ಗುರುವಾರ, ಮಾರ್ಚ್ 13, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Neru: 'ನೇರು' ಚಿತ್ರಕ್ಕೆ ಸಹಿ ಮಾಡಿದ ನಟಿ ಪ್ರಿಯಾಮಣಿ!

Twitter
Facebook
LinkedIn
WhatsApp
Neru: 'ನೇರು' ಚಿತ್ರಕ್ಕೆ ಸಹಿ ಮಾಡಿದ ನಟಿ ಪ್ರಿಯಾಮಣಿ!

ನ್ನಡದ ಹೆಸರಾಂತ ನಟಿ ಪ್ರಿಯಾಮಣಿ (Priyamani) ನಟನೆಯ ಜವಾನ್ ಸಿನಿಮಾದ ಭಾರೀ ಗೆಲುವು ಹಲವರಿಗೆ ಅದೃಷ್ಟವನ್ನು ತಂದಿದೆ. ಜವಾನ್ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದ ಪ್ರಿಯಾಮಣಿ ಇದೀಗ ಮತ್ತೋರ್ವ ಸ್ಟಾರ್ ನಟನ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಮಲಯಾಳಂನ ಹೆಸರಾಂತ ನಟ ಮೋಹನ್ ಲಾಲ್ (Mohan Lal) ನಟನೆಯ ‘ನೇರು’ (Neru) ಸಿನಿಮಾಗೆ ಪ್ರಿಯಾಮಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Neru: 'ನೇರು' ಚಿತ್ರಕ್ಕೆ ಸಹಿ ಮಾಡಿದ ನಟಿ ಪ್ರಿಯಾಮಣಿ!

ಈ ಮಾಹಿತಿಯನ್ನು ಸ್ವತಃ ಪ್ರಿಯಾಮಣಿ ಅವರೇ ಹಂಚಿಕೊಂಡಿದ್ದು, ನೇರು ಸಿನಿಮಾದ ಶೂಟಿಂಗ್ ನಲ್ಲೂ ಭಾಗಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ನಾಯಕಿಯಾಗಿ ಆಯ್ಕೆಯಾಗಿರುವ ಕುರಿತು ಹೇಳಿಕೊಂಡಿದ್ದರೂ, ಪಾತ್ರದ ಹಿನ್ನೆಲೆಯನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ. ಆದರೆ, ಹೆಮ್ಮೆಯಿಂದ ಈ ಸಿನಿಮಾದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. 

Neru: 'ನೇರು' ಚಿತ್ರಕ್ಕೆ ಸಹಿ ಮಾಡಿದ ನಟಿ ಪ್ರಿಯಾಮಣಿ!

ಜವಾನ್ ಸಿನಿಮಾದಲ್ಲಿ ಪ್ರಿಯಾಮಣಿ ಅವರ ಪಾತ್ರ ತುಂಬಾ ಹೊತ್ತು ಪರದೆಯ ಮೇಲೆ ಬಾರದೇ ಇದ್ದರೂ, ಅದೊಂದು ವಿಭಿನ್ನ ಮತ್ತು ವಿಶೇಷ ಪಾತ್ರವಾಗಿತ್ತು. ಹಾಗಾಗಿ ಪ್ರಿಯಾಮಣಿ ಪಾತ್ರ ಜನರ ಮನಸ್ಸಿನಲ್ಲಿ ಉಳಿದುಕೊಂಡಿತ್ತು. ಇದೀಗ ಮತ್ತೆ ಸ್ಟಾರ್ ನಟನ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

ಈ ಸಿನಿಮಾವನ್ನು ಜೀತು ಜೋಸೆಫ್ (Jeetu Joseph) ನಿರ್ದೇಶನ ಮಾಡುತ್ತಿದ್ದು, ಮೋಹನ್ ಲಾಲ್ ನಟನೆಯ ದೃಶ್ಯಂ ಸಿನಿಮಾಗೆ ಇವರೇ ನಿರ್ದೇಶಕರು. ದೃಶ್ಯಂ, ದೃಶ್ಯಂ2 ಯಶಸ್ಸಿನ ನಂತರ ಮತ್ತೆ ಮೋಹನ್ ಲಾಲ್ ಜೊತೆ ಜೀತು ಕೈ ಜೋಡಿಸಿದ್ದಾರೆ. ಹೀಗಾಗಿ ನೇರು ಸಿನಿಮಾದ ಬಗ್ಗೆ ಈಗಿನಿಂದಲೇ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಮತ್ತೊಂದು ವಿಶೇಷ ಕತೆಯನ್ನು ಹೇಳಲಿದ್ದಾರಂತೆ ಜೀತು ಜೋಸೆಫ್.

Neru: 'ನೇರು' ಚಿತ್ರಕ್ಕೆ ಸಹಿ ಮಾಡಿದ ನಟಿ ಪ್ರಿಯಾಮಣಿ!
‘ಒಳ್ಳೆಯ ಸಮಯ ಈಗ ಶುರುವಾಗಿದೆ’; ‘ಜವಾನ್’ ಯಶಸ್ಸಿನ ಬಗ್ಗೆ ನಯನತಾರಾ ಮಾತು

ನಟಿ ನಯನತಾರಾ (Nayanthara) ಬಾಳಲ್ಲಿ ಎಲ್ಲವೂ ಒಳ್ಳೆಯದಾಗುತ್ತಿದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ವಿಘ್ನೇಶ್ ಶಿವನ್ ಅವರನ್ನು ನಯನತಾರಾ ಕಳೆದ ವರ್ಷ ಮದುವೆ ಆದರು. ಬಾಡಿಗೆ ತಾಯ್ತನದ ಮೂಲಕ ಅವರು ಅವಳಿ ಮಕ್ಕಳನ್ನು ಪಡೆದರು. ಮಕ್ಕಳ ಆರೈಕೆ ಜೊತೆಗೆ ಚಿತ್ರರಂಗದಲ್ಲೂ ತೊಡಗಿಕೊಂಡಿದ್ದಾರೆ. ಈಗ ನಯನತಾರಾ ನಟನೆಯ ‘ಜವಾನ್’ ಸಿನಿಮಾ (Jawan Movie) ಸೂಪರ್ ಹಿಟ್ ಆಗಿದೆ. ಈ ಬೆನ್ನಲ್ಲೇ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟ್ ಒಂದನ್ನು ಹಾಕಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ನಯನತಾರಾ ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದರ ಜೊತೆಗೆ ಸಾಕಷ್ಟು ವಿವಾದಗಳನ್ನು ಕೂಡ ಮಾಡಿಕೊಂಡಿದ್ದಾರೆ. ಅವರ ಸಿನಿಮಾಗಳು ಸೋತಾಗ ಅನೇಕರು ಟೀಕೆ ಮಾಡಿದ್ದೂ ಇದೆ. ಈಗ ‘ಜವಾನ್’ ಸಿನಿಮಾದಿಂದ ಅವರಿಗೆ ಬೇಡಿಕೆ ಹೆಚ್ಚಿದೆ. ಈ ಕಾರಣದಿಂದಲೇ ನಯನತಾರಾ ಈ ರೀತಿಯ ಪೋಸ್ಟ್​ ಹಾಕಿದ್ದಾರೆ ಎನ್ನಲಾಗುತ್ತಿದೆ.

‘ಜವಾನ್’ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ 342 ಕೋಟಿ ರೂಪಾಯಿ ಗಳಿಸಿದೆ. ವಿಶ್ವ ಮಟ್ಟದಲ್ಲಿ ಈ ಚಿತ್ರ 600 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಾರದ ದಿನವೂ ಚಿತ್ರ ಎರಡಂಕಿ ಕಲೆಕ್ಷನ್ ಮಾಡುತ್ತಿದೆ ಅನ್ನೋದು ವಿಶೇಷ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist