ನರೇಶ್ ಪ್ರಪೋಸಲ್‌ಗೆ ಮನಸೋತು ವೇದಿಕೆಯಲ್ಲಿ ಕೆನ್ನೆಗೆ ಸಿಹಿ ಮುತ್ತನ್ನಿಟ್ಟ ಪವಿತ್ರ ಲೋಕೇಶ್!
ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಸದ್ಯ ತೆಲುಗು ನಾಡಿನಲ್ಲಿಯೇ ಹೆಚ್ಚು ಸಕ್ರಿಯರು. ತೆಲುಗು ಸಿನಿಮಾಗಳು, ತೆಲುಗು ಟಿವಿ ಶೋಗಳಲ್ಲಿಯೇ ಅವರು ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಒಬ್ಬರೇ ಹೋಗದೇ, ಜತೆಗೆ ನರೇಶ್ ಅವರನ್ನು ಕರೆದೊಯ್ಯುತ್ತಾರೆ. ಇದೀಗ ಇತ್ತೀಚೆಗಷ್ಟೇ ತೆಲುಗಿನ ಶೋವೊಂದಕ್ಕೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಜೋಡಿ ತೆರಳಿ, ಒಂದಷ್ಟು ಕಾಲ ಎಲ್ಲರ ಜತೆ ನಕ್ಕು ನಲಿದಿದೆ. ಇದಷ್ಟೇ ಅಲ್ಲ ಪವಿತ್ರಾಗೆ ಎಲ್ಲರ ಮುಂದೆಯೇ ಪ್ರೇಮ ನಿವೇದನೆಯನ್ನೂ ಮಾಡಿದ್ದಾರೆ ನರೇಶ್!
ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತು. ಅಧಿಕೃತವಾಗಿ ಈ ಜೋಡಿ ಜತೆಯಾಗಿಯೇ ಕಾಲಕಳೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿಯೂ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಶೋದಲ್ಲಿ ಭಾಗವಹಿಸಿ ಬಂದಿದೆ ಈ ಜೋಡಿ.
ತೆಲುಗು ವಾಹಿನಿಯಲ್ಲಿ ಗಣೇಶ ಚೌತಿ ಪ್ರಯುಕ್ತ ಸ್ವಾಮಿ ರಾರ ಹೆಸರಿನ ಶೋ ನಡೆದಿದೆ. ಈ ಶೋಕ್ಕೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಇವರ ಜತೆಗೆ ಕಿರುತೆರೆಯ ಹಲವು ಕಲಾವಿದರೂ ಭಾಗವಹಿಸಿದ್ದರು. ಈಗ ಈ ಶೋನ ಎರಡನೇ ಪ್ರೋಮೋ ಬಿಡುಗಡೆ ಆಗಿದೆ.
ಪ್ರೋಮೋದಲ್ಲಿ ಪವಿತ್ರಾ ಲೋಕೇಶ್‌ಗೆ ನರೇಶ್ ಗುಲಾಬಿ ಹೂವನ್ನು ನೀಡಿ ಪ್ರೇಮ ನಿವೇದನೆ ಮಾಡಿದ್ದಾರೆ. ನರೇಶ್ ಪ್ರಪೋಸಲ್‌ಗೆ ಮನಸೋತು, ಅವರ ಕೆನ್ನೆಗೆ ಸಿಹಿ ಮುತ್ತನ್ನಿಟ್ಟಿದ್ದಾರೆ. ಅಷ್ಟೇ ಅಲ್ಲ ಇದೇ ವೇಳೆ ನರೇಶ್ ಅವರನ್ನು ನೀವು ಏನೆಂದು ಕರೆಯುತ್ತೀರಿ? ಎಂದು ವೇದಿಕೆ ಮೇಲಿದ್ದವರು ಪವಿತ್ರಾ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಆಗ ಕೊಂಚ ನಾಚಿಕೆಯಿಂದಲೇ ರಾಯ ಎಂದು ಹೇಳಿದ್ದಾರೆ ಪವಿತ್ರಾ. ಅಂದಹಾಗೆ, ಟಾಲಿವುಡ್‌ನಲ್ಲಿ ನರೇಶ್‌ಗೆ ನವರಸರಾಯ ಎಂಬ ಬಿರುದು ಇದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಒಟ್ಟಿಗೆ ನಟಿಸಿದ್ದ ಮಳ್ಳಿ ಪೆಳ್ಳಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು.
ನನ್ನ ಮ್ಯಾನೇಜರ್ ಮಾಡಿದ ಮೋಸದಿಂದ ಸಿನಿಮಾ ಆಫರ್ ಕಳೆದುಕೊಂಡೆ- ಅಮೀಷಾ ಪಟೇಲ್
ಸನ್ನಿ ಡಿಯೋಲ್ (Sunny Deol) ಜೊತೆಗಿನ ‘ಗದರ್ 2’ (Gadar 2) ಸಿನಿಮಾದ ಸಕ್ಸಸ್‌ನಿಂದ ಅಮೀಷಾ ಪಟೇಲ್‌ಗೆ (Ameesha Patel) ಬಿಗ್ ಓಪನಿಂಗ್ ಸಿಕ್ಕಿದೆ. ಈ ಗೆಲುವಿಗಾಗಿ ಸಾಕಷ್ಟು ವರ್ಷಗಳಿಂದ ನಟಿ ಕಾಯುತ್ತಿದ್ದರು. ಹೀಗಿರುವಾಗ ಸಂದರ್ಶನವೊಂದರಲ್ಲಿ ನಟಿ, ಸಿಗಬೇಕಿದ್ದ ದೊಡ್ಡ ಪ್ರಾಜೆಕ್ಟ್ ಆಫರ್‌ಗಳು ತಮ್ಮ ಮ್ಯಾನೇಜರ್‌ನಿಂದ ತಪ್ಪಿ ಹೋಗಿದ್ದರ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಮ್ಯಾನೇಜರ್‌ನಿಂದ ಆಗಿರುವ ನಂಬಿಕೆ ದ್ರೋಹದ ಬಗ್ಗೆ ನಟಿ ಬಿಚ್ಚಿಟ್ಟಿದ್ದಾರೆ.
ಸಾಕಷ್ಟು ಸಿನಿಮಾಗಳಿಗಾಗಿ ಮಾತುಕತೆ ನಡೆದಿತ್ತು. ಆದರೆ ಈಗ ಅದರ ಹೆಸರು ಹೇಳುವುದು ಬೇಡ. ಯಾಕೆಂದರೆ ಆ ಸಿನಿಮಾಗಳು ಈಗಾಗಲೇ ಬಂದುಹೋಗಿವೆ. ಆ ಸಮಯದಲ್ಲಿ ನನ್ನ ಮ್ಯಾನೇಜರ್- ಸಂಜಯ್ ಲೀಲಾ ಬನ್ಸಾಲಿ ನಡುವೆ ಮನಸ್ತಾಪ ಆಗಿತ್ತು. ಆ ಮ್ಯಾನೇಜರ್‌ನಿಂದ ನಾನು ದೂರ ಆದ ಬಳಿಕವೇ ಈ ಎಲ್ಲ ಸಂಗತಿಗಳು ನನಗೆ ಗೊತ್ತಾದವು ಎಂದು ಅಮಿಷಾ ಪಟೇಲ್ ಹೇಳಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಮಾತ್ರವಲ್ಲದೇ ಯಶ್ ರಾಜ್ ಫಿಲ್ಮ್, ಶಾರುಖ್ ಮುಂತಾದವರ ಜೊತೆಗೂ ಕೆಲಸ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಂಡ ಬಗ್ಗೆ ಅಮೀಷಾ ಪಟೇಲ್ ಮಾತನಾಡಿದ್ದಾರೆ. ಇದೆಲ್ಲವೂ ಹಣೆಬರಹದಿಂದಲೇ ಆಗಿದೆ ಎಂದು ಅವರೀಗ ನಂಬಿದ್ದಾರೆ.
‘ಗದರ್ 2’ ಸಿನಿಮಾದಲ್ಲಿ ಸನ್ನಿ ಡಿಯೋಲ್‌ಗೆ ಜೋಡಿಯಾಗಿ ಅಮೀಷಾ ನಟಿಸಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರಕ್ಕೆ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಸಕ್ಸಸ್ ಬಳಿಕ ಅಮೀಷಾ ಪಟೇಲ್ ನಟಿಸಲಿರುವ ಮುಂಬರುವ ಸಿನಿಮಾಗಳ ಬಗ್ಗೆ ಕೌತುಕ ಹೆಚ್ಚಾಗಿದೆ.