ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಗೆ ಮತ್ತೋರ್ವ ಬಲಿ ; ವಿದ್ಯುತ್ ತಂತಿ ತುಳಿದು ಯುವಕ ಮೃತ್ಯು!
Twitter
Facebook
LinkedIn
WhatsApp
ಸುರತ್ಕಲ್:ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಯುವಕನೋರ್ವ ಆಕಸ್ಮಿಕವಾಗಿ ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಕುಳಾಯಿಯಲ್ಲಿ ನಡೆದಿದೆ.
ಸಂತೋಷ್ ಮೃತ ಯುವಕ ಎಂದು ಗುರುತಿಸಲಾಗಿದೆ.
ಮಂಗಳವಾರ ತಡರಾತ್ರಿ ಗಾಳಿಗೆ ವಿದ್ಯುತ್ ತಂತಿ ಕಡಿದು ಬಿದ್ದಿತ್ತು.ಆದರೆ ಈ ಬಗ್ಗೆ ಅರಿವಿಲ್ಲದೆ ಮುಂಜಾನೆ ಕೆಲಸಕ್ಕೆ ಹೋಗುತ್ತಿದ್ದ ಸಂತೋಷ್ ತಂತಿ ಆಕಸ್ಮಿಕವಾಗಿ ತುಳಿದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಿನ್ನೆ ಉಳ್ಳಾಲ ಬಳಿ ಭಾರೀ ಮಳೆಗೆ ವ್ಯಕ್ತಿಯೋರ್ವರು ಮೋರಿಗೆ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.ಇದೀಗ ಕರಾವಳಿಯಲ್ಲಿ ಭಾರೀ ಮಳೆ ಬಳಿಕ ಇಬ್ಬರು ಮೃತಪಟ್ಟಿದ್ದಾರೆ.