ಶುಕ್ರವಾರ, ಜುಲೈ 5, 2024
ದರ್ಶನ್​ ಬಂಧನದ ಬಳಿಕ ಮೊದಲ ಬಾರಿ ಮೌನ ಮುರಿದ ಸುಮಲತಾ ಅಂಬರೀಷ್​!-ಬಿಹಾರದಲ್ಲಿ 15 ದಿನಗಳಲ್ಲಿ 10 ಸೇತುವೆ ಕುಸಿತ!-ನಟ ದರ್ಶನ್ ಗೆ ಜು.18 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ!-ಶಾಸಕ ಡಾ. ಮಂತರ್ ಗೌಡ ಸೂಚನೆ.ಕೊಡಗಿನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರವಾಸಿ ಮಾರ್ಗದರ್ಶಕ ಹುದ್ದೆಗೆ ನೇಮಕ ಕುರಿತಂತೆ ಪ್ರಕಟಣೆ ಹೊರಡಿಸಿದ ಪ್ರವಾಸೋದ್ಯಮ ಇಲಾಖೆ.-ಕನ್ನಡದಲ್ಲಿ ಹವಾ‌ ಎಬ್ಬಿಸಿದೆ ಸಾಂಕೇತ್ ಚಿತ್ರದ ಟೀಸರ್. ಸೂಪರ್ ಅಂದ್ರು ವೀಕ್ಷಕರು!-ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ ನಿಧನ.!-ವಿಶ್ವಕಪ್ ಕಿರೀಟ ಗೆದ್ದ ಬೆನ್ನಲ್ಲೇ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ T20 ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ!-ಬುಮ್ರ, ಹಾರ್ದಿಕ್ ಮ್ಯಾಜಿಕ್ ಬೌಲಿಂಗ್; ಸೂರ್ಯಕುಮಾರ್ ಸಕತ್ ಕ್ಯಾಚ್ - ಭಾರತಕ್ಕೆ ವಿಶ್ವಕಪ್-ಬಹು ವರ್ಷಗಳ ಕನಸು ನನಸು; ಟಿ-20 ವಿಶ್ವಕಪ್ ಕಿರೀಟ ಗೆದ್ದ ಭಾರತ-ಪ್ರವಾಸಿಗರ ಗಮನಕ್ಕೆ; ಕೊಡಗಿನ ಗಾಜಿನ ಸೇತುವೆ ಬಂದ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

NDA ಜೊತೆಯಲ್ಲಿ ಇರುತ್ತೆವೆ ಎಂದ TDP ಮುಖ್ಯಸ್ಥ ಚಂದ್ರಬಾಬು ನಾಯ್ಡು; ಬಿಜೆಪಿ ರಿಲ್ಯಾಕ್ಸ್!

Twitter
Facebook
LinkedIn
WhatsApp
NDA ಜೊತೆಯಲ್ಲಿ ಇರುತ್ತೆವೆ ಎಂದ TDP ಮುಖ್ಯಸ್ಥ ಚಂದ್ರಬಾಬು ನಾಯ್ಡು; ಬಿಜೆಪಿ ರಿಲಾಕ್ಸ್!

ತೆಲುಗು ದೇಶಂ ಪಕ್ಷದ(Telugu Desam Party) ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು( N. Chandrababu Naidu) ಬುಧವಾರ ತಮ್ಮ ಪಕ್ಷವು ಭಾರತೀಯ ಜನತಾ ಪಕ್ಷ ನೇತ್ರತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದೊಂದಿಗೆ ಇರುತ್ತದೆ ಎಂದು ಹೇಳಿದರು.

ಟಿಡಿಪಿ(TDP) ಮತ್ತು ಅದರ ಮಿತ್ರ ಪಕ್ಷಗಳು ಆಂಧ್ರಪ್ರದೇಶದಲ್ಲಿ 175 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ 164 ಸ್ಥಾನಗಳನ್ನು ಗೆಲ್ಲುವ ಮೂಲಕ ಬಾರಿ ಜನಾದೇಶದೊಂದಿಗೆ ಗೆದ್ದುಕೊಂಡಿದೆ.

ಅಮರಾವತಿಯ ಉಂಡಾವಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿದಾರರೊಂದಿಗೆ ಮಾತನಾಡಿದ ಚಂದ ಬಾಬು ನಾಯ್ಡು ಇಂಡಿಯಾ ಮೈತ್ರಿಕೂಟದಿಂದ ಟಿಡಿಪಿಗೆ ಅಹ್ವನವಿದೆ ಎಂಬ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಲು ನಿರಕರಿಸಿದರು.

ನಾನು ಹಲವಾರು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ ಮತ್ತು ದೇಶದಲ್ಲಿ ಹಲವಾರು ರಾಜಕೀಯ ಬದಲಾವಣೆಗಳನ್ನು ಕಂಡಿದ್ದೇನೆ ನಾವು NDA ಜೊತೆಯಲ್ಲಿದ್ದೇವೆ ಮತ್ತು ಮಿತ್ರ ಪಕ್ಷಗಳ ಸಭೆಯಲ್ಲಿ ಭಾಗವಹಿಸಲು ಇಂದು ಮಧ್ಯಾಹ್ನ ನವ ದೆಹಲಿಗೆ ಹೋಗುತ್ತಿದ್ದೇನೆ ಹಾಗೂ ಅಲ್ಲಿಂದ ಹಿಂತಿರುಗಿದ ನಂತರ ಎಲ್ಲಾ ವಿವರಗಳನ್ನು ತಿಳಿಸುತ್ತೇನೆ ಎಂದು ಚಂದ್ರಬಾಬು ನಾಯ್ಡು ಹೇಳಿದರು.

ತಮ್ಮ 45 ವರ್ಷಗಳ ರಾಜಕೀಯ ಜೀವನದಲ್ಲಿ ಇದು ಐತಿಹಾಸಿಕ ಚುನಾವಣೆಯಾಗಿದೆ ಎಂದು ನಾಯ್ಡು ಹೇಳಿದರು. 1994 ರ ನಂತರ ಟಿಡಿಪಿ ಪಕ್ಷವು ಬಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ನಂತರ ಸದನದಲ್ಲಿ ವಿರೋಧ ಪಕ್ಷದ ನಾಯಕರೆ ಇರಲಿಲ್ಲ ಎಂದು ಹೇಳಿದರು.

ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿ ಡಿ ಪಿ ಗೆ(TDP) 45.60% ಸೇರಿದಂತೆ ಎನ್ ಡಿ ಎ(NDA) ಒಕ್ಕೂಟಕ್ಕೆ 55.38 ಶೇಕಡ ಮತಗಳನ್ನು ಪಡೆದುಕೊಂಡಿದೆ. ಆದರೆ YSR ಕಾಂಗ್ರೆಸ್ ಪಕ್ಷವು ಕೇವಲ 39.37% ಮತಗಳನ್ನು ಗಳಿಸಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದರು. ವಿದೇಶದಿಂದ ಬಂದ ಮತದಾರರು ಕೂಡ ತಮ್ಮ ಊರಿಗೆ ತೆರಳಿ ಮತ ಚಲಾಯಿಸಿದರೆ ಎಂದು ತಿಳಿಸಿದರು

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ