ಕರ್ನಾಟಕ ಸೇರಿದಂತೆ ದೇಶದ 44 ಕಡೆ ಎನ್ಐಎ ದಾಳಿ!
ನವದೆಹಲಿ: ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಜಾಗತಿಕ ಭಯೋತ್ಪಾದಕ ಗುಂಪು ಐಸಿಸ್ ಸಂಚು ರೂಪಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕರ್ನಾಟಕ ಮತ್ತು ಮಹಾರಾಷ್ಟ್ರದ ಸುಮಾರು 44 ಸ್ಥಳಗಳಲ್ಲಿ ದಾಳಿ ಆರಂಭಿಸಿದೆ ಎಂದು ಎಎನ್ಐ ವರದಿ ಮಾಡಿದೆ.
ಕರ್ನಾಟಕದಲ್ಲಿ ಒಂದುಕಡೆ, ಪುಣೆಯಲ್ಲಿ 2 ಕಡೆ, ಠಾಣೆ ಗ್ರಾಮೀಣದಲ್ಲಿ 31 ಕಡೆ, ಠಾಣೆ ನಗರದಲ್ಲಿ 9 ಕಡೆ ಮತ್ತು ಭಯಂದರ್ನಲ್ಲಿ ಒಂದು ಕಡೆ ಎನ್ಐಎ ಅಧಿಕಾರಿಗಳು ಶೋಧನೆ ನಡೆಸುತ್ತಿದ್ದಾರೆ. ‘ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುವ ಭಯೋತ್ಪಾದಕ ಸಂಘಟನೆಯ ಯೋಜನೆಗಳನ್ನು ವಿಫಲಗೊಳಿಸಲು ಎನ್ಐಎ ವ್ಯಾಪಕ ತನಿಖೆ ನಡೆಸುತ್ತಿದೆ ಎಂದು ಹೇಳಲಾಗಿದೆ.
Of the total 44 locations being raided by the NIA since this morning, the agency sleuths have searched 1 place in Karnataka, 2 in Pune, 31 in Thane Rural, 9 in Thane city and 1 in Bhayandar. https://t.co/vKl7119DcV
— ANI (@ANI) December 9, 2023
ಡಿಸೆಂಬರ್ 2ರಂದು ಬಳ್ಳಾರಿಯಲ್ಲಿ ನಡೆದಿತ್ತು ದಾಳಿ
ರಾಷ್ಟ್ರೀಯ ತನಿಖಾ ದಳವು (National Investigation Agency) ನಕಲಿ ನೋಟು (Fake Currency) ಜಾಲದ ಮೇಲೆ ಮುಗಿಬಿದ್ದಿತ್ತು. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಎನ್‌ಐಎ ಏಕಕಾಲದಲ್ಲಿ ದಾಳಿ (NIA Raid) ನಡೆಸಿದ್ದು, ಅದರಲ್ಲಿ ಕರ್ನಾಟಕದ ಬಳ್ಳಾರಿಯಲ್ಲೂ ಒಬ್ಬನನ್ನು ಸೆರೆ (One arrested in Ballary) ಹಿಡಿದಿದೆ. ಬಳ್ಳಾರಿಯಲ್ಲಿ ಬಂಧಿತ ಆರೋಪಿಯನ್ನು ಮಹೇಂದ್ರ ಎಂದು ಗುರುತಿಸಲಾಗಿದ್ದು, ಆತನಿಂದ ಭಾರಿ ಪ್ರಮಾಣದ ನಕಲಿ ನೋಟು, ನೋಟು ತಯಾರಿಸುವ ಪೇಪರ್, ಪ್ರಿಂಟಿಂಗ್ ಮೆಷಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತ 500, 200, ಹಾಗೂ 100 ರೂ ಮುಖಬೆಲೆಯ ನೋಟು ತಯಾರಿಸುತ್ತಿದ್ದ ಎನ್ನಲಾಗಿದೆ.
ನಾಲ್ಕು ರಾಜ್ಯಗಳಲ್ಲಿ ಏನೇನು ಸಿಕ್ಕಿದೆ, ಎಷ್ಟು ಜನ ಬಂಧನ?
ರಾಷ್ಟ್ರೀಯ ತನಿಖಾ ದಳವು ಏಕಕಾಲದಲ್ಲಿ ನಾಲ್ಕು ರಾಜ್ಯಗಳಲ್ಲಿ ದಾಳಿಯನ್ನು ಸಂಘಟಿಸಿತ್ತು. ನಕಲಿ ನೋಟುಗಳ ಮುದ್ರಣದ ಸ್ಪಷ್ಟ ಸುಳಿವನ್ನು ಪಡೆದೇ ಈ ದಾಳಿ ನಡೆದಿದ್ದು ಆರೋಪಿಗಳು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಗಡಿಯಾಚೆಯಿಂದ ಭಾರತಕ್ಕೆ ನಕಲಿ ನೋಟುಗಳು ಹರಿದು ಬರುತ್ತಿರುವ ಬಗ್ಗೆ ಸಂಶಯ ಮೂಡಿತ್ತು. ಈ ನಿಟ್ಟಿನಲ್ಲಿ ನವೆಂಬರ್ 24ರಂದು ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಅದರ ಭಾಗವಾಗಿ ಆಳ ತನಿಖೆಗೆ ಇಳಿದ ಸಂಸ್ಥೆಗೆ ದೇಶದೊಳಗಿನ ದುಷ್ಟ ಪ್ರಯೋಗಗಳ ಸುಳಿವುಗಳು ಸಿಕ್ಕವು.
ಸಾಕಷ್ಟು ಅಧ್ಯಯನದ ಬಳಿಕ ಎನ್‌ಐಎ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಹುಲ್ ತಾನಾಜಿ ಪಾಟೀಲ್ ಅಲಿಯಾಸ್ ಜಾವೇದ್, ಉತ್ತರ ಪ್ರದೇಶದ ಶಹಜಹಾನ್ ಪುರ ಜಿಲ್ಲೆಯ ವಿವೇಕ್ ಠಾಕೂರ್ ಅಲಿಯಾಸ್ ಆದಿತ್ಯ ಸಿಂಗ್ ಮತ್ತು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಮಹೇಂದರ್ ಎಂಬವರ ಮೇಲೆ ಕಣ್ಣಿಟ್ಟಿತ್ತು ಮತ್ತು ಶನಿವಾರ ದಾಳಿ ಮಾಡಿ ಅವರನ್ನು ಬಂಧಿಸಿತು.
ಇದಲ್ಲದೆ ಬಿಹಾರ ಜಿಲ್ಲೆಯ ರೋಹ್ತಾಸ್ ಜಿಲ್ಲೆಯ ಶಶಿಭೂಷಣ್, ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯ ಶಿವ ಪಾಟೀಲ್ ಅಲಿಯಾಸ್ ಭೀಮರಾವ್ ಅವರ ಮನೆಗಳಿಗೂ ದಾಳಿ ಮಾಡಲಾಗಿದೆ.
ವಿವೇಕ್ ಠಾಕೂರ್ ಮನೆಯಿಂದ 6600 ಮುಖ ಬೆಲೆಯ ಕರೆನ್ಸಿ, ಪ್ರಿಂಟಿಂಗ್ ಪೇಪರ್ ವಶಪಡಿಸಿಕೊಳ್ಳಲಾಗಿದೆ. ಠಾಕೂರ್ ಮತ್ತು ಪಾಟೀಲ್ ಗಡಿಯಾಚೆಯಿಂದಲೂ ಕರೆನ್ಸಿಗಳನ್ನು ತರಿಸಿಕೊಂಡು ಇಲ್ಲಿ ಪ್ರಸರಣ ಮಾಡುತ್ತಿದ್ದರು ಎನ್ನಲಾಗಿದೆ.