- ರಾಜ್ಯ
- 11:27 ಫೂರ್ವಾಹ್ನ
- ಅಕ್ಟೋಬರ್ 15, 2023
ಮೈಸೂರು ದಸರಾಗೆ ಚಾಲನೆ ನೀಡಿದ ಸಂಗೀತ ನಿರ್ದೇಶಕ ಹಂಸಲೇಖ

ಮೈಸೂರು ಅ.15: ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾಗೆ (Mysore Dasara) ಸಂಗೀತ ನಿರ್ದೇಶಕ ಹಂಸಲೇಖ (Hamsaleka) ಅವರು ಚಾಲನೆ ನೀಡಿದ್ದಾರೆ. ಚಾಮುಂಡಿಬೆಟ್ಟದಲ್ಲಿ, ಚಾಮುಂಡೇಶ್ವರಿ (Chamundeshwari) ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಹೆ.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ವೆಂಕಟೇಶ್, ಮುನಿಯಪ್ಪ ಶಿವರಾಜ್ ತಂಗಡಗಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿಟಿ ದೇವೇಗೌಡ, ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ಶ್ರೀವತ್ಸ, ಹರೀಶ್ ಗೌಡ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಮೇಯರ್ ಶಿವಕುಮಾರ್ ಉಪಸ್ಥಿತರಿದ್ದರು.
ಯಾರು ಯಾರನ್ನು ನೆನೆಯಲಿನಾ ? ಯಾರು ಯಾರನ್ನು ನೆನೆಯಲಿ? ಕನ್ನಡ ದೀಪ, ಸಮೃದ್ದಿ ಅಭಿವೃದ್ಧಿ ಶಾಂತಿ ಸಮೃದ್ದಿಯ ನನ್ನ ಮಾತಿನ ಪರಿವಿಡಿ. ಪೂಜ್ಯ ಕನ್ನಡಿಗರಿಗೆ ಪೂಜ್ಯ ಕನ್ನಡಕ್ಕೆ ಈ ದೇವಾಲಯ ಪ್ರೇಮಾಲಯಕ್ಕೆ ಸಾವಿರದ ಶರಣುಗಳು. ಕರ್ನಾಟಕ ಏಕೀಕರಣವಾಗಿ ಐವತ್ತುವರ್ಷ ವಾಯಿತು. ಹೀಗಾಗಿ ಕರ್ನಾಟಕ ಐದಶ ಅಂತಾ ಕರೆಯೋಣ. ಕರ್ನಾಟಕದ ಐದಶದ ಜೊತೆಗೆ ನನ್ನ ಕಲಾ ಕಾಯಕಲ್ಪಕ್ಕೂ 50 ವರ್ಷವಾಗಿದೆ. ಈ ನನ್ನ ಐದಶದಲ್ಲಿ ಸಿಕ್ಕಿದ ಈ ಅವಕಾಶ ಬಹಳ ಬೆಲೆ ಬಾಳುವಂತಹದ್ದು. ಈ ಅವಕಾಶಕ್ಕಾಗಿ ನಿರಾಯಾಸವಾಗಿ ಬಂದಿಲ್ಲ. ಇದಕ್ಕಾಗಿ ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ ಎಂದು ನಾದಬ್ರಹ್ಮ ಹಂಸಲೇಖ ಹೇಳಿದರು.
ಮೈಸೂರು ದಸರಾ ಚಾಲನೆಗೆ ಯಾರು ಕಾರಣ ಯಾರನ್ನು ಮೊದಲು ನೆನೆಯಲಿ? ಅಪ್ಪ ಗೋವಿಂದರಾಜ ಮಾನೆ. ಅಮ್ಮ ರಾಜಮ್ಮ ಗುರು ನೀಲಕಂಠ ಅಥವಾ ನಾದ ನಾಟಕರಂಗ ಸರ್ಕಾರ ಅಥವಾ ಸಂವಿಧಾನವನ್ನೇ? ಸಂವಿಧಾನದ ಧ್ವನಿ ಸಿದ್ದರಾಮಯ್ಯ ಅವರನ್ನೇ ? ಪ್ರಬಲ ಶಕ್ತಿ ಸಂಘಟಕ ಡಿಸಿಎಂ ಕ ಡಿ ಕೆ ಶಿವಕುಮಾರ್, ನನ್ನ ಹೆಸರು ಸೂಚಿಸಿದ ಡಾ ಎಚ್ ಸಿ ಮಹದೇವಪ್ಪ ಅವರನ್ನೇ ? ನನ್ನ ಹೆಂಡತಿ ಮಕ್ಕಳು ಅಭಿಮಾನಿಗಳನ್ನೇ ? ಅಥವಾ ಭೂಮಿ ತಾಯಿಯನ್ನೇ ಯಾರು ಯಾರು ಅಂತ ನೆನೆಯಲ್ಲಿ ಎಂದು ಹೇಳುವ ಮೂಲಕ ಧನ್ಯವಾದ ಹೇಳಿದರು.