ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಜೆಪಿ ನಾಯಕಿಯ ಮೃತದೇಹ ಪತ್ತೆ! ವ್ಯಕ್ತಿಯ ಬಂಧನ.
ಅಸ್ಸಾಂ: ಗೋಲಾಪುರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-17 ರಲ್ಲಿ ಅಸ್ಸಾಂನ(Assam) ಬಿಜೆಪಿಯ ಜಿಲ್ಲಾ ಮಹಿಳಾ ಕಾರ್ಯದರ್ಶಿಯಾಗಿದ್ದ ಜೊನಾಲಿ ನಾಥ್(Jonali Nath) ಎಂಬ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಗೋಲಾಪುರ್ನಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜೊನಾಲಿ ನಾಥ್ ಸಾವನ್ನಪ್ಪಿರುವ ಘಟನೆಯನ್ನು ಪೊಲೀಸರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು ಇದು ಅನುಮಾನಸ್ಪದ ಸಾವಲ್ಲ! ಮುಂಚಿತವಾಗಿ ಸಂಚು ಹೂಡಿ ಹತ್ಯೆ(Murder) ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ನಾವು ಈ ಪ್ರಕರಣವನ್ನು ಹಲವು ಕೋನಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಭಾನುವಾರ ರಾತ್ರಿ ಕೃಷ್ಣ ಸಲಪರ್ ಪ್ರದೇಶದಲ್ಲಿ ಸೊನಾಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಕುಟುಂಬಸ್ಥರು ಮಾತನಾಡಿದ್ದು, “ಜೊನಾಲಿ ದೇಹದ ಮೇಲೆ ಹಲವು ಗಾಯಗಳ ಗುರುತಿದೆ. ಇದು ಖಂಡಿತ ಹತ್ಯೆಯೇ! ಕಿಡಿಗೇಡಿಗಳು ಆಕೆಯನ್ನು ಹತ್ಯೆಗೈದು ನಂತರ ದೇಹವನ್ನು ಇಲ್ಲಿ ಎಸೆದಿದ್ದಾರೆ” ಎಂದು ಸುದ್ದಿಗಾರರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.