Niket Raj Maurya: ಹಲವಾರು ಹೊಸ ಮುಖಗಳಿಗೆ ರಾಹುಲ್ ಗಾಂಧಿ ನಿರ್ದೇಶನ. ತುಮಕೂರಿಗೆ ನಿಕೇತ್ ರಾಜ್ ಮೌರ್ಯ ಬಹುತೇಕ ಖಚಿತ?
Twitter
Facebook
LinkedIn
WhatsApp

ತುಮಕೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಲವಾರು ಹೊಸ ಮುಖಗಳಿಗೆ ಆದ್ಯತೆ ನೀಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೊಸ ಮುಖಗಳನ್ನು ಪತ್ತೆ ಹಚ್ಚುವಂತೆ ಕಾಂಗ್ರೆಸ್ ಮುಖಂಡರುಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಯ ನಡುವೆ ಕಾಂಗ್ರೆಸ್ ಉಸ್ತುವಾರಿಗಳು ಹಾಗೂ ಕಾಂಗ್ರೆಸ್ ನಾಯಕರುಗಳು ಹಲವಾರು ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ಮೂಲಕ ಪ್ರಕಾರ ತುಮಕೂರಿನಲ್ಲಿ ಯುವ ನಾಯಕ ನಿಕೇತ್ ರಾಜ್ ಮೌರ್ಯ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಬಹುದು ಎಂದು ತಿಳಿದುಬಂದಿದೆ.
ಹೊಸ ಮುಖಗಳಿಗೆ ಆದ್ಯತೆ ನೀಡುವ ಕ್ಷೇತ್ರಗಳಲ್ಲಿ ತುಮಕೂರು ಒಂದು ಎಂದು ಹೈಕಮಾಂಡ್ ಮೂಲಗಳು ಸ್ಪಷ್ಟಪಡಿಸಿವೆ. ಇದರಿಂದ ತುಮಕೂರಿನಲ್ಲಿ ಹೊಸ ಮುಖದ ಪ್ರಯೋಗದ ಸಾಧ್ಯತೆ ಇದೆ ಎನ್ನಲಾಗುತ್ತಿದೆ.