ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಹಳೆಯ 5 ರೂ. ನೋಟು ನೀಡಿದರೆ 5 ಲಕ್ಷ ರೂಪಾಯಿ ಬಹುಮಾನ ಎಂದು ಮಹಿಳೆಯನ್ನು ವಂಚಿಸಿದ ಕಿರಾತಕ..!

Twitter
Facebook
LinkedIn
WhatsApp
ಹಳೆಯ 5 ರೂ. ನೋಟು ನೀಡಿದರೆ 5 ಲಕ್ಷ ರೂಪಾಯಿ ಬಹುಮಾನ ಎಂದು ಮಹಿಳೆಯನ್ನು ವಂಚಿಸಿದ ಕಿರಾತಕ..!

ಚಿಕ್ಕಬಳ್ಳಾಪುರ, ಅಕ್ಟೋಬರ್​ 6: ನಿಮ್ಮ ಬಳಿ ಹಳೆಯ 5 ರೂಪಾಯಿ ನೋಟ್ ಇದ್ದರೆ ಅದಕ್ಕೆ ಪರ್ಯಾಯವಾಗಿ 5 ಲಕ್ಷ ರೂಪಾಯಿ ನೋಟ್ ಗಳನ್ನು ಕೊಡ್ತಿವಿ ಅನ್ನೊ ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ನೋಡಿದ ಮಹಿಳೆಯೊರ್ವಳು ಸುಲಭವಾಗಿ 5 ರೂಪಾಯಿ ಬದಲು 5 ಲಕ್ಷ ರೂಪಾಯಿ ಪಡೆಯುವ ಆಶೆಯಿಂದ ಮನೆಯಲ್ಲಿದ್ದ 35,063/- ರೂಪಾಯಿಗಳನ್ನು ವಂಚಕರಿಗೆ (cheating) ನೀಡಿ ಸುಲಭವಾಗಿ ಮೋಸ ಹೋದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ (Chikkaballapur) ನಗರದ ವಾಪಸಂದ್ರ ಬಡಾವಣೆಯ ನಿವಾಸಿ ಶ್ರೀಮತಿ ಆಸ್ಮ ಎಸ್ ಮೋಸ ಹೋದ ಮಹಿಳೆ (woman).

 

ಆಸ್ಮ ಎಸ್ ಗೆ 70058 48463 ಪೋನ್ ನಂಬರ್ ನಿಂದ ಕರೆ ಮಾಡಿದ ವಂಚಕನೊರ್ವ ಹಳೆಯ 5 ರೂಪಾಯಿ ನೊಟನ್ನು ಕಳುಹಿಸಿದರೆ ನಿಮಗೆ 5 ಲಕ್ಷ ರೂಗಳು ಬರುತ್ತೆ ಎಂದು ನಂಬಿಸಿದ್ದಾನೆ. ಅದನ್ನು ನಂಬಿದ ಮಹಿಳೆ ಹಳೆಯ 5 ರೂಪಾಯಿ ನೋಟ್ ಇದೆ ಅಂತ ತಿಳಿಸಿ ತನ್ನ ಬಳಿ ಇದ್ದ ಹಳೆ 5 ರೂಪಾಯಿ ನೋಟ್ ನೀಡಲು ಒಪ್ಪಿಕೊಂಡಿದ್ದಾಳೆ.

ಆಗ ವಂಚನೆ ಆಟ ಶುರು ಮಾಡಿದ ವಂಚಕ 5 ಲಕ್ಷ ರೂಪಾಯಿ ನೀಡಲು ವಿವಿಧ ತೆರಿಗೆಗಳನ್ನು ಕಟ್ಟಬೇಕು ಅದಕ್ಕೆ 35,063/- ರೂಪಾಯಿ ನೀಡಬೇಕು ಅಂತ ಮಹಿಳೆಯಿಂದ ಹಣ ಪಡೆದು 5 ಲಕ್ಷ ರೂಪಾಯಿ ಹಣ ನೀಡದೆ ವಂಚನೆ ಮಾಡಿದ್ದಾನೆ. ಇದ್ರಿಂದ ಮೋಸ ಹೋದ ಮಹಿಳೆ ಚಿಕ್ಕಬಳ್ಳಾಪುರದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ.

ಜಂಬೂ ಸವಾರಿಗೆ ಬರಲಿದ ಗತವೈಭವ – ರಾಜ ಪೋಷಾಕಿನಲ್ಲಿ ಪೊಲೀಸರು

ಮೈಸೂರು: ಈ ಬಾರಿ ದಸರಾ (Mysuru Dasara) ಜಂಬೂ ಸವಾರಿಯಲ್ಲಿ (Dasara Procession) ಗತಕಾಲದ ವೈಭವ ಮರುಕಳಿಸಲಿದೆ. ಈ ಬಾರಿ ದಸರಾದಲ್ಲಿ ರಾಜ ಪೋಷಾಕಿನಲ್ಲಿ ಪೊಲೀಸರು (Police) ಮಿಂಚಲಿದ್ದಾರೆ. ಇದೇ ವಸ್ತ್ರದಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ.

414 ವರ್ಷಗಳ ಇತಿಹಾಸವುಳ್ಳ ದಸರಾದಲ್ಲಿ ಈ ಬಾರಿ ರಾಜಪರಂಪರೆಯ ಜಂಬೂ ಸವಾರಿ ನಡೆಯಲಿದೆ. ಮರೆಯಾಗಿದ್ದ ಪರಂಪರೆಯ ಸೊಗಡು ಈ ಬಾರಿ ದಸರಾದಲ್ಲಿ ಮತ್ತೆ ಮರುಕಳಿಸಲಿದೆ. ಜಂಬೂ ಸವಾರಿ ವೇಳೆ ಅಂಬಾರಿ ಸುತ್ತ ರಾಜಪರಂಪರೆಯ ಪೋಷಾಕುಗಳಲ್ಲಿ ಪೊಲೀಸರು ಮಿಂಚಲಿದ್ದಾರೆ. ಕೇವಲ ಭಾವಚಿತ್ರದಲ್ಲಿ ಮಾತ್ರ ಕಾಣಸಿಗುತ್ತಿದ್ದ ಜಂಬೂ ಸವಾರಿಯ ಗತವೈಭವವನ್ನು ಇದೀಗಾ ಅದೇ ಮಾದರಿಯಲ್ಲಿ ನಡೆಸಲು ತಯಾರಿ ನಡೆಸಲಾಗಿದೆ.

ಅಂಬಾರಿ ಆನೆಯ ಸುತ್ತ ಭದ್ರತೆಗಾಗಿ ನಿಯೋಜಿಸುವ ಪೊಲೀಸ್ ಸಿಬ್ಬಂದಿ ಪಾರಂಪರಿಕ ಪೋಷಾಕು ತೊಟ್ಟುಕೊಂಡೆ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಪಾರಂಪರಿಕ ಪೋಷಾಕುಗಳು ಸಿದ್ಧವಾಗಿವೆ.

ಅದೇ ರೀತಿ ರಾಜ ಬಿರುದುಗಳನ್ನು ಹಿಡಿದು ಕಲಾ ತಂಡಗಳು ಸಾಗಲಿವೆ. ಸುಮಾರು 200 ಜನರು ರಾಜರ ಕಾಲದಲ್ಲಿ ತೊಡುತ್ತಿದ್ದ ಉಡುಗೆಗಳನ್ನು ತೊಡಲಿದ್ದಾರೆ. ಈ ಹಿಂದೆ ಇದ್ದ ಹಸಿರು ಲ್ಯಾನ್ಸರ್, ಕೆಂಪು ಬಣ್ಣದ ಲ್ಯಾನ್ಸಾರ್, ಗ್ರಿಲ್ ಮೀಸೆ, ಬಿರುದು, ದರ್ಬಾರ್ ಹುಡೋಸ್ ಹಾಗೂ ಅರಮನೆಯ ಜಿಲೋ ಪೋಷಾಕುಗಳು ಇದಕ್ಕಾಗಿ ತಯಾರಾಗಿವೆ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ