ಒಡಿಶಾದಲ್ಲಿ 2 ಗಂಟೆಗಳಲ್ಲಿ 61 ಸಾವಿರ ಸಿಡಿಲು ; 12 ಮಂದಿ ಸಾವು!
ಭುವನೇಶ್ವರ (ಸೆ.5): ಕೇವಲ ಎರಡು ತಾಸುಗಳ ಅವಧಿಯಲ್ಲಿ ಬರೋಬ್ಬರಿ 61 ಸಾವಿರ ಸಿಡಿಲುಗಳು ಅಪ್ಪಳಿಸಿದ್ದರಿಂದ ಒಡಿಶಾದ ಆಯ್ದ ಭಾಗಗಳು ಶನಿವಾರ ಭೀತಿಯಿಂದ ತತ್ತರಿಸಲ್ಪಟ್ಟಿವೆ. ಈ ಸಿಡಿಲು ದಾಳಿಯಲ್ಲಿ 10 ಜನರು ಮೃತಪಟ್ಟಿದ್ದಾರೆ.
ಶನಿವಾರ ಮಧ್ಯಾಹ್ನ ಭುವನೇಶ್ವರ ಹಾಗೂ ಆಸುಪಾಸಿನಲ್ಲಿ ಮಧ್ಯಾಹ್ನ ಮಳೆಯಾಯಿತು. ಆನಂತರ ಎರಡು ತಾಸುಗಳ ಅವಧಿಯಲ್ಲಿ 61 ಸಾವಿರ ಸಿಡಿಲುಗಳು ಅಬ್ಬರಿಸಿದವು. ಈ ಪೈಕಿ 36597 ಸಿಡಿಲುಗಳು ಮೋಡದಿಂದ ಮೋಡಕ್ಕೆ ಹಾಗೂ 25,753 ಸಿಡಿಲು ಮೋಡದಿಂದ ಭೂಮಿಗೆ ಅಪ್ಪಳಿಸಿತು. ಇದರಿಂದ ಜನರು ಆತಂಕಕ್ಕೆ ಒಳಗಾಗುವಂತಾಯಿತು. ವಿವಿಧ ಜಿಲ್ಲೆಗಳಲ್ಲಿ ಸಿಡಿಲಿಗೆ 10 ಜನರು ಬಲಿಯಾಗಿದ್ದಾರೆ ಎಂದು ಒಡಿಶಾ ರಾಜ್ಯ ಹವಾಮಾನ ಇಲಾಖೆ ಟ್ವೀಟರ್ನಲ್ಲಿ ಮಾಹಿತಿ ನೀಡಿದೆ.
ಭಾರೀ ಸಿಡಿಲು ಏಕೆ?: ಬಂಗಾಳಕೊಲ್ಲಿಯಿಂದ ಬೀಸಿ ಬರುತ್ತಿರುವ ಗಾಳಿಯಿಂದ ವಾತಾವರಣದಲ್ಲಿ ಶಾಖ ಮತ್ತು ಆದ್ರ್ರತೆ ಹೆಚ್ಚಾಗಿರುವುದರಿಂದ ಸಿಡಿಲು ಬಡಿಯುವುದು ಸಾಮಾನ್ಯವಾಗುತ್ತಿದೆ. ಅತಿಯಾದ ಬಿಸಿ ಗಾಳಿ ಹವಾಮಾನ ಬದಲಾವಣೆಯ ಜೊತೆಗೆ ಸಿಡಿಲು ಬಡಿಯಲು ಕಾರಣವಾಗುತ್ತಿದೆ. ಅಲ್ಲದೇ ಬಂಗಾಳ ಕೊಲ್ಲಿಯ ಮಾರುತದಿಂದ ಹೆಚ್ಚಾಗುತ್ತಿರುವ ಆದ್ರ್ರತೆ ಸಿಡಿಲು ಹೆಚ್ಚಳಕ್ಕೆ ಕಾರಣ ಎಂದು ಭುವನೇಶ್ವರದ ಐಎಂಡಿ ನಿರ್ದೇಶಕ ಎಸ್.ಸಿ.ಸಾಹು ಹೇಳಿದ್ದಾರೆ.
ಸಿಡಿಲಿಗೆ ನೂರಾರು ಸಾವು: ಒಡಿಶಾ ದೇಶದಲ್ಲೇ ಅತಿ ಹೆಚ್ಚು ಸಿಡಿಲು ಬಡಿತಕ್ಕೆ ಒಳಗಾಗುವ ರಾಜ್ಯವಾಗಿದೆ. 2020-21ರಲ್ಲಿ ರಾಜ್ಯದಲ್ಲಿ ಒಟ್ಟಾರೆ 20.43 ಲಕ್ಷ ಸಿಡಿಲು ದಾಖಲಾಗಿದ್ದವು. ಸಿಡಿಲು ಬಡಿತಕ್ಕೆ ಪ್ರತಿ ವರ್ಷ ರಾಜ್ಯದಲ್ಲಿ 150-200 ಜನರು ಸಾವನ್ನಪ್ಪುತ್ತಾರೆ.
ಮಗಳ ಮದ್ವೆಯ ದಿನ ಹೃದಯಾಘಾತ, ತಂದೆ ಸಾವು
ಮನೆಯಲ್ಲಿ ಮದುವೆ ಸಮಾರಂಭವೊಂದು ನಡೆಯುತ್ತಿದ್ದರೆ ಅಲ್ಲಿ ಗಲಾಟೆ, ನೂಕುನುಗ್ಗಲು ಮಾಮೂಲಿಯಾಗಿರುತ್ತದೆ. ಇಡೀ ಮನೆ ಬಂಧು ಮಿತ್ರರಿಂದ ತುಂಬಿರುತ್ತದೆ. ಎಲ್ಲರೂ ಸೇರಿ ಮದುವೆ ಕೆಲಸ ಮಾಡುತ್ತಿರುತ್ತಾರೆ. ಮನೆಗೆ ಬಣ್ಣ ಬಳಿಯುವುದರಿಂದ ಶುರುವಾಗಿ ಮದುವೆ, ಆರತಕ್ಷತೆ ತನಕ ಎಲ್ಲಾ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆಯುತ್ತಿರುತ್ತದೆ. ಮಗಳ ಮದುವೆ ಅಂದ್ಮೇಲೆ ತಂದೆ-ತಾಯಿಗಂತೂ ಒಂಚೂರು ಬಿಡುವಿರುವುದಿಲ್ಲ. ಎಲ್ಲಾ ಕಾರ್ಯಕ್ರಮ ಮುಗಿದು ಮಗಳನ್ನು ಅತ್ತೆ ಕಳುಹಿಸಿದ ನಂತರವೇ ತಂದೆ-ತಾಯಿ ನಿರಾಳವಾಗುತ್ತಾರೆ. ಆದರೆ ಈ ಮದುವೆ ಮನೆಯಲ್ಲಿ ಮಾತ್ರ ಮಗಳ ಮದುವೆ ಸಂಭ್ರಮದಲ್ಲಿ ದುರಂತವೊಂದು ನಡೆದುಹೋಗಿದೆ.
ಖುಷಿಯಿಂದ ಓಡಾಡಬೇಕಿದ್ದ ಅಪ್ಪ, ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ದಾರುಣ ಘಟನೆ ನಡೆದಿರುವುದು ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ. ಮದುವೆ (Marriage) ಸಂಭ್ರಮದ ಖುಷಿಯಲ್ಲಿ ತೇಲಾಡುತ್ತಿದ್ದ ಮನೆಯಲ್ಲಿ ಕೆಲವೇ ಗಂಟೆಗಳಲ್ಲಿ ಸೂತಕದ ಛಾಯೆ ಆವರಿಸಿದೆ.
ಮಗಳ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ
ಕರೀಂನಗರ ಜಿಲ್ಲೆಯ ಶಂಕರಪಟ್ಟಣ ಮಂಡಲದ ಅಂಬಲಪುರ ಗ್ರಾಮದ ಎರ್ರಾಳ ರಾಮುಲು ಟ್ರ್ಯಾಕ್ಟರ್ ಮೆಕ್ಯಾನಿಕ್ ಆಗಿರುವ ರಾಮುಲು-ಮಂಜುಳಾ ದಂಪತಿಗೆ ಮೂವರು ಹೆಣ್ಣು ಮಕ್ಕಳು. ಇದರಲ್ಲಿ ಹಿರಿಯ ಮಗಳು ಲಾವಣ್ಯಳ ಮದುವೆ ನಿಶ್ಚಯವಾಗಿತ್ತು. ಸೆಪ್ಟೆಂಬರ್ 3ರ ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ಮದುವೆ ಸಮಾರಂಭ ನಡೆಯುತ್ತಿತ್ತು. ಸಮೀಪದ ಕೊತಗಟ್ಟು ಮತ್ಸ್ಯಗಿರಿಂದ್ರಸ್ವಾಮಿ ಗುತ್ತದಲ್ಲಿ ಮದುವೆ ನಡೆಯುತ್ತಿರುವಾಗಲೇ ಅನಿರೀಕ್ಷಿತ ದುರಂತವೊಂದು ನಡೆದಿದೆ. ಇನ್ನೆರಡು ಗಂಟೆಯಲ್ಲಿ ಮಗಳ ಮದುವೆ ನಡೆಯಲಿದೆ ಅನ್ನೋವಾಗ್ಲೇ ರಾಮುಲು ಹಠಾತ್ ಹೃದಯಾಘಾತಕ್ಕೆ (Heartattack) ಒಳಗಾಗಿ ಕುಸಿದು ಬಿದ್ದಿದ್ದಾರೆ.
ಎದೆ ನೋವು ಕಾಣಿಸಿಕೊಂಡು ಕೆಳಗೆ ಬಿದ್ದಿದ್ದು, ರಾಮುಲು ಸಂಬಂಧಿಕರು ಅವರನ್ನು ಗಮನಿಸಿ ಹುಜೂರಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಮು ಅವರನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ರಾಮುಲು ನಿಧನಕ್ಕೆ ಪತ್ನಿ, ಮಕ್ಕಳು, ಸಂಬಂಧಿಕರು ಕಣ್ಣೀರಿಟ್ಟಿದ್ದು, ಮದುವೆ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಅಲ್ಲಿಯವರೆಗೂ ಮೋಜು ಮಸ್ತಿಯಲ್ಲಿದ್ದ ತಂದೆ ಕುಸಿದು ಬಿದ್ದದ್ದನ್ನು ಕಂಡು ವರ ಹಾಗೂ ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಹೃದಯಾಘಾತದಿಂದ ರಾಮುಲು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.