ಯುವತಿಯೊಂದಿಗೆ ಮುಂಬೈ ಪೊಲೀಸ್ ಡ್ಯಾನ್ಸ್, ವಿಡಿಯೋ ಸಖತ್ ವೈರಲ್!!
ನವದೆಹಲಿ: ಲೋಕಲ್ ರೈಲಿನಲ್ಲಿ ಮಹಿಳೆಯೊಂದಿಗೆ ಮುಂಬೈನ ಪೊಲೀಸ್ ಅಧಿಕಾರಿಯೊಬ್ಬರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಡಿಸೆಂಬರ್ 6ರಂದು ಈ ಘಟನೆ ನಡೆದಿದೆ. ಸ್ಥಳೀಯ ಕೇಂದ್ರ ರೈಲ್ವೆ(Central Railway)ಯ ಮಹಿಳೆಯರ 2nd-class ಕೋಚ್‍ನಲ್ಲಿ ಈ ಘಟನೆ ನಡೆದಿದೆ. ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಗಳು ಈ ಘಟನೆಯನ್ನು ಗಮನಿಸಿದ್ದು, ಹೋಮ್ ಗಾರ್ಡ್ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಸೈಬಾ ಎಂಬ ಸಾಮಾಜಿಕ ಮಾಧ್ಯಮದ ಪ್ರಭಾವಿ(Social Media Influencer)ಯು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಮವಸ್ತ್ರ ಧರಿಸಿದ ಹೋಮ್ ಗಾರ್ಡ್‌ನೊಂದಿಗೆ ಡಾನ್ಸ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಳಿಕ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಯುವತಿಯೊಂದಿಗೆ ಡ್ಯಾನ್ಸ್ ಮಾಡಿದ ಹೋಮ್‍ಗಾರ್ಡ್‍ಅನ್ನು ಎಸ್.ಎಫ್.ಗುಪ್ತಾ ಎಂದು ಗುರುತಿಸಲಾಗಿದೆ. ಆರಂಭದಲ್ಲಿ ರೈಲಿನ ಬಾಗಿಲಿನಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಪ್ರಯಾಣಿಕರಿಗೆ ಸಲಹೆ ನೀಡಿದ ಗುಪ್ತಾ, ಬಳಿಕ ಲೋಕಲ್ ಟ್ರೈನ್‍ನಲ್ಲಿಯೇ ನೃತ್ಯ ಮಾಡುತ್ತಿದ್ದ ಯುವತಿಯೊಂದಿಗೆ ಸೇರಿಕೊಂಡು ತಾನೂ ಡ್ಯಾನ್ಸ್ ಮಾಡಿದ್ದಾರೆ. ಕೋಚ್‍ನಲ್ಲಿದ್ದ ಇತರ ಪ್ರಯಾಣಿಕರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Mumbai locals==free dance show😂
— Megavannan (@brindhavanexp) December 8, 2023
While Mumbai police joins with troublemaker gangs.#Mumbai #mumbaisuburban @drmmumbaicr @MumbaiPolice @RailMinIndia @Central_Railway @drmbct pic.twitter.com/1lOzHIMZ3Z
ಸಂಗೀತದ ಲಯಕ್ಕೆ ತಕ್ಕಂತೆ ಯುವತಿಯೊಂದಿಗೆ ನೃತ್ಯ ಮಾಡಿರುವ ಹೋಮ್‍ಗಾರ್ಡ್‍ಗೆ ಇದೀಗ ಬಹುದೊಡ್ಡ ಸಂಕಷ್ಟ ಎದುರಾಗಿದೆ. ಪೊಲೀಸ್ ಸಮವಸ್ತ್ರದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಅದೂ ಲೋಕಲ್ ಟ್ರೈನ್‍ನಲ್ಲಿ ಯುವತಿ ಜೊತೆ ಡ್ಯಾನ್ಸ್ ಮಾಡಿದೆ ಗುಪ್ತಾ ಕೆಲಸಕ್ಕೆ ಇದೀಗ ಕುತ್ತುಬಂದಿದೆ. ಹೋಮ್ ಗಾರ್ಡ್ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆರ್‌ಪಿಎಫ್‌ಗೆ ಟ್ಯಾಗ್ ಮಾಡಿ ಡಿವಿಜನಲ್ ರೈಲ್ವೇ ಮ್ಯಾನೇಜರ್ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆದ ನಂತರ ಸರ್ಕಾರಿ ರೈಲ್ವೆ ಪೊಲೀಸ್ (GRP) ಕೂಡ ಟ್ವೀಟ್ ಮಾಡಿದ್ದು, ಸಮವಸ್ತ್ರ ಹಾಕಿಕೊಂಡು ಕರ್ತವ್ಯದಲ್ಲಿರುವಾಗ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ವೃತ್ತಿಗೆ ಗೌರವವಿಲ್ಲದೆ ಈ ರೀತಿ ನಡೆದುಕೊಂಡಿರುವ ಹೋಮ್‍ಗಾರ್ಡ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಅನೇಕರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.