ಮುಲ್ಕಿ : ಹೆದ್ದಾರಿ ಬಿಟ್ಟು ಸರ್ವೀಸ್ ರಸ್ತೆಗೆ ನುಗ್ಗಿದ ಲಾರಿ ;ಭೀಕರ ಅಪಘಾತದಲ್ಲಿ ಹಲವರಿಗೆ ಗಾಯ - ಚಾಲಕ ಬಂಧನ!
ಮುಲ್ಕಿ ಡಿಸೆಂಬರ್ 7: ಚಾಲಕನ ನಿರ್ಲಕ್ಷತನಕ್ಕೆ ಲಾರಿಯೊಂದು ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಗೆ ನುಗ್ಗಿದ ಘಟನೆ ಮುಲ್ಕಿಯಲ್ಲಿ ನಡೆದಿದ್ದು, ಘಟನೆಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ರಿಕ್ಷಾ ಒಂದಕ್ಕೆ ಹಾನಿಯಾಗಿದೆ.
ಮೈನ್ಸ್ ಲಾರಿ ಹೆದ್ದಾರಿ ಬಿಟ್ಟು ಸೀದಾ ಸರ್ವಿಸ್ ರಸ್ತೆಗೆ ನುಗ್ಗಿದೆ ಈ ವೇಳೆ ಬೈಕ್ ಹಾಗೂ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಲಾಡ್ಜ್ ಒಂದರಲ್ಲಿ ವಾಚ್ಮನ್ ಆಗಿರುವ ಸಂಗಪ್ಪ ಮಗಳನ್ನು ಬಸ್ ಸ್ಟೆಂಡ್ ಗೆ ಬಿಡಲು ಬಂದಿದ್ದು ಲಾರಿ ಗುದ್ದಿದ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿದ್ದು. ಮಗಳು ಸವಿತಾ ಗೆ ಸಣ್ಣ ಪುಟ್ಟ ಗಾಯ ಅಪಾಯದಿಂದ ಪಾರಾಗಿದ್ದಾರೆ.
ಅಲ್ಲದೆ ರಸ್ತೆ ಬದಿಯಲ್ಲಿ ಕುಳಿತಿದ್ದ ಕೂಲಿ ಕಾರ್ಮಿಕರತ್ತ ಲಾರಿ ನುಗ್ಗಿ ಬಂದಿದೆ. ಕೂದಲೆಳೆ ಅಂತರದಿಂದ ಕೂಲಿ ಕಾರ್ಮಿಕರು ಪಾರಾಗಿದ್ದು, ಕರ್ತವ್ಯದಲ್ಲಿದ್ದ ಮಹಿಳೆ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ. ಲಾರಿ ವಶಕ್ಕೆ ಪಡೆದು ಚಾಲಕನನ್ನು ಮುಲ್ಕಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ.
ಓವರ್‌ಟೇಕ್ ಭರದಲ್ಲಿ ಮರಕ್ಕೆ ಬಸ್ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು
ಚಿಕ್ಕಬಳ್ಳಾಪುರ: ಓವರ್‌ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ (Bus) ಮರಕ್ಕೆ ಡಿಕ್ಕಿಯಾಗಿ (Accident) ಇಬ್ಬರು ಸಾವಿಗೀಡಾದ ಘಟನೆ ಬಾಗೇಪಲ್ಲಿಯ (Bagepalli) ಪಾತಪಾಳ್ಯ ಬಳಿಯ ನಗರ್ಲು ಕ್ರಾಸ್ ಬಳಿ ನಡೆದಿದೆ.
ಬಸ್ ಚೇಳೂರು ಚಾಕವೇಲು ಪಾತಪಾಳ್ಯ ಮೂಲಕ ಬಾಗೇಪಲ್ಲಿಗೆ ಬರುತ್ತಿತ್ತು. ಈ ವೇಳೆ ಚಾಲಕ ಓವರ್‌ಟೇಕ್ ಮಾಡುವ ವೇಳೆ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು ಹಲವು ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿಂತಾಮಣಿ ಹಾಗೂ ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತಕ್ಕೊಳಗಾದ ಬಸ್‍ನ್ನು ಜೆಸಿಬಿ ಮೂಲಕ ತೆರವು ಮಾಡಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಪಾತಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.