ನವದೆಹಲಿ : ಅಸ್ವಾಭಾವಿಕ ಲೈಂಗಿಕ ಬೇಡಿಕೆ ನಿರಾಕರಿಸಿದ್ದಕ್ಕೆ ಸ್ನೇಹಿತನನ್ನೇ ಕೊಲೆಗೈದ 20ರ ಯುವಕ
ನವದೆಹಲಿ: 20 ವರ್ಷದ ಯುವಕ ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕತೆಗೆ ತಿರಸ್ಕರಿಸಿದ್ದಕ್ಕೆ ಸ್ನೇಹಿತನನ್ನೇ (Friend) ಕೊಲೆ ಮಾಡಿರುವ ಘಟನೆ ದೆಹಲಿಯ (Delhi) ಡಿಡಿಎ ಪಾರ್ಕ್ ಮೋರಿ ಗೇಟ್ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಉತ್ತರ ಪ್ರದೇಶ (Uttar Pradesh) ಜಲೋನ್ ಜಿಲ್ಲೆಯ ರುದೂರಪುರ ಗ್ರಾಮದ ಪ್ರಮೋದ್ ಕುಮಾರ್ ಶುಕ್ಲಾ ಎಂದು ಗುರುತಿಸಲಾಗಿದೆ. ರಾಕೇಶ್ ತೋಮರ್ ಅವರ ಅಂಗಡಿಯಲ್ಲಿರುವ ಖೋಯಾ ಮಂಡಿಯಲ್ಲಿ ಪ್ರಮೋದ್ ಕೆಲಸ ಮಾಡುತ್ತಿದ್ದು, ಅಲ್ಲೇ ಪಕ್ಕದಲ್ಲಿದ್ದ ಮೋರಿ ಗೇಟ್‌ನಲ್ಲಿರುವ ರೈನ್ ಬಸೇರಾದಲ್ಲಿ ಗೆಳೆಯ ರಾಜೇಶ್ ಜೊತೆಗೆ ವಾಸಿಸುತ್ತಿದ್ದ.
ಪ್ರಮೋದ್ ಕೊಲೆಯ ಹಿಂದಿನ ದಿನ ಗೆಳೆಯರಿಬ್ಬರು ಜೊತೆಗೆ ಇದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಬಳಿಕ ಕಾಣೆಯಾಗಿದ್ದ ಆರೋಪಿ ರಾಜೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣದ ಬಗ್ಗೆ ಬಾಯಿಬಿಟ್ಟಿದ್ದಾನೆ. ಸ್ನೇಹಿತನೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸುವಂತೆ ಒತ್ತಡ ನೀಡಿದ್ದ. ಆದರೆ ಅಸ್ವಾಭಾವಿಕ ಲೈಂಗಿಕತೆಯನ್ನು ಪ್ರಮೋದ್ ನಿರಾಕರಿಸಿದ್ದಾನೆ. ಇದಕ್ಕೆ ಮತ್ತಷ್ಟು ಕೋಪಗೊಂಡ ರಾಜೇಶ್ ಜಗಳ ಮಾಡಿದ್ದಾನೆ. ನಂತರ ದಾರುಣವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ನಂತರ ಪ್ರಮೋದ್ ಬಳಿ ಇದ್ದ 18,500 ರೂಪಾಯಿ ಮತ್ತು ಮೊಬೈಲ್ ಫೋನ್ ತೆಗೆದುಕೊಂಡು ಆರೋಪಿ ಪರಾರಿಯಾಗಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂದೂ ದೇವರನ್ನು ನಂಬಬೇಡಿ, ಬೌದ್ಧ ಧರ್ಮ ಅಳವಡಿಸಿಕೊಳ್ಳಿ ಎಂದಿದ್ದ ಮುಖ್ಯಶಿಕ್ಷಕ ಅರೆಸ್ಟ್
ರಾಯ್ಪುರ್: ಹಿಂದೂ ದೇವರನ್ನು (Hindu God) ನಂಬಬೇಡಿ, ಬೌದ್ಧ ಧರ್ಮ ಅಳವಡಿಸಿಕೊಳ್ಳಿ ಅಂತ ಶಿಕ್ಷಕರೊಬ್ಬರು ಮಕ್ಕಳಿಗೆ ಪ್ರಮಾಣ ವಚನ ಬೋಧಿಸಿದ ಘಟನೆ ಛತ್ತೀಸ್‍ಘಡದ ಬಿಲಾಸ್‍ಪುರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಶಿಕ್ಷಕ ರತನ್‍ಲಾಲ್ ಸರೋವರ್ ರನ್ನು ಬಂಧಿಸಲಾಗಿದೆ. ಮುಖ್ಯ ಶಿಕ್ಷಕನ ಸ್ಥಾನದಿಂದಲೂ ಅಮಾನತುಗೊಳಿಸಲಾಗಿದೆ.
ನಡೆದಿದ್ದೇನು..?: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ ಆರೋಪಿ ಮುಖ್ಯಸ್ಥರು ಮೊಹ್ತರಾಯ್ ಗ್ರಾಮದಲ್ಲಿ ಮಕ್ಕಳು ಮತ್ತು ಜನರ ಗುಂಪನ್ನು ಒಟ್ಟುಗೂಡಿಸಿದ್ದಾರೆ. ಬಳಿಕ ಅವರಿಗೆ ಹಿಂದೂ ದೇವರುಗಳನ್ನು ನಾವು ಪೂಜಿಸುವುದಿಲ್ಲ. ಬೌದ್ಧ ಧರ್ಮವನ್ನು ಅನುಸರಿಸುತ್ತೇವೆ ಎಂದು ಪ್ರತಿಜ್ಞೆ ಮಾಡಲಾಯಿತು.
ಈ ಸಂಬಂಧ ಹಿಂದೂ ಸಂಘಟನೆಯೊಂದರ ಪದಾಧಿಕಾರಿ ರೂಪೇಶ್ ಶುಕ್ಲಾ ಎಂಬವರು ಹೆಡ್ ಮಾಸ್ಟರ್ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಶಿವ, ರಾಮ, ಕೃಷ್ಣ ಸೇರಿದಂತೆ ಹಿಂದೂ ದೇವತೆಗಳನ್ನು ಪೂಜಿಸುವುದಿಲ್ಲ ಮತ್ತು ಬೌದ್ಧ ಧರ್ಮವನ್ನು ಅನುಸರಿಸುವುದಾಗಿ ಪ್ರಮಾಣ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅವರ ಈ ಕ್ರಮ ಸನಾತನ ಧರ್ಮದಲ್ಲಿ ನಂಬಿಕೆ ಇರುವ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿತು. ಸದ್ಯ ದೂರಿನ ಆಧಾರದ ಮೇಲೆ ಹೆಡ್‌ಮಾಸ್ಟರ್ ವಿರುದ್ಧ ಐಪಿಸಿ ಸೆಕ್ಷನ್ 153A (ಧರ್ಮ, ಜಾತಿ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295A (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.