Naravi: ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು
Naravi: ಕಾರ್ಕಳ- ಧರ್ಮಸ್ಥಳ- ಸುಬ್ರಹ್ಮಣ್ಯ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ಮಿನಿ ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ನಡೆದ ಘಟನೆ ಸೋಮವಾರ (ಸೆ.30) ನಡೆದಿದೆ
ಮೃತರನ್ನು ಸುರೇಶ್ ಆಚಾರ್ಯ (36 ವ), ಮಕ್ಕಳಾದ ಸುಮೀಕ್ಷಾ (7 ವ) ಸುಶ್ಮಿತಾ (5 ವ), ಸುಶಾಂತ್ (2 ವ) ಎಂದು ಗುರುತಿಸಲಾಗಿದೆ. ಸುರೇಶ್ ಆಚಾರ್ಯ ಅವರ ಪತ್ನಿ ಮೀನಾಕ್ಷಿ (32 ವ) ಗಂಭೀರ ಗಾಯಗೊಂಡಿದ್ದು, ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ನಲ್ಲೂರು ಗ್ರಾಮದ ಕೊಡಪಟ್ಯಾ ಮನೆಯವರು. ಇವರು ವೇಣೂರಿನಿಂದ ನಲ್ಲೂರಿಗೆ ಬರುತ್ತಿದ್ದರು. ಈ ವೇಳೆ ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಬಂಟ್ವಾಳ: ಕಾರು ಚರಂಡಿಗೆ,ಮೂವರಿಗೆ ಗಾಯ
ಬಂಟ್ವಾಳ: ಚಾಲಕನ ನಿಯಂತ್ರಣ ಕಳೆದುಕೊಂಡು ಕಾರೊಂದು ಚರಂಡಿಗೆ ಬಿದ್ದು ಚಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ಜಕ್ರಿ ಬೆಟ್ಟು ಮಣ್ಣಾಪು ಎಂಬಲ್ಲಿ ಇಂದು ಸಂಜೆ ನಡೆದಿದೆ.
ಘಟನೆಯಲ್ಲಿ ಕೇರಳ ನಿವಾಸಿಗಳಾದ ಅರುಣ್, ಪ್ರಮೋದ್ ಮತ್ತು ಅರುಣ್ ಎಂಬವರು ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಸಂಜೆ 4:30 ಸುಮಾರಿಗೆ ಅಪಘಾತವಾಗಿದ್ದು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಘಟನೆಯಲ್ಲಿ ಕಾರು ಸಂಪೂರ್ಣ ಜಕ್ಕಮ್ಮಾಗಿದ್ದು ಸ್ಥಳೀಯ ನಿವಾಸಿಯಾದ ಸಂಜೀವ ಮೂಲ್ಯ ಕಾಂಪೌಂಡ್ ಡ್ಯಾಮೇಜ್ ಆಗಿದೆ.
ಚಿಕ್ಕಮಗಳೂರು ಕಡೆಯಿಂದ ಕೇರಳಕ್ಕೆ ಹೋಗುವ ಸಂದರ್ಭದಲ್ಲಿ ಅತೀ ವೇಗವಾಗಿ ಚಾಲನೆಯ ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಜಪೆ: ಈಜಾಡಲು ಹೋಗಿ ನೀರುಪಾಲಾದ ಇಬ್ಬರು ಗೆಳೆಯರು
ಮಳವೂರು ರೈಲ್ವೇ ಸೇತುವೆ ಬಳಿ ಫಲ್ಗುಣಿ ನದಿಯ ನೀರಿನಲ್ಲಿ ನಿನ್ನೆ (ಸೆ.29) ಸಂಜೆ 4 ರ ವೇಳೆ ಈಜಾಡಲು ತೆರಳಿದ್ದ ನಾಲ್ಕು ಮಂದಿಯಲ್ಲಿ ಇಬ್ಬರು ನೀರುಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು ನಗರದ ಕೋಟಿಕಲ್ ಅರುಣ್ (19), ದೀಕ್ಷಿತ್ (20), ಕೊಟ್ಟರ ಚೌಕಿಯ ಸುಮಿತ್ (20) ಹಾಗೂ ಉರ್ವಸ್ಟೋರಿನ ಅನೀಶ್ (19) ಎಂಬುವವರು ಮಳವೂರು ರೈಲ್ವೇ ಸೇತುವೆ ಬಳಿ ಫಲ್ಗುಣಿ ನದಿಯಲ್ಲಿ ಈಜಾಡಲು ಹೋಗಿದ್ದರು. ನಾಲ್ವರ ಪೈಕಿ ಸುಮಿತ್ ಮತ್ತು ಅನೀಶ್ ನೀರಿನ ಸುಳಿಗೆ ಸಿಕ್ಕಿಕೊಂಡು ನೀರುಪಾಲಾಗಿದ್ದಾರೆ.
ತಕ್ಷಣವೇ ಬಜಪೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿದ್ದು, ಹುಡುಕಾಟ ಆರಂಭಿಸಿದ್ದರು. ಅಗ್ನಿಶಾಮಕದ ಬೆಳಕಿನ ವ್ಯವಸ್ಥಯೊಂದಿಗೆ ಶೋಧ ಕಾರ್ಯ ಮುಂದುವರೆದಿತ್ತು. ಬಜಪೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂದೀಪ್ ಜಿ.ಎಸ್ ಮತ್ತು ಸಿಬ್ಬಂದಿಯೊಬ್ಬರು ರಾತ್ರಿ ಫೂರ್ತಿ ಅಲ್ಲಿಯೇ ಇದ್ದರು.
ಮಳವೂರು ಡ್ಯಾಂ ಪರಿಸರದಲ್ಲಿ ರಜಾ ದಿನಗಳಲ್ಲಿ ಮಂಗಳೂರು ಸಹಿತ ವಿವಿಧ ಪ್ರದೇಶದ ಯುವಕರು ಈಜಲು ಬರುತ್ತಾರೆ. ಇತ್ತೀಚಿನ ದಿನ ವಾತಾವರಣದಲ್ಲಿ ಏರುಪೇರುಗಳಿರುವುದರಿಂದ ನೀರಿಗೆ ಇಳಿಯಬಾರದೆಂದು ಸ್ಥಳೀಯರು ಎಚ್ಚರಿಕೆ ನೀಡಿದ್ದರು. ಅದನ್ನು ಕಡೆಗಣಿಸಿ ನೀರಿಗಿಳಿದು ಪ್ರಾಣ ಕಳೆದುಕೊಂಡ ಪ್ರಕರಣ ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕೆರೆಗೆ ಬಿದ್ದು ಮೂರು ವರ್ಷದ ಬಾಲಕ ಮೃತ್ಯು
ಕಾಸರಗೋಡು: ಕೆರೆಗೆ ಬಿದ್ದು ಮೂರು ವರ್ಷದ ಬಾಲಕ ಮೃತಪಟ್ಟ ಘಟನೆ ಬೆದ್ರಡ್ಕ ಕಂಬಾರ್ ನಲ್ಲಿ ಭಾನುವಾರ ಸಂಜೆ ನಡೆದಿದೆ. ಕಂಬಾರಿನ ನೌಶಾದ್ ರವರ ಪುತ್ರ ಮುಹಮ್ಮದ್ ಸೋಹಾನ್ ಹಬೀಬ್ ಮೃತಪಟ್ಟ ಬಾಲಕ.
ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮುಹಮ್ಮದ್ ಸೋಹಾನ್ ಹಬೀಬ್ ದಿಢೀರ್ ನಾಪತ್ತೆಯಾಗಿದ್ದಾನೆ. ಈ ವೇಳೆ ಸಂಬಂಧಿಕರು ಮನೆಯೊಳಗೆ ಹಾಗೂ ಪರಿಸರದ ಮನೆಗಳಲ್ಲಿ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದಾಗ್ಯು ಬಾಲಕ ಪತ್ತೆಯಾಗದ ಹಿನ್ನಲೆಯಲ್ಲಿ ಸಂಬಂಧಿಕರು, ಶೋಧ ನಡೆಸಿದಾಗ ಮನೆ ಸಮೀಪದ 200 ಮೀಟರ್ ದೂರದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಬಾಲಕ ಹಬೀಬ್ ಕೃಷಿಕರಾದ ನೌಶಾದ್ ರವರ ಏಕೈಕ ಪುತ್ರನಾಗಿದ್ದನು. ಕಾಸರಗೋಡು ನಗರ ಠಾಣಾ ಪೊಲೀಸರು ಮಹಜರು ನಡೆಸಿದರು.