ನೋಟ್ ಬುಕ್ ಮತ್ತು ಪಠ್ಯಪುಸ್ತಕದ ಬೆಲೆ ಗಗನಕ್ಕೇರಿದೆ - ಪೋಷಕರಲ್ಲಿ ಆತಂಕ
ಬೆಂಗಳೂರು: ಬೇಸಿಗೆ ಕಳೆದು, ಶಾಲೆ ಆರಂಭಗೊಳ್ಳುತ್ತಿದೆ. ಸ್ಕೂಲ್ ಸ್ಟಾರ್ಟ್ ಆಗ್ತಿದ್ದಂತೆ ಪೋಷಕರಿಗೆ ಶಾಕ್ ಕಾದಿದೆ. ನೋಟ್ ಬುಕ್ ಹಾಗೂ ಟೆಕ್ಸ್ಟ್ ಬುಕ್ ಬೆಲೆ ಗಗನಕ್ಕೇರಿದೆ.
ಶಾಲಾ ಶುಲ್ಕದಲ್ಲಿ ಮಾತ್ರವಲ್ಲ ಈ ಬಾರಿ ನೋಟ್ ಪುಸ್ತಕಗಳು ಮತ್ತು ಪಠ್ಯಪುಸ್ತಕಗಳ ದರ ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಪೋಷಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ಐದಾರು ತಿಂಗಳಿಂದೀಚೆಗೆ ನೋಟ್ ಬುಕ್ (Note Book) ಗಳ ದರ 25% ರಿಂದ 40% ರ ತನಕ ಹೆಚ್ಚಳವಾಗಿದ್ದು, ಪೋಷಕರ ಕೈ ಸುಡುತ್ತಿದೆ. ಇನ್ನೇನು ಶಾಲೆ (School) ಆರಂಭಗೊಂಡಾಗ ಪೋಷಕರಿಗೆ ಈಗ ನೋಟ್ ಬುಕ್ ದರ ಏರಿಕೆಯಿಂದ ಟೆನ್ಶನ್ ಶುರುವಾಗಿದೆ.
ನೋಟ್ ಪುಸ್ತಕಗಳು ಕಳೆದ ಶೈಕ್ಷಣಿಕ ವರ್ಷದ ಆರಂಭದ ದರಕ್ಕೂ ಶೈಕ್ಷಣಿಕ ವರ್ಷದ ಅಂತ್ಯದ ದರಕ್ಕೂ ಹೋಲಿಸಿದರೆ ದರದ ವ್ಯತ್ಯಾಸ 50% ರಿಂದ 60% ರಷ್ಟು ಹೆಚ್ಚಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದ ಬೇಡಿಕೆ ಇನ್ನೂ 10% ರಿಂದ 20% ರಷ್ಟು ದರ ಏರಿಕೆ ಆಗುವ ಸಂಭವವಿದೆ ಎಂದು ಸ್ಟೇಷನರಿ ಅಂಗಡಿಗಳ ಮಾಲೀಕರು ಹೇಳ್ತಿದ್ದಾರೆ. ಇದರಿಂದಾಗಿ ಮಕ್ಕಳ ಶಿಕ್ಷಣದ ಬಜೆಟ್ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಲಿದ್ದು ಇದನ್ನು ಎದುರಿಸಲು ಮಾನಸಿಕವಾಗಿ ಮತ್ತು ಹಣಕಾಸು ದೃಷ್ಟಿಯಲ್ಲಿ ಪೋಷಕರು ಸಿದ್ಧರಾಗಬೇಕಿದೆ.
ಒಂದು ಕಡೆ ಪೇಪರ್ ಬೆಲೆ ಏರಿಕೆ ಹಾಗೂ ಕಚ್ಚಾ ಸಾಮಗ್ರಿಗಳ ಬೆಲೆಗಳಲ್ಲೂ ಸಹ ಅಪಾರ ಪ್ರಮಾಣದಲ್ಲಿ ಏರಿಕೆ ಆಗಿದೆ. ಹೀಗಾಗಿ ಟೆಕ್ಸ್ಟ್ ಬುಕ್ (Text Book Price) ಬೆಲೆ ಏರಿಕೆ ಆಗಿದೆ. ಕಳೆದ ವರ್ಷ 100 ಪುಟದ ಖಾಲಿ ಅಥವಾ ಗೆರೆ ಪುಸ್ತಕಕ್ಕೆ 20 ರೂ. ನಿಂದ ಈ ಬಾರಿ 25 ರೂ. ಗಳಿಗೆ ಏರಿದೆ. ಇನ್ನು 200 ಪುಟದ ಪುಸ್ತಕಕ್ಕೆ 30 ರೂ.ಗಳಿದ್ದ ದರ ಈ ವರ್ಷ 37 ರೂ.ಗಳಿಗೆ ಜಿಗಿದಿದೆ. ಹೀಗಾಗಿ ಸಬ್ಸಿಡಿ ನೀಡಬೇಕೆಂಬ ಬೇಡಿಕೆ ಕೇಳಿ ಬರ್ತಿದೆ.
ಒಟ್ಟಾರೆಯಾಗಿ ಒಂದುಕಡೆ ದೈನಂದಿನ ಅಗತ್ಯ ವಸ್ತುಗಳ ಬೆಲೆ ಎರಿಕೆ ಇನ್ನೊಂದು ಕಡೆ ನೋಟ್ ಬುಕ್ ಬೆಲೆ ಏರಿಕೆ ಇದರಿಂದ ಜನರಿಗೆ ಟೆನ್ಷನ್ ಶುರುವಾಗಿದೆ. ನೋಟ್ ಪುಸ್ತಕಗಳ ಖರೀದಿ ಜೋರಾಗಿದ್ದು ಸದ್ಯಕ್ಕೆ ಪುಸ್ತಕಗಳ ಬೆಲೆ 30% ರಿಂದ 40% ರಷ್ಟು ನೋಟ್ ಪುಸ್ತಕಗಳ ದರ ಏರಿಕೆಯಾಗಿದ್ದು, ಇದರಿಂದ ಪೋಷಕರು ಕಂಗಲಾಗಿದ್ದಾರೆ.