇ ಅವರಿಬ್ಬರು ಕೈ ಕುಲುಕುವ ದೃಶ್ಯದ ವಿಡಿಯೊಗಳು ಲಕ್ಷಾಂತರ ಲೈಕ್​ಗಳನ್ನು ಪಡೆದುಕೊಂಡಿವೆ.

ಹಿರಿಯ ಕ್ರಿಕೆಟಿಗರು ಕೂಡ ಕೊಹ್ಲಿಯ ನಡೆಯನ್ನು ಮಾದರಿ ಎಂದಿದ್ದಾರೆ. ಮೈದಾನದಲ್ಲಿ ನಡೆದ ಘಟನೆಗಳನ್ನು ಅಲ್ಲೇ ಮುಗಿಸುವುದು ಕ್ರೀಡಾಪಟುವೊಬ್ಬನ ದೊಡ್ಡ ಗುಣ ಎಂದು ಹೊಗಳಿದ್ದಾರೆ. ಮತ್ತೊಂದೆಡೆ, ನಾಯಕ ರೋಹಿತ್ ಶರ್ಮಾ (131) ಅವರ ದಾಖಲೆಯ ಶತಕ ಹಾಗೂ ವಿರಾಟ್​ ಕೊಹ್ಲಿಯ (55) ಅಜೇಯ ಅಜೇಯ ಅರ್ಧ ಶತಕದ ನೆರವಿನಿಂದ ಮಿಂಚಿದ ಭಾರತ ತಂಡ ವಿಶ್ವ ಕಪ್​ನ ತನ್ನ ಎರಡನೇ ಪಂದ್ಯದಲ್ಲಿ ಅಪಘಾನಿಸ್ತಾನ ವಿರುದ್ಧ 8 ವಿಕೆಟ್​ಗಳ ಸುಲಭ ವಿಜಯ ದಾಖಲಿಸಿದೆ.

ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಅಫಘಾನಿಸ್ತಾನ ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 272 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ ಇನ್ನೂ 90 ಎಸೆತಗಳು ಬಾರಿ ಇರುವಂತೆಯೇ 2 ವಿಕೆಟ್​ ನಷ್ಟಕ್ಕೆ 273 ರನ್ ಬಾರಿಸಿ ಗೆಲುವು ಸಾಧಿಸಿತು. ಬೌಲಿಂಗ್ ವೇಳೆ 39 ರನ್​ಗಳಿಗೆ 4 ವಿಕೆಟ್​ ಉರುಳಿಸಿದ ಜಸ್​ಪ್ರಿತ್​ ಬುಮ್ರಾ ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ