ಶನಿವಾರ, ಜುಲೈ 13, 2024
13 ರಲ್ಲಿ 10 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ INDIA ಮೈತ್ರಿಕೂಟ; ಬಿಜೆಪಿಗೆ 2 ಸ್ಥಾನ-ಪಿಚ್‌ನ ಮಣ್ಣು ತಿಂದ ರಹಸ್ಯ; ರೋಹಿತ್ ಶರ್ಮ ಹೇಳಿದ್ದೇನು?-ವಾಲ್ಮೀಕಿ ನಿಗಮ, ಮುಡಾ ಹಗರಣ ನ್ಯಾಯಯುತ ತನಿಖೆಗಾಗಿ ಸಿಬಿಐಗೆ ವಹಿಸಬೇಕು: ಸಂಸದ ಯದುವೀರ್ ಒಡೆಯರ್-ಡಿಸಿಸಿ ಬ್ಯಾಂಕ್‌ಗೆ ನೂತನ ಅಧ್ಯಕ್ಷರಾಗಿ ಮಂಜುನಾಥ ಗೌಡ; ಉಪಾಧ್ಯಕ್ಷರಾಗಿ ಮರಿಯಪ್ಪ ಅವಿರೋಧ ಆಯ್ಕೆ!-ಪಿಸ್ತೂಲ್ ಹಿಡಿದು ರೈತರನ್ನು ಬೆದರಿಸುವ ವಿಡಿಯೋ ವೈರಲ್; ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾಯಿ ಮನೋರಮಾ ವಿರುದ್ಧ ಎಫ್ಐಆರ್!-WCL 2024: ಇರ್ಫಾನ್ - ಯೂಸುಫ್ ಪಠಾಣ್ ಸಿಡಿಲಬ್ಬರದ ಬ್ಯಾಟಿಂಗ್, ಭಾರತ - ಪಾಕಿಸ್ತಾನ ಫೈನಲ್​ಗೆ ಲಗ್ಗೆ!-ಬಿಜೆಪಿ ಮೈತ್ರಿಕೂಟಕ್ಕೆ ಪರಿಷತ್ತಿನ ಚುನಾವಣೆಯಲ್ಲಿ 11ರ ಪೈಕಿ 9 ಸ್ಥಾನಗಳಲ್ಲಿ ಜಯ!-Aparna: ಕನ್ನಡ ನಾಡು ಕಂಡ ಅಪರೂಪದ ನಿರೂಪಕಿ, ನಟಿ ಅಪರ್ಣಾ ಇನ್ನಿಲ್ಲ-ಮಂಗಳೂರಿನಲ್ಲಿ ದರೋಡೆ ಮಾಡಿ ಭಯ ಹುಟ್ಟಿಸಿದ ಚಡ್ಡಿ ಗ್ಯಾಂಗ್ ಅರೆಸ್ಟ್..!-ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್​ ಗಂಭೀರ್ ನೇಮಕ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನನ್ನ ಮಗನ ಹೆಸರಿಗೂ, ಸಚಿನ್ - ದ್ರಾವಿಡ್ ಗೂ ಯಾವುದೇ ಸಂಬಂಧ ಇಲ್ಲ ; ರಚಿನ್ ರವೀಂದ್ರ ತಂದೆ!

Twitter
Facebook
LinkedIn
WhatsApp
ನನ್ನ ಮಗನ ಹೆಸರಿಗೂ, ಸಚಿನ್ - ದ್ರಾವಿಡ್ ಗೂ ಯಾವುದೇ ಸಂಬಂಧ ಇಲ್ಲ ; ರಚಿನ್ ರವೀಂದ್ರ ತಂದೆ!

ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಬೆಂಗಳೂರು ಮೂಲದ ನ್ಯೂಜಿಲೆಂಡಿನ (New Zealand) ಆಟಗಾರ ರಚಿನ್‌ ರವೀಂದ್ರ (Rachin Ravindra) ಉತ್ತಮ ಲಯದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಮೂರು ಶತಕ ಸಿಡಿಸಿರುವ ಅವರು ತಮ್ಮ ಹೆಸರಿನ ಮೂಲಕ ಚರ್ಚೆಯಲ್ಲಿದ್ದರು. ಆದರೆ ಈಗ ಈ ಹೆಸರು ಇಟ್ಟಿದ್ದು ಹೇಗೆ ಎಂಬುದರ ಬಗ್ಗೆ ತಂದೆ ಪ್ರತಿಕ್ರಿಯಿಸಿದ್ದಾರೆ.

ಭಾರದ ಬ್ಯಾಟಿಂಗ್ ದಿಗ್ಗಜರಾದ ರಾಹುಲ್ ದ್ರಾವಿಡ್ (Rahul Dravid) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹೆಸರಿನ ಮೊದಲ ಅಕ್ಷರಗಳಿಂದ ಸಂಯೋಜನೆಗೊಂಡು ʼರಚಿನ್‌ʼ ಎಂದು ನಾಮಕರಣ ಮಾಡಲಾಗಿದೆ ಎಂಬ ಹೆಸರು ಹಿಂದೆ ವರದಿಯಾಗಿತ್ತು.

ಈ ಬಗ್ಗೆ ತಂದೆ ರವಿ ಕೃಷ್ಣಮೂರ್ತಿ (Ravi Krishnamurthy) ಈಗ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಮಗನ ಹೆಸರಿಗೂ ಸಚಿನ್​-ದ್ರಾವಿಡ್​ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳುವ ಮೂಲಕ ಯೂಟರ್ನ್‌ ಹೊಡೆದಿದ್ದಾರೆ.

ನನ್ನ ಪತ್ನಿ ರಚಿನ್ ಹೆಸರನ್ನು ಸೂಚಿಸಿದ್ದಳು. ನಾವು ಆ ಹೆಸರಿನ ಬಗ್ಗೆ ಹೆಚ್ಚು ಚರ್ಚೆ ಮಾಡಲಿಲ್ಲ.ಯಾಕೆಂದರೆ ಆ ಹೆಸರು ಚೆನ್ನಾಗಿತ್ತು. ಉಚ್ಚರಿಸಲು ಸುಲಭವಾಗಿತ್ತು ಮತ್ತು ಚಿಕ್ಕದಾಗಿತ್ತು. ಈ ಕಾರಣದಿಂದ ಮಗನಿಗೆ ಆ ಹೆಸರನ್ನೇ ನಾಮಕರಣ ಮಾಡಿದ್ದೆವು ಎಂದು ವಿವರಿಸಿದರು.

ಕೆಲವು ವರ್ಷಗಳ ನಂತರ ಈ ಹೆಸರು ರಾಹುಲ್ ಮತ್ತು ಸಚಿನ್ ಅವರ ಹೆಸರುಗಳ ಮಿಶ್ರಣವಾಗಿದೆ ಎಂಬುದು ಗೊತ್ತಾಯಿತು. ನಮ್ಮ ಮಗನನ್ನು ಕ್ರಿಕೆಟಿಗನನ್ನಾಗಿ ಮಾಡುವ ಉದ್ದೇಶದಿಂದ ಇಬ್ಬರ ಹೆಸರನ್ನು ಸಂಯೋಜಿಸಿ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ರಚಿನ್‌ ರವೀಂದ್ರ 9 ವಿಕೆಟ್‌ಗಳಿಂದ 565 ರನ್‌ ಹೊಡೆಯುವ ಮೂಲಕ ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪೈಕಿ ಮೂರನೇ ಸ್ಥಾನ ಪಡೆದಿದ್ದಾರೆ. ಟೂರ್ನಿಯಲ್ಲಿ ಒಟ್ಟು 52 ಬೌಂಡರಿ ಸಿಡಿಸಿದ ರಚಿನ್‌ 17 ಸಿಕ್ಸ್‌ ಹೊಡೆದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ