ಶುಕ್ರವಾರ, ಏಪ್ರಿಲ್ 19, 2024
ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?-ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?-ನಾಳೆ ಮಂಗಳೂರಿನಲ್ಲಿ ಮೋದಿ ರೋಡ್ ಶೋ ; ವಾಹನ ಸಂಚಾರದಲ್ಲಿ ಬದಲಾವಣೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Mysuru : ಅತಿ ಕಡಿಮೆ ಬೆಲೆಗೆ ಮಾರಾಟವಾದ ತಂಬಾಕು

Twitter
Facebook
LinkedIn
WhatsApp
Mysuru : ಅತಿ ಕಡಿಮೆ ಬೆಲೆಗೆ ಮಾರಾಟವಾದ ತಂಬಾಕು

 ಎಚ್‌.ಡಿ. ಕೋಟೆ(ಡಿ. 09):  ತಾಲೂಕಿನ ಶಾಂತಿಪುರ ಗ್ರಾಮದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕಿಗೆ ಅತಿ ಕಡಿಮೆ ಬೆಲೆಗೆ ಮಾರಾಟವಾದ ಹಿನ್ನೆಲೆ ರೈತರು ತಂಬಾಕು ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹರಾಜು ಪ್ರಕ್ರಿಯೆ ನಿಲ್ಲಿಸಿದ ಘಟನೆ ನಡೆಯಿತು.

ಹರಾಜು ಪ್ರಕ್ರಿಯೆ ಎಂದಿನಂತೆ ಪ್ರಾರಂಭವಾಗಿ ಉತ್ತಮ ದರ್ಜೆಯ ಹೊಗೆ ಸೊಪ್ಪಿಗೆ 270 ರು. ನೀಡುವ ಬದಲು 230 ರು. ಗೆ ಬಿಡ್‌ ಮಾಡಿದ್ದಕ್ಕೆ ಆಕ್ರೋಶಗೊಂಡ ರೈತರು (Farmers) , ತಂಬಾಕು ಮಂಡಳಿ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದು ಕಳೆದ ಒಂದು ವಾರದಿಂದ ದಿನೇ ದಿನೇ ತಂಬಾಕು ಬೆಲೆಯಲ್ಲಿ ಕನಿಷ್ಠ 30 ರು. ನಿಂದ 45 ರು. ಗಳ ಕಡಿಮೆ ಬೆಲೆಗೆ ಕಂಪನಿಯವರು ತಂಬಾಕು ಖರೀದಿಸುತ್ತಿದ್ದು, ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದ್ದರು ಕೂಡ ಅಧಿಕಾರಿಗಳು ಕಣ…ಮುಚ್ಚಿ ಕುಳಿತ್ತಿದ್ದೀರಾ, ನೀವು ರೈತರ ಪರವಾಗಿ ಇಲ್ಲದೆ ತಂಬಾಕು (Tobacco)  ಕಂಪನಿಯವರ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಕೇಂದ್ರ ಸರ್ಕಾರ ಹಾಗೂ ತಂಬಾಕು ಮಂಡಳಿ ಮಧ್ಯ ಪ್ರವೇಶ ಮಾಡಿ ಬಿಡ್‌ದಾರರಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಈ ಹಿಂದಿನ ದಿನಗಳಲ್ಲಿ ಇದ್ದಂತ ಮಾರುಕಟ್ಟೆಧಾರಣೆಯನ್ನು ಕೊಡಿಸಬೇಕು ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಒತ್ತಾಯಿಸಿದರು.

ಮೊದಲೆಲ್ಲ ತಂಬಾಕು ಖರೀದಿ ಮಾಡಲು ಹಲವು ಕಂಪನಿಯವರು ಭಾಗವಹಿಸುತ್ತಿದ್ದರು, ಆದರೆ ಇತೀಚೆಗೆ ಕೇವಲ ನಾಲ್ಕæ ೖದು ಕಂಪನಿಯವರು ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದು, ಕೆಲವು ಕಂಪನಿಯವರು ಒಳ ಒಪ್ಪಂದ ಮಾಡಿಕೊಂಡು ರೈತರಿಗೆ ಉತ್ತಮ ಬೆಲೆ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಹಾಗಾಗಿ ಈ ಬಿಡ್‌ದಾರರನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಕಂಪಾಲಪುರ ಮಾರುಕಟ್ಟೆಸೇರಿದಂತೆ ಇನ್ನಿತರೆ ಕಡೆ ಬುಧವಾರ ನಡೆದ ಹರಾಜಿನಲ್ಲಿ ಪ್ರತಿ ಕೆ.ಜಿ ಹೊಗೆಸೊಪ್ಪಿಗೆ 280 ರು. ಗೆ ತಂಬಾಕು ಮಾರಾಟ ಆಗಿದೆ, ಆದರೆ, ಎಚ್‌.ಡಿ. ಕೋಟೆ ಮಾರುಕಟ್ಟೆಯಲ್ಲಿ ಮಾತ್ರ ಕಡಿಮೆ ದರಕ್ಕೆ ಬಿಡ್‌ ಮಾಡಲಾಗಿದೆ ಎಂದು ದೂರಿದರು.

ರೈತ ಪೃಥ್ವಿ ಮಾತನಾಡಿ, ಐಟಿಸಿ ಕಂಪನಿಯವರು ಗ್ರಾಮಗಳಿಗೆ ತೆರಳಿ ರೈತರ ಬಳಿ ಹೊಗೆಸೊಪ್ಪು ಇರುವುದನ್ನು ಖಾತರಿ ಮಾಡಿಕೊಂಡು ಉತ್ತಮ ಬೆಲೆ ನೀಡುವುದಾಗಿ ಭರವಸೆ ನೀಡಿ, ನಂತರ ಮಾರುಕಟ್ಟೆಗೆ ಬಂದಾಗ ಅಡ್ಡಾದಿಡ್ಡಿಯಾಗಿ ಬೆಲೆ ನಿಗದಿ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ದೂರಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ