ದಕ್ಷಿಣ ಕನ್ನಡದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಇಂದು ಏಪ್ರಿಲ್ 10 ರಂದು ಸಾರ್ವತ್ರಿಕ ರಜೆ ಘೋಷಣೆ..!

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಏಪ್ರಿಲ್ 11 ರಂದು ಘೋಷಣೆ ಯಾಗಿದ್ದ ರಂಜಾನ್ ರಜೆಯನ್ನು ಬದಲಾಗಿ ಇಂದು ಏಪ್ರಿಲ್ 10 ರಂದು ಸಾರ್ವತ್ರಿಕ ರಜೆಯನ್ನಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮುಸ್ಲಿಂರ ಪವಿತ್ರ ಹಬ್ಬ ಈದುಲ್ ಫಿತರ್ ನ್ನು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇಂದು ಎಪ್ರಿಲ್ 10 ರಂದು ಆಚರಿಸಲಾಗುವುದು ಎಂದು ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಕೇರಳದ ಪೊನ್ನಾನಿಯಲ್ಲಿ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಪಶ್ಚಿಮ ಕರಾವಳಿ ತೀರದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬುಧವಾರ ಈದುಲ್ ಫಿತ್‌ರ್ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.
ಇಂದು ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಕೇರಳದ ಪೊನ್ನಾನಿಯಲ್ಲಿ ಆಗಿರುವುದರಿಂದ ಪಶ್ಚಿಮ ಕರಾವಳಿ ತೀರದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬುಧವಾರ ಈದುಲ್ ಫಿತ್‌ರ್ ಆಚರಿಸಲು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿ ಅಲ್‌ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕರೆ ನೀಡಿದ್ದಾರೆ.
ಇಂದು ಶವ್ವಾಲ್‌ನ ಪ್ರಥಮ ಚಂದ್ರದರ್ಶನ ಆಗಿರುವುದರಿಂದ ಪಶ್ಚಿಮ ಕರಾವಳಿ ತೀರದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬುಧವಾರ ಈದುಲ್ ಫಿತ್‌ರ್ ಆಚರಿಸಲು ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕರೆ ನೀಡಿದ್ದಾರೆ.