ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಚಾಕುವಿನಿಂದ ಇರಿದು ಸಹೋದರನ ಹತ್ಯೆ

Twitter
Facebook
LinkedIn
WhatsApp
kalaburagi brother murder

ಕಲಬುರಗಿ: ಚಾಕುವಿನಿಂದ ಇರಿದು ಯುವಕನೋರ್ವನ ಬರ್ಬರ ಕೊಲೆ ಮಾಡಲಾಗಿತ್ತು. ಕೊಲೆಯ ಸುದ್ದಿ ಕೇಳಿ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಬೇಕಿತ್ತು. ಆದ್ರೆ, ಅಲ್ಲಿ ಸಾವಿನ ನೋವು ಇದ್ದರು ಕೂಡ ಯಾರು ತಮ್ಮ ನೋವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಸಿದ್ದರಿರಲಿಲ್ಲ. ಕೊಲೆಯಾಗಿದೆ ಅನ್ನೋದನ್ನು ಕೂಡ ಯಾರು ಹೇಳಲು ಒಪ್ಪಲಿಲ್ಲ. ಬದಲಾಗಿ ಅಪಘಾತವಾಗಿದೆ ಎಂದು ಹೇಳುತ್ತಿದ್ದರು. ಇತ್ತ ತಂದೆ ತನಗೆ ಮಗನ ಸಾವು ಹೇಗೆ ಅಂತ ಗೊತ್ತಿಲ್ಲ ಅಂತ ಹೇಳಿದ್ರೆ, ಅನೇಕರು ಕೊಲೆಯಲ್ಲ, ಅಪಘಾತ ಅಂತಲೇ ಹೇಳುತ್ತಿದ್ದರು. ಆ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ಕೊಡಲು ಎಲ್ಲರು ಯತ್ನಿಸುತ್ತಿದ್ದರು.

ಸ್ವತ ಪೊಲೀಸರಿಗೆ ಇದು ಶಾಕ್ ಉಂಟು ಮಾಡಿತ್ತು. ಯಾಕಂದ್ರೆ, ಕೊಲೆಯಾದ ವ್ಯಕ್ತಿಯ ಬೆನ್ನಿಗೆ ಚಾಕುವಿನಿಂದ ಇರಿದಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದರೂ ಕುಟುಂಬದವರು ಕೊಲೆಯಲ್ಲ, ಬದಲಾಗಿ ಬೈಕ್ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಹೇಳುತ್ತಿರುವುದು ಹತ್ತಾರು ಅನುಮಾನ ಉಂಟು ಮಾಡಿತ್ತು. ಬಳಿಕ ಈ ಕುರಿತು ತನಿಖೆ ನಡೆಸಿದಾಗ ಸತ್ಯ ಬಟಾಬಯಲಾಗಿದೆ.

ಕಲಬುರಗಿ ತಾಲೂಕಿನ ಪಾಳಾ ಗ್ರಾಮದ 26 ವರ್ಷದ ಕಲ್ಲಪ್ಪ ಅನ್ನೋ ವ್ಯಕ್ತಿ ಜೂ.2ರ ರಾತ್ರಿ ಕೊಲೆಯಾಗಿದ್ದಾನೆ. ಗ್ರಾಮದಲ್ಲಿಯೇ ಪಶುಸಂಗೋಪನಾ ಇಲಾಖೆಯಲ್ಲಿ ಕಂಪೌಡರ್ ಆಗಿದ್ದ ಕಲ್ಪಪ್ಪನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಕೊಲೆ ಮಾಡಿದ್ದು ಬೇರಾರು ಅಲ್ಲ, ಒಡಹುಟ್ಟಿದ ಸಹೋದರನೇ ಕಲ್ಲಪ್ಪನನ್ನು ಕೊಲೆ ಮಾಡಿದ್ದ. 

ಮೇ.2 ರಾತ್ರಿ 8 ಗಂಟೆ ಸಮಯದಲ್ಲಿ ಕಲ್ಲಪ್ಪನನ್ನು ಹಿರಿಯ ಸಹೋದರ ಭೀಮು ಅನ್ನೋನು ಕೊಲೆ ಮಾಡಿದ್ದಾನೆ. ಭೀಮುಗೆ ಯಾವುದೋ ಕೆಲಸಕ್ಕೆ ಹಣ ಬೇಕಾಗಿತ್ತಂತೆ. ಹೀಗಾಗಿ ಸಹೋದರನಿಗೆ ಹಣ ಕೊಡುವಂತೆ ಕೇಳಿದ್ದಾನೆ. ಹೆತ್ತವರ ಜೊತೆ ಕೂಡ ಕಿರಿಕಿರಿ ಮಾಡಿಕೊಂಡಿದ್ದಾನೆ. ಆದ್ರೆ, ಸಹೋದರ ಕಲ್ಲಪ್ಪ ಹಣ ಕೊಡದೇ ಇದ್ದಾಗ, ಚಾಕುವಿನಿಂದ ಬೆನ್ನಿಗೆ ಇರಿದು ಪರಾರಿಯಾಗಿದ್ದಾನೆ. 

ಕಲ್ಲಪ್ಪ ತಾನೇ ಬೈಕ್ ಹತ್ತಿಕೊಂಡು ಆಸ್ಪತ್ರೆಗೆ ಹೋಗಲು ಮುಂದಾಗಿದ್ದಾನೆ. ಆದ್ರೆ, ಅದು ಸಾಧ್ಯವಾಗದೇ ಇದ್ದಾಗ ಬೈಕ್ ಮೇಲಿಂದ ಬಿದ್ದಿದ್ದಾನೆ. ನಂತರ ಕುಟುಂಬದವರು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಕಲ್ಲಪ್ಪ ಮೃತಪಟ್ಟಿದ್ದಾನೆ. ಕೊಲೆ ಮಾಡಿದ್ದು ಸಹೋದರನೆ ಆಗಿದ್ದರಿಂದ, ಒಬ್ಬ ಮಗ ಬಾರದ ಲೋಕಕ್ಕೆ ಹೋದ್ರೆ, ಇನ್ನೊಬ್ಬ ಮಗ ಜೈಲು ಪಾಲಾಗಬೇಕಾಗುತ್ತೆ ಅಂತ ತಿಳಿದ ಹೆತ್ತವರು ಮತ್ತು ಕುಟುಂಬದವರು, ಕೊಲೆ ಆಗಿಲ್ಲವೆಂದು ಹೇಳಲು ಆರಂಭಿಸಿದ್ದರು. ಆಸ್ಪತ್ರೆಯಲ್ಲಿ ಕೂಡ ಬೈಕ್ ಮೇಲಿಂದ ಬಿದ್ದು ಗಾಯಗೊಂಡಿದ್ದಾನೆ ಅಂತ ಹೇಳಿದ್ದರು

ಪೊಲೀಸರಿಗೆ ಕೂಡಾ ಇದೇ ಕಥೆ ಹೇಳಿದ್ದರು. ಆದ್ರೆ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಅನುಮಾನಗೊಂಡು ವಿಚಾರಣೆ ನಡೆಸಿದಾಗ, ಕೊಲೆ ರಹಸ್ಯ ಬಯಲಾಗಿದೆ.

ಸದ್ಯ ತಮ್ಮನನ್ನು ಕೊಲೆ ಮಾಡಿದ್ದ ಸಹೋದರ ಭೀಮುನನ್ನು ಬಂಧಿಸಿರೋ ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಸಹೋದರನ ಕೊಲೆ ಮಾಡಿದ್ದ ಪಾಪಿ, ನಂತರ ಕೊಲೆಯೇ ಆಗಿಲ್ಲ ಅಂತ ಸೀನ್ ಕ್ರಿಯೇಟ್ ಮಾಡಿ ಪ್ರಕರಣ ಮುಚ್ಚಿಹಾಕಲು ಮುಂದಾಗಿದ್ದ. ತಪ್ಪಿಗೆ ಪ್ರಾಯಶ್ಚಿತ ಪಡೋದು ಬಿಟ್ಟು, ತಪ್ಪೇ ಮಾಡಿಲ್ಲವೆಂದು ಹೇಳಿ, ಇದೀಗ ಕಂಬಿ ಹಿಂದೆ ಹೋಗಿದ್ದಾನೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ