ಮಂಗಳವಾರ, ಡಿಸೆಂಬರ್ 5, 2023
ರಾಜ್ಯದ 13 ಭ್ರಷ್ಟ ಅಧಿಕಾರಿಗಳಿಗೆ ಸೇರಿದ 63 ಕಡೆ ಲೋಕಾಯುಕ್ತ ದಾಳಿ ; ಕೋಟಿ ಕೋಟಿ ಹಣ ಸೀಝ್..!-ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಯನಾಡು ಜಿಲ್ಲೆಯಲ್ಲಿ ಸಂಗ್ರಹಿಸಿದ ಬಾವಲಿಗಳ ಮಾದರಿಯಲ್ಲಿ ನಿಪಾ ವೈರಸ್ ದೃಢ ; ಕೇರಳದಲ್ಲಿ ಮತ್ತೆ ಕಟ್ಟೆಚ್ಚರ!

Twitter
Facebook
LinkedIn
WhatsApp
ವಯನಾಡು ಜಿಲ್ಲೆಯಲ್ಲಿ ಸಂಗ್ರಹಿಸಿದ ಬಾವಲಿಗಳ ಮಾದರಿಯಲ್ಲಿ ನಿಪಾ ವೈರಸ್ ದೃಢ ; ಕೇರಳದಲ್ಲಿ ಮತ್ತೆ ಕಟ್ಟೆಚ್ಚರ!

ವಯನಾಡು: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಗ್ರಹಿಸಿದ ಬಾವಲಿಗಳ ಮಾದರಿಯಲ್ಲಿ ನಿಪಾ ವೈರಸ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ತಿಳಿಸಿದೆ. ಬಾವಲಿಗಳ ದೇಹದಲ್ಲಿ ಮಾರಣಾಂತಿಕ ನಿಪಾ ವೈರಸ್ ಇರುವಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರಕಾರ, ಐಸಿಎಂಆರ್ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ಮತ್ತು ಮಾನತವಾಡಿಯಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ ನಿಪಾ ವೈರಸ್‌ ಇರುವುದು ದೃಢಪಟ್ಟಿದೆ.

ಕೇರಳ ರಾಜ್ಯದಲ್ಲಿ ಆಗಾಗ ನಿಪಾ ವೈರಸ್ ಪತ್ತೆಯಾಗುತ್ತಲೇ ಇತ್ತು. ಈ ಹಿನ್ನೆಲೆಯಲ್ಲಿ ನಿಪಾ ವೈರಸ್ ಏಕಾಏಕಿ ಪತ್ತೆಯಾಗುವ ಪ್ರದೇಶವನ್ನು ಕಂಡುಹಿಡಿಯಲು ICMR ರಾಜ್ಯಾದ್ಯಂತ ಅಧ್ಯಯನವನ್ನು ನಡೆಸುತ್ತಿದೆ. ನಿಪಾ ವೈರಸ್​ನಿಂದ ಸಾವನ್ನಪ್ಪುವವರ ಪ್ರಮಾಣ ಶೇ. 70ರಿಂದ 90ರಷ್ಟು ಎಂದು ಪರಿಗಣಿಸಲಾಗಿದೆ. ಆದರೆ, ಕೇರಳದಲ್ಲಿ ಸಾವಿನ ಪ್ರಮಾಣ ಕೇವಲ ಶೇ. 33.33ರಷ್ಟಿದೆ ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.

ನಿಪಾ ಸೋಂಕಿನ ಹರಡುವಿಕೆಯನ್ನು ಸಹ ನಿಯಂತ್ರಿಸಬಹುದು. ಸೋಂಕಿನ ಆರಂಭಿಕ ಪತ್ತೆಯಿಂದ ಇದು ಸಾಧ್ಯವಾಗುತ್ತದೆ. ನಿಪಾ ಸಂಶೋಧನಾ ಕೇಂದ್ರವು ಗುರುವಾರದಿಂದ ಕೋಳಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.

ನಿಪಾ ವೈರಸ್​ ಲಕ್ಷಣಗಳೇನು?:

ಸುಂಗೈ ನಿಪಾ ಎಂಬ ಮಲೇಷಿಯಾದ ಹಳ್ಳಿಯಿಂದ ಹುಟ್ಟಿಕೊಂಡ ನಿಪಾ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಝೂನೋಟಿಕ್ ಕಾಯಿಲೆಯಾಗಿದೆ. ಇದು ಸೋಂಕಿತ ಆಹಾರ, ಸೋಂಕಿತರೊಂದಿಗೆ ನೇರ ಸಂವಹನ ಅಥವಾ ಹಣ್ಣಿನ ಬಾವಲಿಗಳ ಸಂಪರ್ಕದ ಮೂಲಕವೂ ಹರಡಬಹುದು. ನಿಪಾದ ಸಾಮಾನ್ಯ ಲಕ್ಷಣಗಳು ಜ್ವರ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ ಮತ್ತು ವಾಕರಿಕೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಈ ವೈರಸ್ ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಮಾರಕವಾಗಿದೆ. ಇದು ಹಂದಿಗಳಂತಹ ಪ್ರಾಣಿಗಳಲ್ಲಿ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪ್ರಸ್ತುತ ಮಾನವರಿಗೆ ಮತ್ತು ಪ್ರಾಣಿಗಳಿಗೆ ಈ ಸೋಂಕು ತಗುಲಿದರೆ ಯಾವುದೇ ಲಸಿಕೆ ಮತ್ತು ಚಿಕಿತ್ಸೆ ಇಲ್ಲ.

ನಿಪಾ ವೈರಸ್ ಸೋಂಕಿಗೆ ಒಳಗಾದ ನಂತರ, ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲು ಸಾಮಾನ್ಯವಾಗಿ 5ರಿಂದ 14 ದಿನಗಳನ್ನು ತೆಗೆದುಕೊಳ್ಳುತ್ತದೆ. ನಿಪಾ ವೈರಸ್ ಸೋಂಕಿನ ಲಕ್ಷಣಗಳು ಹೀಗಿವೆ.

– ತೀವ್ರವಾದ ಉಸಿರಾಟದ ಸೋಂಕು

– ಜ್ವರ

– ಸ್ನಾಯು ನೋವು

– ತಲೆನೋವು

– ಗಂಟಲು ನೋವು

– ವಾಕರಿಕೆ/ ವಾಂತಿ

– ತಲೆತಿರುಗುವಿಕೆ

– ತೂಕಡಿಕೆ

– ಮಾನಸಿಕ ಗೊಂದಲ

– ನ್ಯುಮೋನಿಯಾ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ