Nigeria: ಇಂಧನ ಟ್ಯಾಂಕರ್ ಸ್ಫೋಟ, 105 ಜನ ಸಾವು

Nigeria: ನೈಜೀರಿಯಾದ (Nigeria) ಅಬುಜಾದಲ್ಲಿ ಇಂಧನದ ಟ್ಯಾಂಕರ್ ಸ್ಫೋಟಗೊಂಡಿದ್ದು, 105 ಜನರು ಮೃತಪಟ್ಟಿದ್ದಾರೆ. ಹಾಗೇ, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೈಜೀರಿಯಾದ (Nigeria) ರಾಜಧಾನಿ ಅಬುಜಾದ ಉತ್ತರಕ್ಕೆ ಸುಮಾರು 530 ಕಿಲೋಮೀಟರ್ ದೂರದಲ್ಲಿರುವ ತೌರಾ ಸ್ಥಳೀಯ ಸರ್ಕಾರಿ ಪ್ರದೇಶದ ಮಜಿಯಾ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ.
ಉತ್ತರ ನೈಜೀರಿಯಾದಲ್ಲಿ (Nigeria) ಚೆಲ್ಲಿದ್ದ ಇಂಧನವನ್ನು ಸಂಗ್ರಹಿಸಲು ನೆರೆದಿದ್ದ ಸ್ಥಳೀಯರ ಬಳಿ ಅಪಘಾತಕ್ಕೀಡಾದ ಟ್ಯಾಂಕರ್ ಸ್ಫೋಟಗೊಂಡಿದ್ದು, ಇದರಿಂದಾಗಿ 105 ಜನರು ಸಾವನ್ನಪ್ಪಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಜಿಗಾವಾ ರಾಜ್ಯದ ಗ್ರಾಮವಾದ ಮಜಿಯಾದಲ್ಲಿ ಸ್ಥಳೀಯ ಕಾಲಮಾನ ಮಂಗಳವಾರ ತಡರಾತ್ರಿ ಸಂಭವಿಸಿದ ಸ್ಫೋಟದಿಂದ ಟೋಲ್ ಹೆಚ್ಚಾಗುವ ನಿರೀಕ್ಷೆಯಿದೆ.
“ಚಾಲಕನ ನಿಯಂತ್ರಣ ಕಳೆದುಕೊಂಡ ಟ್ಯಾಂಕರ್ ಪಲ್ಟಿಯಾಗಿದೆ. ಇದರಿಂದ ಇಂಧನ ಹೊರಗೆ ಚೆಲ್ಲಿದೆ. ಈ ವೇಳೆ ಟ್ಯಾಂಕರ್ ಸ್ಫೋಟವಾಗಿ ಸುತ್ತಲೂ ಸೇರಿದ್ದ 105 ಜನ ಮೃತಪಟ್ಟಿದ್ದಾರೆ. ಕನಿಷ್ಠ 70 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಟ್ಯಾಂಕರ್ ಅಪಘಾತಕ್ಕೀಡಾದ ನಂತರ ಟ್ಯಾಂಕರ್‌ನಿಂದ ಇಂಧನ ಸಂಗ್ರಹಿಸಲು ನೆರೆದಿದ್ದ ಸ್ಥಳೀಯ ನಿವಾಸಿಗಳು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ರಿಂಗಿಮ್ ಮತ್ತು ಹಡೆಜಿಯಾ ಪಟ್ಟಣಗಳಲ್ಲಿನ ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಸಾಮೂಹಿಕ ಅಂತ್ಯಕ್ರಿಯೆಯನ್ನು ನಡೆಸಲಾಗುವುದು.
ಆಫ್ರಿಕಾದ ಅತಿದೊಡ್ಡ ತೈಲ ಉತ್ಪಾದಕರಲ್ಲಿ ಒಬ್ಬನ ಸ್ಥಾನಮಾನದ ಹೊರತಾಗಿಯೂ ನೈಜೀರಿಯಾದಲ್ಲಿ (Nigeria) ಬಡತನವು ತುಂಬಿದೆ.
ಕಳೆದ ತಿಂಗಳು ಉತ್ತರ-ಮಧ್ಯ ನೈಜೀರಿಯಾದಲ್ಲಿ (Nigeria) ಕನಿಷ್ಠ 48 ಜನರು ಪ್ರಯಾಣಿಕರು ಮತ್ತು ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಇಂಧನ ಟ್ಯಾಂಕರ್ ಸ್ಫೋಟಗೊಂಡು ಇತರ ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿತ್ತು.

ಕಾರು ಅಪಘಾತ – ಐವರು ಭಾರತೀಯರು ಸಾವು
ವಾಷಿಂಗ್ಟನ್: ಅಮೆರಿಕದ (America) ಟೆಕ್ಸಾಸ್‌ನ (Texas) ರಾಂಡೋಲ್ಫ್ ಬಳಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶದ ಮೂವರು ಸೇರಿದಂತೆ ಐವರು ಭಾರತೀಯರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಕಾರಿನಲ್ಲಿದ್ದ ಇನ್ನೋರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾನೆ. ಟೆಕ್ಸಾಸ್ ಪಬ್ಲಿಕ್ ಸೇಫ್ಟಿ ಅಧಿಕಾರಿಗಳ ಪ್ರಕಾರ, ದಕ್ಷಿಣ ಬನ್‌ಹ್ಯಾಮ್‌ನಿಂದ ದಕ್ಷಿಣಕ್ಕೆ 10 ಕಿಲೋಮೀಟರ್ ದೂರದಲ್ಲಿ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸಂಜೆ ಸುಮಾರು 6:45ರ ವೇಳೆಗೆ ಘಟನೆ ನಡೆದಿದೆ.
ಮೃತ ಐವರಲ್ಲಿ ಮೂವರು ಆಂಧ್ರಪ್ರದೇಶದ (Andhra Pradesh) ಚಿತ್ತೂರು ಜಿಲ್ಲೆಯವರು. ಮೃತರನ್ನು ಗುಡೂರು ಪಟ್ಟಣದ ತಿರುಮುರು ಗೋಪಿ, ಶ್ರೀಕಾಳಹಸ್ತಿಯ ರಜಿನಿ ಶಿವ ಮತ್ತು ಹರಿ ಎಂದು ಗುರುತಿಸಲಾಗಿದೆ. ಹರಿ ಅವರ ಪತಿ ಸಾಯಿ ಚೆನ್ನು ಅವರಿಗೆ ತೀವ್ರ ಗಾಯಗಳಾಗಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ. ಆಂಧ್ರಪ್ರದೇಶದ ಶಾಸಕ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಸದಸ್ಯ ಕೊಂಡಪಲ್ಲಿ ಶ್ರೀನಿವಾಸ್ ಅವರು ಈ ಘಟನೆಯ ಬಗ್ಗೆ ಮಾಹಿತಿ ನೀಡಿದರು.
ಅಮೆರಿಕದಲ್ಲಿ ನೆಲೆಸಿರುವ ತೆಲುಗರು ಅಪಘಾತದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ದೇಶದ ತೆಲುಗು ಸಂಘಟನೆಗಳು ದುರಂತ ಜೀವಹಾನಿಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿವೆ.
ಇಸ್ರೇಲ್ ವಾಯುದಾಳಿ: ಮೇಯರ್ ಸೇರಿ ಆರು ಮಂದಿ ಸಾವು
ಬೈರುತ್: ಲೆಬನಾನ್ ದಕ್ಷಿಣ ನಗರವಾದ ನಬಾಟಿಯೆಹ್‌ನಲ್ಲಿ ಮುನ್ಸಿಪಲ್ ಕಟ್ಟಡಗಳ ಮೇಲೆ ಬುಧವಾರ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಹೆಜ್ಬುಲ್ಲಾ ಮತ್ತು ಅದರ ಮಿತ್ರ ಅಮಲ್ ಅಧಿಕಾರವನ್ನು ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದ್ದು ಮೃತಪಟ್ಟವರಲ್ಲಿ ಮೇಯರ್ ಕೂಡ ಇದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಬತಿಯೆಹ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ರೀತಿಯ ಬೆಂಕಿಯ ಬಲೆಯಂತಾಗಿದೆ. ಅಲ್ಲಿ 11 ಬಾರಿ ವಾಯುದಾಳಿ ನಡೆಸಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದರು.
ಅಲ್ಲದೆ ನಾಗರಿಕರ ರಕ್ಷಣೆಗಾಗಿ ವಿಶ್ವಸಂಸ್ಥೆ ಮಧ್ಯೆಪ್ರವೇಶಿಸಬೇಕು ಎಂದು ಮನವಿ ಮಾಡಿದರು. ಇನ್ನು ಲೆಬನಾನ್‌ನ ಪ್ರಧಾನ ಮಂತ್ರಿ, ಈ ದಾಳಿಯು ನಗರದ ಮುನ್ಸಿಪಲ್ ಕೌನ್ಸಿಲ್‌ನ ಸಭೆಯನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದರು.
ನಬಾತಿಯೆ ಪುರಸಭೆ ಮತ್ತು ಪುರಸಭೆಗಳ ಒಕ್ಕೂಟದ ಎರಡು ಕಟ್ಟಡಗಳ ಮೇಲೆ ದಾಳಿ ನಡೆದಿದ್ದು ಆರು ಮಂದಿ ಬಲಿಯಾಗಿದ್ದು 43 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಸದ್ಯ ಅವಶೇಷಗಳಡಿಯಲ್ಲಿ ಬದುಕುಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅದು ಸೇರಿಸಿದೆ.
ನಬಾತಿಯೆಹ್ ಮೇಯರ್, ಇತರರ… ಹುತಾತ್ಮರಾಗಿದ್ದು, ಇದು ಹತ್ಯಾಕಾಂಡ, ನಬತಿಯೆಹ್ ಗವರ್ನರ್ ಹೋವೈಡಾ ಟರ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೈನಂದಿನ ಬಿಕ್ಕಟ್ಟು ನಿರ್ವಹಣಾ ಸಭೆಯಲ್ಲಿ ಮೇಯರ್ ಅಹ್ಮದ್ ಕಹಿಲ್ ಅವರು ತಮ್ಮ ತಂಡದೊಂದಿಗೆ ಪುರಸಭೆಯ ಕಟ್ಟಡದಲ್ಲಿದ್ದರು. ಈ ವೇಳೆ ದಾಳಿಗಳು ನಡೆದಿವೆ ಎಂದು ಅವರು ಹೇಳಿದರು.
ಅಮೆರಿಕದಿಂದ 31 ಪ್ರಿಡೇಟರ್ ಡ್ರೋನ್ ಖರೀದಿಗೆ ಭಾರತ ಸಹಿ:
ನವದೆಹಲಿ: ದೇಶದ ರಕ್ಷಣಾ ಸಾಮರ್ಥ್ಯವನ್ನು, ವಿಶೇಷವಾಗಿ ಕಣ್ಗಾವಲು ಸಾಮರ್ಥ್ಯ ಹೆಚ್ಚಿಸುವ ಭಾಗವಾಗಿ ಅಮೆರಿಕದಿಂದ 31 ಎಂಕ್ಯು -9ಬಿ ಪ್ರಿಡೇಟರ್ ಡ್ರೋನ್‌ಗಳನ್ನು 33,600 ಕೋಟಿ ರು. ವೆಚ್ಚದಲ್ಲಿ ಖರೀದಿ ಮಾಡುವ ಒಪ್ಪಂದಕ್ಕೆ ಭಾರತ ಮಂಗಳವಾರ ಸಹಿ ಹಾಕಿದೆ. ಕಳೆದ ತಿಂಗಳ ಮೋದಿ ಅಮೆರಿಕ ಭೇಟಿ ವೇಳೆ ಈ ಖರೀದಿ ಕುರಿತು ಅಂತಿಮ ಮಾತುಕತೆ ನಡೆದಿತ್ತು. ಅದರ ಬೆನ್ನಲ್ಲೇ ಕಳೆದ ವಾರ ಮೋದಿ ನೇತೃತ್ವದ ಸಂಪುಟ ಸಮಿತಿ ಅನುಮೋದನೆ ನೀಡಿತ್ತು. 31 ಡ್ರೋನ್‌ಗಳಲ್ಲಿ 15 ನೌಕಾಪಡೆಗೆ, 8 ವಾಯುಪಡೆಗೆ ಹಾಗೂ ಉಳಿದ 8 ಭೂಸೇನೆ ಬಳಸಲಿದೆ.
ಅಮೆರಿಕದ ಜನರಲ್ ಅಟೋಮಿಕ್ಸ್ ಕಂಪನಿ ತಯಾರಿಸುವ ಡ್ರೋನ್ ಇದು. ದೂರದಿಂದಲೇ ಇದನ್ನು ನಿಯಂತ್ರಿಸಬಹುದು. ಕ್ಷಿಪಣಿ ಹೊತ್ತೊಯ್ದು ದಾಳಿ ನಡೆಸಬಲ್ಲದು. ಅಲ್ಲದೆ, ಇದನ್ನು ಗಡಿಯಲ್ಲಿ ಕಣ್ಗಾವಲು, ಮಾನವೀಯ ನೆರವು, ಪರಿಹಾರ ಕಾರ್ಯ, ಶೋಧ ಕಾರ್ಯ, ಭೂ, ನೌಕಾ, ವಾಯುಪಡೆ ಯುದ್ಧಗಳ ವೇಳೆ, ಆಗಸದಿಂದ ಎದುರಾಗಬಹುದಾದ ಅಪಾಯಗಳ ಮುನ್ಸೂಚನೆ ಪಡೆಯಲು ಹೀಗೆ ನಾನಾ ರೀತಿಯ ಕೆಲಸಗಳಿಗೆ ಬಳಸಬಹುದು. ಇದು ಸತತವಾಗಿ 35 ಗಂಟೆಗಳ ಕಾಲ ಆಗಸದಲ್ಲೇ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. 5670 ಕೆಜಿ ತೂಕ ಹೊರಬಲ್ಲದು. 40 ಸಾವಿರ ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸಬಲ್ಲದು. ನೆಲದಿಂದ ಕೇವಲ 250 ಅಡಿ ಎತ್ತರದಲ್ಲೂ ಶತ್ರುಗಳ ಕಣ್ತಪ್ಪಿಸಿ ಚಲಿಸಬಲ್ಲದು. ಚಲಿಸುವ ಸಾಮರ್ಥ್ಯ ಗಂಟೆಗೆ 442 ಕಿ.ಮೀ. ಇದೆ.
ಇದು 2022ರ ಜುಲೈನಲ್ಲಿ ಆಫ್ಘಾನಿಸ್ತಾನದ ಕಾಬುಲ್‌ನಲ್ಲಿ ಅಲ್‌ಖೈದಾ ಉಗ್ರ ಐಮನ್ ಅಲ್-ಜವಾಹಿರಿ ಹತ್ಯೆಗೆ ಬಳಸಲಾಗಿದ್ದ ಎಂಕ್ಯು -9 ಡ್ರೋನ್‌ನ ರೂಪಾಂತರವಾಗಿದೆ.