ಮೂಡುಬಿದಿರೆ : ಕಾಲೇಜು ವಿದ್ಯಾರ್ಥಿನಿ ನಾಪತ್ತೆ; ದೂರು ದಾಖಲು!
Twitter
Facebook
LinkedIn
WhatsApp
ಮೂಡುಬಿದಿರೆ: ಇಲ್ಲಿನ ಕಾಲೇಜೊಂದರ ಪ್ರಥಮ ವರ್ಷದ ಬಿಪಿಟಿ ವಿದ್ಯಾರ್ಥಿನಿ ಕಾಣೆಯಾದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.ಬೈಂದೂರು ತಾಲೂಕಿನ ಕೊಲ್ಲೂರಿನ ಆದಿರ (19) ಕಾಣೆಯಾದ ವಿದ್ಯಾರ್ಥಿನಿ.
ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಈಕೆ ಎಂದಿನಂತೆ ಶುಕ್ರವಾರ ಬೆಳಗ್ಗೆ ಸಹಪಾಠಿಗಳ ಜತೆ ಸ್ವರಾಜ್ಯ ಮೈದಾನದಲ್ಲಿರುವ ಕಾಲೇಜಿಗೆ ವಿದ್ಯಾಸಂಸ್ಥೆಯ ಬಸ್ಸಿನಲ್ಲಿ ಬಂದು ಕನ್ನಡ ಭವನದ ಬಳಿ ಇಳಿದಿರುವ ಮಾಹಿತಿ ಇದ್ದು ಅನಂತರ ಅಲ್ಲಿಂದ ಕಾಲೇಜಿಗೆ ಹೋಗದೆ ಕಾಣೆಯಾಗಿರುವುದಾಗಿ ತಿಳಿದುಬಂದಿದೆ.
ಬಿಳಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು ಕಾಣೆಯಾಗುವ ಸಂದರ್ಭ ಕಾಲೇಜಿನ ಸಮವಸ್ತ್ರ ಧರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.