ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Naravi: ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು

Twitter
Facebook
LinkedIn
WhatsApp
Naravi: ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು

Naravi: ಕಾರ್ಕಳ- ಧರ್ಮ‌ಸ್ಥಳ- ಸುಬ್ರಹ್ಮಣ್ಯ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ಮಿನಿ ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ ನಡೆದ ಘಟನೆ ಸೋಮವಾರ (ಸೆ.30) ನಡೆದಿದೆ

ಮೃತರನ್ನು ಸುರೇಶ್‌ ಆಚಾರ್ಯ (36 ವ), ಮಕ್ಕಳಾದ ಸುಮೀಕ್ಷಾ (7 ವ) ಸುಶ್ಮಿತಾ (5 ವ), ಸುಶಾಂತ್‌ (2 ವ) ಎಂದು ಗುರುತಿಸಲಾಗಿದೆ. ಸುರೇಶ್‌ ಆಚಾರ್ಯ ಅವರ ಪತ್ನಿ ಮೀನಾಕ್ಷಿ (32 ವ) ಗಂಭೀರ ಗಾಯಗೊಂಡಿದ್ದು, ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ನಲ್ಲೂರು ಗ್ರಾಮದ ಕೊಡಪಟ್ಯಾ ಮನೆಯವರು. ಇವರು ವೇಣೂರಿನಿಂದ ನಲ್ಲೂರಿಗೆ ಬರುತ್ತಿದ್ದರು. ಈ ವೇಳೆ ಓವರ್‌ ಟೇಕ್‌ ಮಾಡುವ ಭರದಲ್ಲಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಬಂಟ್ವಾಳ: ಕಾರು ಚರಂಡಿಗೆ,ಮೂವರಿಗೆ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ಕಳೆದುಕೊಂಡು ಕಾರೊಂದು ಚರಂಡಿಗೆ ಬಿದ್ದು ಚಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ಜಕ್ರಿ ಬೆಟ್ಟು ಮಣ್ಣಾಪು ಎಂಬಲ್ಲಿ ಇಂದು ಸಂಜೆ ನಡೆದಿದೆ.

ಘಟನೆಯಲ್ಲಿ ಕೇರಳ ನಿವಾಸಿಗಳಾದ ಅರುಣ್, ಪ್ರಮೋದ್ ಮತ್ತು ಅರುಣ್ ಎಂಬವರು ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ‌ಹೊರರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಸಂಜೆ 4:30 ಸುಮಾರಿಗೆ ಅಪಘಾತವಾಗಿದ್ದು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಘಟನೆಯಲ್ಲಿ  ಕಾರು ಸಂಪೂರ್ಣ ಜಕ್ಕಮ್ಮಾಗಿದ್ದು ಸ್ಥಳೀಯ ನಿವಾಸಿಯಾದ ಸಂಜೀವ ಮೂಲ್ಯ ಕಾಂಪೌಂಡ್ ಡ್ಯಾಮೇಜ್ ಆಗಿದೆ. 

ಚಿಕ್ಕಮಗಳೂರು ‌ಕಡೆಯಿಂದ ಕೇರಳಕ್ಕೆ ಹೋಗುವ ಸಂದರ್ಭದಲ್ಲಿ ಅತೀ ವೇಗವಾಗಿ ಚಾಲನೆಯ ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಜಪೆ: ಈಜಾಡಲು ಹೋಗಿ ನೀರುಪಾಲಾದ ಇಬ್ಬರು ಗೆಳೆಯರು

ಮಳವೂರು ರೈಲ್ವೇ ಸೇತುವೆ ಬಳಿ ಫಲ್ಗುಣಿ ನದಿಯ ನೀರಿನಲ್ಲಿ ನಿನ್ನೆ (ಸೆ.29) ಸಂಜೆ 4 ರ ವೇಳೆ ಈಜಾಡಲು ತೆರಳಿದ್ದ ನಾಲ್ಕು ಮಂದಿಯಲ್ಲಿ ಇಬ್ಬರು ನೀರುಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು ನಗರದ ಕೋಟಿಕಲ್‌ ಅರುಣ್ (19), ದೀಕ್ಷಿತ್ (20), ಕೊಟ್ಟರ ಚೌಕಿಯ ಸುಮಿತ್ (20) ಹಾಗೂ ಉರ್ವಸ್ಟೋರಿನ ಅನೀಶ್ (19) ಎಂಬುವವರು ಮಳವೂರು ರೈಲ್ವೇ ಸೇತುವೆ ಬಳಿ ಫಲ್ಗುಣಿ ನದಿಯಲ್ಲಿ ಈಜಾಡಲು ಹೋಗಿದ್ದರು. ನಾಲ್ವರ ಪೈಕಿ ಸುಮಿತ್ ಮತ್ತು ಅನೀಶ್ ನೀರಿನ ಸುಳಿಗೆ ಸಿಕ್ಕಿಕೊಂಡು ನೀರುಪಾಲಾಗಿದ್ದಾರೆ.

ತಕ್ಷಣವೇ ಬಜಪೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿದ್ದು, ಹುಡುಕಾಟ ಆರಂಭಿಸಿದ್ದರು. ಅಗ್ನಿಶಾಮಕದ ಬೆಳಕಿನ ವ್ಯವಸ್ಥಯೊಂದಿಗೆ ಶೋಧ ಕಾರ್ಯ ಮುಂದುವರೆದಿತ್ತು. ಬಜಪೆ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್ ಸಂದೀಪ್‌ ಜಿ.ಎಸ್ ಮತ್ತು ಸಿಬ್ಬಂದಿಯೊಬ್ಬರು ರಾತ್ರಿ ಫೂರ್ತಿ ಅಲ್ಲಿಯೇ ಇದ್ದರು.

ಮಳವೂರು ಡ್ಯಾಂ ಪರಿಸರದಲ್ಲಿ ರಜಾ ದಿನಗಳಲ್ಲಿ ಮಂಗಳೂರು ಸಹಿತ ವಿವಿಧ ಪ್ರದೇಶದ ಯುವಕರು ಈಜಲು ಬರುತ್ತಾರೆ. ಇತ್ತೀಚಿನ ದಿನ ವಾತಾವರಣದಲ್ಲಿ ಏರುಪೇರುಗಳಿರುವುದರಿಂದ ನೀರಿಗೆ ಇಳಿಯಬಾರದೆಂದು ಸ್ಥಳೀಯರು ಎಚ್ಚರಿಕೆ ನೀಡಿದ್ದರು. ಅದನ್ನು ಕಡೆಗಣಿಸಿ ನೀರಿಗಿಳಿದು ಪ್ರಾಣ ಕಳೆದುಕೊಂಡ ಪ್ರಕರಣ ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕೆರೆಗೆ ಬಿದ್ದು ಮೂರು ವರ್ಷದ ಬಾಲಕ ಮೃತ್ಯು

ಕಾಸರಗೋಡು: ಕೆರೆಗೆ ಬಿದ್ದು ಮೂರು ವರ್ಷದ ಬಾಲಕ ಮೃತಪಟ್ಟ ಘಟನೆ ಬೆದ್ರಡ್ಕ ಕಂಬಾರ್ ನಲ್ಲಿ ಭಾನುವಾರ ಸಂಜೆ ನಡೆದಿದೆ. ಕಂಬಾರಿನ ನೌಶಾದ್ ರವರ ಪುತ್ರ ಮುಹಮ್ಮದ್ ಸೋಹಾನ್ ಹಬೀಬ್ ಮೃತಪಟ್ಟ ಬಾಲಕ.

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮುಹಮ್ಮದ್ ಸೋಹಾನ್ ಹಬೀಬ್ ದಿಢೀರ್ ನಾಪತ್ತೆಯಾಗಿದ್ದಾನೆ. ಈ ವೇಳೆ ಸಂಬಂಧಿಕರು ಮನೆಯೊಳಗೆ ಹಾಗೂ ಪರಿಸರದ ಮನೆಗಳಲ್ಲಿ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಆದಾಗ್ಯು ಬಾಲಕ ಪತ್ತೆಯಾಗದ ಹಿನ್ನಲೆಯಲ್ಲಿ ಸಂಬಂಧಿಕರು, ಶೋಧ ನಡೆಸಿದಾಗ ಮನೆ ಸಮೀಪದ 200 ಮೀಟರ್ ದೂರದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಬಾಲಕ ಹಬೀಬ್ ಕೃಷಿಕರಾದ ನೌಶಾದ್ ರವರ ಏಕೈಕ ಪುತ್ರನಾಗಿದ್ದನು. ಕಾಸರಗೋಡು ನಗರ ಠಾಣಾ ಪೊಲೀಸರು ಮಹಜರು ನಡೆಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist