ಶನಿವಾರ, ಸೆಪ್ಟೆಂಬರ್ 7, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ..!

Twitter
Facebook
LinkedIn
WhatsApp
ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ..!

ಇಸ್ಲಾಮಾಬಾದ್‌: ಮುಂಬೈ ದಾಳಿಯ (Mumbai 26/11 Attacks) ಪ್ರಮುಖ ಸಂಚುಕೋರ, ಲಷ್ಕರ್‌ ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಸದಸ್ಯ ಸಾಜಿದ್ ಮಿರ್ (Sajid Mir) ವಿಷ ಆಹಾರ ಸೇವಿಸಿದ್ದು ಸದ್ಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.

ಹಲವು ಉಗ್ರ ಕೃತ್ಯಗಳನ್ನು ಮಾಡಿ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಉಗ್ರರ ಸುಮಾರು ಒಂದು ತಿಂಗಳಿನಿಂದ ಪಾಕಿಸ್ತಾನದಲ್ಲಿ (Pakistan) ಅನಾಮಿಕ ವ್ಯಕ್ತಿಗಳ ಗುಂಡೇಟಿಗೆ ಬಲಿಯಾಗುತ್ತಿದ್ದಾರೆ. ಇದೀಗ ಮುಂಬೈ ದಾಳಿಯ ಉಗ್ರ ಸಾಜಿದ್ ಮಿರ್ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನಕ್ಕೆ ತುತ್ತಾಗಿರುವುದು ವರದಿಯಾಗಿದೆ. ಸದ್ಯ ಆತ ತುರ್ತು ಮತ್ತು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.

ಜೈಲಿನಿಂದ ಸ್ಥಳಾಂತರ

ಕೆಲವು ತಿಂಗಳ ಹಿಂದಷ್ಟೇ ಸಾಜಿದ್​ನನ್ನು ಲಾಹೋರ್ ಜೈಲಿನಿಂದ ಡೇರಾ ಘಾಜಿ ಖಾನ್‌ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಇದಾಗ ಕೆಲವೇ ದಿನಗಳಲ್ಲಿ ಆತ ವಿಷ ಆಹಾರ ಸೇವಿಸಿದ್ದಾನೆ. ಸ್ವತಃ ಆತನೇ ಈ ವಿಷ ಸೇವಿಸಿದ್ದಾನೋ ಅಥವಾ ಜೈಲಿನ ಸಿಬ್ಬಂದಿ ಆಹಾರದಲ್ಲಿ ವಿಷ ಬೆರೆಸಿದ್ದರೋ ಎನ್ನುವ ಸ್ಪಷ್ಟ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ. ಆದರೆ ಜೈಲಿನಲ್ಲಿ ಅಡುಗೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾನೆ. ಗಂಭೀರವಾಗಿ ಅಸ್ವಸ್ಥಗೊಂಡಿರುವ ಸಾಜಿದ್​ನನ್ನು ಪಾಕಿಸ್ತಾನ ಸೇನೆ ಏರ್‌ಲಿಫ್ಟ್‌ ಮಾಡಿ ಬಹವಾಲ್‌ಪುರದ ಸಿಎಂಎಚ್‌ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ ಕಾಲೇಜಿಗೆ ದಾಖಲಿಸಲಾಗಿದೆ.

ವಿರೋಧ ವ್ಯಕ್ತಪಡಿಸಿದ್ದ ಚೀನಾ

2022ರ ಜೂನ್‌ನಲ್ಲಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಭಯೋತ್ಪಾದನೆ-ಹಣಕಾಸಿನ ಪ್ರಕರಣದಲ್ಲಿ ಮೀರ್‌ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಪಾಕಿಸ್ತಾನದ ಅಧಿಕಾರಿಗಳು ಈ ಹಿಂದೆ ಮಿರ್ ಸತ್ತಿದ್ದಾನೆ ಎಂದು ಹೇಳಿದ್ದರು. ಆದರೆ ಈತನ ಸಾವಿಗೆ ಪುರಾವೆ ನೀಡುವಂತೆ ಭಾರತ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಒತ್ತಾಯಿಸಿದ್ದವು. ಈ ವರ್ಷದ ಜೂನ್‌ನಲ್ಲಿ ಈತನನ್ನು ಜಾಗತಿಕ ಭಯೋತ್ಪಾದಕ ಪಟ್ಟಿ ಸೇರಿಸಲು ವಿಶ್ವಸಂಸ್ಥೆಯಲ್ಲಿ ಮಂಡಿಸಿದ್ದ ನಿರ್ಣಯವನ್ನು ಚೀನಾ ವಿರೋಧಿಸಿತ್ತು.

ಯಾರು ಈ ಸಾಜಿದ್ ಮಿರ್?
ಸಾಜಿದ್ ಮಿರ್ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ಹಿರಿಯ ಸದಸ್ಯನಾಗಿದ್ದು 2008ರ ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಭಾರತಕ್ಕೆ ಬೇಕಾಗಿದ್ದ. ಆದರೆ ಪಾಕಿಸ್ತಾನ ಆತನನ್ನು ಬಂಧಿಸಿ ಆತನಿಗೆ ರಕ್ಷಣೆ ನೀಡುತ್ತಿತ್ತು. ಇದೀಗ ವಿಷ ಆಹಾರ ಸೇವಿಸಿ ಆಸ್ಪತ್ರೆ ಸೇರಿದ್ದಾನೆ.
12 ಸ್ಥಳಗಳ ಮೇಲೆ ಭಯೋತ್ಪಾದಕ ದಾಳಿ

ನವೆಂಬರ್ 26, 2008 ರಂದು, 10 ಪಾಕಿಸ್ತಾನಿ ಭಯೋತ್ಪಾದಕರು ಸಮುದ್ರ ಮಾರ್ಗವಾಗಿ ಮುಂಬೈಗೆ ಆಗಮಿಸಿ ಮನಬಂದಂತೆ ಗುಂಡಿನ ದಾಳಿ ನಡೆಸಿದರು ಈ ವೇಳೆ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಜೀವ ಕಳೆದುಕೊಂಡರು ಮತ್ತು ಅನೇಕ ಮಂದಿ ಭಯೋತ್ಪಾದಕ ದಾಳಿಯಿಂದ ಗಾಯಗೊಂಡರು. ಭಯೋತ್ಪಾದಕರ ದಾಳಿಯಲ್ಲಿ ಅಂದಿನ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮುಖ್ಯಸ್ಥ ಹೇಮಂತ್ ಕರ್ಕರೆ, ಸೇನಾ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಂಬೈನ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ ಮತ್ತು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಸಲಸ್ಕರ್ ದಾಳಿಯಲ್ಲಿ ಹುತಾತ್ಮರಾದರು. ಮುಂಬೈನ ತಾಜ್ ಹೋಟೆಲ್, ಶಿವಾಜಿ ಟರ್ಮಿನಲ್ ಸೇರಿದಂತೆ 12 ಸ್ಥಳಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ